Rohith Sharma: ಭಾರತ ತಂಡದ ಮನಸ್ಥಿತಿ ಬದಲಿಸಿದ ಶ್ರೇಯ ಈ ದಿಗ್ಗಜನಿಗೆ ಸಲ್ಲಬೇಕೆಂದ ರಾಹುಲ್ ದ್ರಾವಿಡ್!
ರೋಹಿತ್ ಶರ್ಮಾ ಭಾರತ ತಂಡದ ವೈಟ್ ಬಾಲ್ ಕ್ರಿಕೆಟ್ ತಂಡದ ಮನಸ್ಥಿಯನ್ನು ಬದಲಿಸಿದರು. ಇದರ ಪರಿಣಾಮವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪ್ರಶಸ್ತಿ ಮೂಡಿಗೇರಿಸಿಕೊಂಡಿತು ಎಂದು ಟೀಮ್ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ರೋಹಿತ್ ಶರ್ಮಾರ ಕೊಡುಗೆಯನ್ನು ಸ್ಮರಿಸಿಕೊಂಡ ರಾಹುಲ್ ದ್ರಾವಿಡ್. -
ನವದೆಹಲಿ: ಭಾರತ ತಂಡದ (Indian Cricket Team) ಮಾಜಿ ಕೋಚ್ ರಾಹುಲ್ ದ್ರಾವಿಡ್ (Rahul Dravid), ರೋಹಿತ್ ಶರ್ಮಾ ((Rohit Sharma) ಅವರ ವೈಟ್ ಬಾಲ್ ಕ್ರಿಕೆಟ್ ಬಗ್ಗೆ ಮಹತ್ವದ ಹೇಳಿಕೆ ನೀಡಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಮನಸ್ಥಿತಿಯನ್ನು ಬದಲಾಯಿಸಿದ ಕೀರ್ತಿ ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ. ಭಾರತ ತಂಡ 2024ರ ಟಿ20 ವಿಶ್ವಕಪ್ ಗೆದ್ದಿತು. ರೋಹಿತ್ ಅವರು ಹೆಚ್ಚು ಆಕ್ರಮಣಕಾರಿ ಶೈಲಿಯ ಆಟವನ್ನು ಆಡಲು ಪ್ರಾರಂಭಿಸಿದಾಗ ಭಾರತ ತಂಡ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು. 2023ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರು ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ ಫೈನಲ್ ತಲುಪಲು ಸಹಾಯ ಮಾಡಿದರು. ಬಳಿಕ ಅವರು 2024ರ ಟಿ20 ವಿಶ್ವಕಪ್‌ನಲ್ಲಿ ಭಾರತವು 17 ವರ್ಷಗಳ ಬಳಿಕ ಪ್ರಶಸ್ತಿ ಮುಡಿಗೆರಿಸಿಕೊಂಡಿತ್ತು.
ಈ ಕುರಿತು ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, "ತಾವು ಕೋಚ್ ಆಗಿ ಬಂದಾಗ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತಂಡ ಆಕ್ರಮಣಕಾರಿಯಾಗಿ ಆಡಬೇಕೆಂಬ ಬಗ್ಗೆ ನಾವು ಚರ್ಚೆ ನಡೆಸಿದ್ದೆವು. ನಾವು ಇದನ್ನು ಪ್ರಯತ್ನಿಸಿದೆವು, ಆರಂಭದಿಂದಲೇ ಇದನ್ನು ಪ್ರಾರಂಭಿಸಿದೆವು ಏಕೆಂದರೆ ಆಟವು ಆ ರೀತಿ ವಿಕಸನಗೊಳ್ಳುತ್ತಿದೆ ಎಂದು ನಾವು ನೋಡಬಹುದು. ಇದರ ಶ್ರೇಯ ರೋಹಿತ್‌ಗೆ ಸಲ್ಲಬೇಕು," ಎಂದು ಹೊಗಳಿದ್ದಾರೆ.
ICC ODI Rankings: ಅಗ್ರ ಸ್ಥಾನಕ್ಕೇರಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ!
"ತಂಡ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಸಾಗಿದೆ. ಆಟವನ್ನು ಹೆಚ್ಚಿನ ಆಕ್ರಮಣಕಾರಿಯಾಗಿ ಮತ್ತು ಹೆಚ್ಚು ಸಕಾರಾತ್ಮಕ ರೀತಿಯಲ್ಲಿ ಆಡುವುದಾಗಿದೆ. ಟಿ20ಐ ಕ್ರಿಕೆಟ್ ಯಾವ ರೀತಿ ಇದೆ ಹಾಗೂ ಅದಕ್ಕೆ ತಕ್ಕಂತೆ ನಮ್ಮ ಮನಸ್ಥಿತಿಯಲ್ಲಿ ನಾವು ಆಡಿದ ಬಗ್ಗೆ ನನಗೆ ತುಂಬಾ ಸಂತೋಷವಿದೆ," ಎಂದು ಮಾಜಿ ಹೆಡ್ ಕೋಚ್ ತಿಳಿಸಿದ್ದಾರೆ.
2024 ರ ವಿಶ್ವಕಪ್ ನಂತರ ಟಿ20ಐ ಕ್ರಿಕೆಟ್ ಮತ್ತು 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆ ಮೂಲಕ ಅವರು ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ 50 ಓವರ್‌ಗಳ ಸ್ವರೂಪದಲ್ಲಿ ಉಳಿದಿದ್ದಾರೆ. ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ತಮ್ಮ ಶೈಲಿಯ ಆಕ್ರಮಣಕಾರಿ ಶೈಲಿಯಲ್ಲಿ ಆಡದೆ ಸನ್ನಿವೇಶಕ್ಕೆ ತಕ್ಕಂತೆ ರನ್ ಗಳಿಸಲು ಆಡಿದ್ದರು.
ಎಲ್ಲರೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಕಾಲು ಎಳೆಯುತ್ತಿದ್ದಾರೆ: ಎಬಿ ಡಿ ವಿಲಿಯರ್ಸ್!
ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ 73 ರನ್‌ಗಳು ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಔಟಾಗದೆ 121 ರನ್‌ಗಳನ್ನು ಗಳಿಸಿ ಭಾರತ ತಂಡದ ಗೆಲುವಿಗೆ ನೆರವು ನೀಡಿದ್ದರು. ಸಿಡ್ನಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ರೋಹಿತ್ ಶರ್ಮಾ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದ್ದರು. ಇನ್ನು ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡಕ್ಕೆ ಮರಳಲಿದ್ದಾರೆ.