ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಪ್ರಾಪ್ತ ಬಾಲಕನನ್ನು ಅಪಹರಿಸಿ, ಬೆತ್ತಲುಗೊಳಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳು; ಪ್ರಕರಣ ದಾಖಲು

crime news: ಅಪ್ರಾಪ್ತ ಬಾಲಕನೊಬ್ಬನನ್ನು ಅಪಹರಿಸಿ, ಬೆತ್ತಲುಗೊಳಿಸಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದೂರಿನ ಪ್ರಕಾರ ಬಾಲಕನನ್ನು ಅಪಹರಣ ಮಾಡಿ, ಬೆದರಿಕೆ, ನಿಂದನೆ, ಬೆತ್ತಲೆಗೊಳಿಸಿ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅಪ್ರಾಪ್ತ ಬಾಲಕನನ್ನು ಬೆತ್ತಲುಗೊಳಿಸಿ ಹಲ್ಲೆ

ಸಾಂದರ್ಭಿಕ ಚಿತ್ರ -

Priyanka P
Priyanka P Jan 2, 2026 8:41 PM

ಲಖನೌ: ಅಪ್ರಾಪ್ತ ಬಾಲಕನನ್ನು ಅಪಹರಿಸಿ, ಕಾರಿನೊಳಗೆ ಕೂಡಿ ಹಾಕಿ, ಬಂದೂಕಿನಿಂದ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಲಕ್ನೋದ ತಲ್ಕಟೋರಾ ಪ್ರದೇಶದಲ್ಲಿ ನಡೆದಿದೆ. ಟಾಲ್ಕಟೋರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ದೂರಿನ ಪ್ರಕಾರ ಬಾಲಕನನ್ನು ಅಪಹರಣ ಮಾಡಿ, ಬೆದರಿಕೆ, ನಿಂದನೆ, ಬೆತ್ತಲೆಗೊಳಿಸಿ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ

ಬಾಲಕನನ್ನು ಅಪಹರಣ ಮಾಡಿ, ಕಾರಿನೊಳಗೆ ಬಂಧಿಸಿದ್ದಾರೆ. ಆತನ ಬಟ್ಟೆ ತೆಗೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ. ಒಬ್ಬಾತ ಬಾಲಕನಿಗೆ ಬಂದೂಕು ತೋರಿಸಿ ಬೆದರಿಸಿದ್ದಾನೆ. ಇನ್ನೊಬ್ಬಾತ ಘಟನೆಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಅಪ್ರಾಪ್ತ ಬಾಲಕ ಆರೋಪಿಯ ಮುಂದೆ ಪದೇ ಪದೇ ತನ್ನನ್ನು ಬಿಟ್ಟುಬಿಡುವಂತೆ ಬೇಡಿಕೊಂಡಿದ್ದಾನೆ. ಇನ್ನು ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಆಸ್ತಿಗಾಗಿ ವಾಯುಪಡೆ ಮಾಜಿ ಅಧಿಕಾರಿಯನ್ನೇ ಹತ್ಯೆ ಮಾಡಿದ ಪುತ್ರರು; ಕೊಲೆ ಬಯಲಾಗಿದ್ದು ಹೇಗೆ?

ಎಟಿಎಂ ಹೊತ್ತೊಯ್ದ ಕಳ್ಳರು

ಪ್ರತ್ಯೇಕ ಘಟನೆಯೊಂದರಲ್ಲಿ ಎಟಿಎಂ ಅನ್ನೇ ದರೋಡೆಕೋರರು ಹೊತ್ತೊಯ್ದಿರುವ ಆಘಾತಕಾರಿ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಇದು ಎಟಿಎಂ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೈಂಡಾ ಬಜಾರ್‌ನಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ಅನ್ನು ದುಷ್ಕರ್ಮಿಗಳು ಸಂಪೂರ್ಣವಾಗಿ ಧ್ವಂಸಗೊಳಿಸಿ, ಯಂತ್ರ ಮತ್ತು ಹಣವನ್ನು ದೋಚಿದ್ದಾರೆ. ಗುರುವಾರ ಮತ್ತು ಶುಕ್ರವಾರ ರಾತ್ರಿಯ ನಡುವೆ ಬಿಂಜಾರ್‌ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಹೊಸ ವರ್ಷದ ರಜಾದಿನಗಳ ಕಾರಣದಿಂದಾಗಿ ಈ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆ ಇದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಸನ್ನಿವೇಶದ ಲಾಭ ಪಡೆದ ದುಷ್ಕರ್ಮಿಗಳು ಎಟಿಎಂ ಕಿಯೋಸ್ಕ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಅವರು ಮೊದಲು ಎಟಿಎಂನ ಗಾಜು ಮತ್ತು ಚೌಕಟ್ಟನ್ನು ಒಡೆದು, ನಂತರ ಇಡೀ ಯಂತ್ರವನ್ನು ಕಿತ್ತು, ಕೆಂಪು ಟೆಂಪೋಗೆ ತುಂಬಿಸಿ ಪರಾರಿಯಾಗಿದ್ದಾರೆ.

ಬೆಳಿಗ್ಗೆ, ಸ್ಥಳೀಯರು ಹಾನಿಗೊಳಗಾದ ಎಟಿಎಂ ಅನ್ನು ಗಮನಿಸಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಎಟಿಎಂ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಯಂತ್ರ ಕಾಣೆಯಾಗಿತ್ತು. ಒಡೆದ ಗಾಜು ಮತ್ತು ಭಗ್ನಾವಶೇಷಗಳು ಹರಡಿಕೊಂಡಿರುವುದು ಕಂಡುಬಂದಿದೆ. ಆರಂಭಿಕ ತನಿಖೆಯಲ್ಲಿ ದುಷ್ಕರ್ಮಿಗಳು ಎಟಿಎಂ ಸಾಗಿಸಲು ಟೆಂಪೋ ಬಳಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಮುರಿದ ಎಟಿಎಂ ಮತ್ತು ಅಪರಾಧಕ್ಕೆ ಬಳಸಲಾದ ಕೆಂಪು ಟೆಂಪೋವನ್ನು ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬಿಟ್ಟು ಹೋಗಿರುವುದನ್ನು ಕಂಡುಕೊಂಡರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಪರಾಧಿಗಳು ಮುರಿದ ಎಟಿಎಂ ಅನ್ನು ಕೆಂಪು ಟೆಂಪೋದಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ. ಆದರೆ, ಎಟಿಎಂನಲ್ಲಿ ನಿಖರವಾದ ಹಣ ಎಷ್ಟು ಎಂಬುದು ಇನ್ನೂ ತಿಳಿದುಬಂದಿಲ್ಲ. ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಂತಹ ಪ್ರದೇಶಗಳಲ್ಲಿನ ಎಟಿಎಂಗಳು ಸಾಮಾನ್ಯವಾಗಿ ರೂ. 5 ಲಕ್ಷದಿಂದ ರೂ. 10 ಲಕ್ಷದವರೆಗೆ ಹಣವನ್ನು ಹೊಂದಿರುತ್ತವೆ.