ಚಳಿಗೆಂದು ಹೊದ್ದ ಕಂಬಳಿಯಿಂದಾಗಿ ನವಜಾತ ಶಿಶು ಸಾವು
ನವಜಾತ ಶಿಶುವೊಂದು ಕಂಬಳಿಯೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಮಿರ್ಜಾಮುರಾದ್ ಪ್ರದೇಶದಲ್ಲಿ ನಡೆದಿದೆ. ಗುರುವಾರ ರಾತ್ರಿ ಮಲಗುವಾಗ ಮಗುವಿಗೆ ಚಳಿಯಾಗುತ್ತದೆ ಎಂದು ಮಗುವನ್ನು ತಾಯಿ ದಪ್ಪ ಕಂಬಳಿಯೊಳಗೆ ಮಲಗಿಸಿದ್ದಳು. ಇದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿರುವುದು ಶುಕ್ರವಾರ ಬೆಳಗ್ಗೆ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ -
ವಾರಾಣಸಿ: ನವಜಾತ ಶಿಶುಗಳನ್ನು (Newborn baby) ಎಷ್ಟು ಜೋಪಾನ ಮಾಡಿದರೂ ಸಾಲುವುದಿಲ್ಲ. ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ಅವುಗಳ ಜೀವಕ್ಕೆ ಕುತ್ತು ತರುತ್ತವೆ ಎನ್ನುವ ಕುರಿತು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇದೀಗ ಇಂತಹ ಒಂದು ಘಟನೆ ಉತ್ತರ ಪ್ರದೇಶದ (Uttar Pradesh) ವಾರಣಾಸಿ (Varanasi) ಜಿಲ್ಲೆಯ ಮಿರ್ಜಾಮುರಾದ್ ಪ್ರದೇಶದಲ್ಲಿ ನಡೆದಿದೆ. ಮಗುವಿಗೆ ಚಳಿಯಾಗುತ್ತದೆ ಎಂದು ಗುರುವಾರ ರಾತ್ರಿ ಮಲಗುವಾಗ ದಪ್ಪ ಹೊದಿಕೆ ಮಗುವಿಗೆ ಹಾಕಿದ್ದೆ ಮಗುವಿನ ಸಾವಿಗೆ ಕಾರಣವಾಗಿದೆ. ಸುಮಾರು ಒಂದು ತಿಂಗಳ ಮಗು ದಪ್ಪ ಹೊದಿಕೆಯಿಂದ ಸಾವನ್ನಪ್ಪಿದೆ.
ರಾತ್ರಿಯಲ್ಲಿ ಮಗುವಿಗೆ ಹಾಲುಣಿಸಿದ್ದ ತಾಯಿ ಕೊರೆಯುವ ಚಳಿ ಇದ್ದುದರಿಂದ ಮಲಗುವ ಮೊದಲು ತನ್ನನ್ನು ಮತ್ತು ನವಜಾತ ಶಿಶುವಿನ ಮೇಲೆ ದಪ್ಪ ಹೊದಿಕೆ ಹಾಕಿದ್ದಳು. ಆದರೆ ತೀವ್ರ ಶೀತದ ವಾತಾವರಣದ ಕಾರಣದಿಂದ ಶುಕ್ರವಾರ ಬೆಳಗ್ಗೆ ಮಗು ಸಾವನ್ನಪ್ಪಿದೆ.
ಅಪ್ರಾಪ್ತ ಬಾಲಕನನ್ನು ಅಪಹರಿಸಿ, ಬೆತ್ತಲುಗೊಳಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳು; ಪ್ರಕರಣ ದಾಖಲು
25 ದಿನಗಳ ಶಿಶುವಿಗೆ ಮಗುವಿನ ತಾಯಿ ರಾತ್ರಿಯಲ್ಲಿ ಹಾಲುಣಿಸಿ ಮಲಗಿಸಿದ್ದಳು. ಬೆಳಗ್ಗೆ ಎದ್ದಾಗ ಮಗು ಪ್ರತಿಕ್ರಿಯಿಸಲಿಲ್ಲ. ಕುಟುಂಬವು ತಕ್ಷಣ ಮಗುವನ್ನು ಮೋಹನ್ಸರೈನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.
ಬೇನಿಪುರ ಗ್ರಾಮವದಲ್ಲಿ ನಡೆದ ಈ ಘಟನೆ ಸಂಪೂರ್ಣ ಗ್ರಾಮವನ್ನೇ ದುಃಖದಲ್ಲಿ ಮುಳುಗಿಸಿದೆ. ಗ್ರಾಮದ ನಿವಾಸಿ ರಾಹುಲ್ ಕುಮಾರ್ ಎರಡು ವರ್ಷಗಳ ಹಿಂದೆ ಸುಧಾ ದೇವಿಯನ್ನು ವಿವಾಹವಾಗಿದ್ದರು. 25 ದಿನಗಳ ಹಿಂದೆ ಅವರ ಮೊದಲ ಮಗುವಿನ ಜನನವಾಗಿದ್ದು, ಇದರಿಂದ ಕುಟುಂಬ ತುಂಬಾ ಸಂತೋಷವಾಗಿತ್ತು. ಮಗು ಜನಿಸಿದಾಗ ಎಲ್ಲರೂ ತುಂಬಾ ಸಂತೋಷಪಟ್ಟರು. ಇಂತಹ ಘಟನೆ ಸಂಭವಿಸುತ್ತದೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ ಎಂದು ಮಗುವಿನ ತಂದೆ ಹೇಳಿದರು. ಶಿಶುವಿನ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಗಳ ಪ್ರಕಾರ ಗಂಗಾ ನದಿಯ ದಡದಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಉಪನ್ಯಾಸಕರಿಂದ ಲೈಂಗಿಕ ಕಿರುಕುಳ, ಹಿರಿಯ ವಿದ್ಯಾರ್ಥಿನಿಯರ ರ‍್ಯಾಗಿಂಗ್; ಯುವತಿ ಆತ್ಮಹತ್ಯೆ
ನವಜಾತ ಶಿಶುಗಳಿಗೆ ದಪ್ಪ ಹೊದಿಕೆಗಳನ್ನು ಹಾಕುವುದು ಅಪಾಯಕಾರಿಯಾಗಿದೆ. ಇದು ಅವುಗಳ ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ. ಶಿಶುಗಳು ಉಸಿರುಗಟ್ಟಲು ಪ್ರಾರಂಭಿಸಿದರೆ ಹೊದಿಕೆಯನ್ನು ತೆಗೆದುಹಾಕಬೇಕು. ಮಗುವಿನ ಮೇಲೆ ಭಾರವಾದ ಹೊದಿಕೆಗಳನ್ನು ಹಾಕಬಾರದು. ಮಲಗಿರುವಾಗ ಮಗುವಿನ ಮುಖವು ತೆರೆದಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ಮಕ್ಕಳ ತಜ್ಞರು ಹೇಳಿದ್ದಾರೆ.