ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಸಹಕರಿಸಿದರೆ ಹೆಚ್ಚುವರಿ ಅಂಕʼʼ: ಜೆಎನ್‌ಯು ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Professor Accused of Assaulting Students: ಲೈಂಗಿಕ ಬೇಡಿಕೆಗಳಿಗೆ ಒಪ್ಪಿಕೊಂಡರೆ ಪರೀಕ್ಷೆಯಲ್ಲಿ ಹೆಚ್ಚುವರಿ ಅಂಕಗಳನ್ನು ನೀಡುವುದಾಗಿ ದೆಹಲಿಯ ಜೆಎನ್‌ಯು ಕಾಲೇಜಿನ ಪ್ರಾಧ್ಯಾಪಕನೊಬ್ಬ ಆಮಿಷ ಒಡ್ಡಿದ ಮತ್ತು ತರಗತಿಗಳಲ್ಲಿ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ವಿವಿ ರಜೆಯ ನಂತರ ತರಗತಿಗಳು ಪುನರಾರಂಭಗೊಂಡಾಗ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿತು.

ಜೆಎನ್‌ಯು ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಸಾಂದರ್ಭಿಕ ಚಿತ್ರ -

Priyanka P
Priyanka P Sep 6, 2026 8:59 PM

ದೆಹಲಿ, ಸೆ. 6: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) 11 ವಿದ್ಯಾರ್ಥಿನಿಯರು ಪ್ರಾಧ್ಯಾಪಕನೊಬ್ಬನ ವಿರುದ್ಧ ಲೈಂಗಿಕ ಕಿರುಕುಳದ (Students Assault) ದೂರು ದಾಖಲಿಸಿದ್ದು, ವಿಶ್ವ ವಿದ್ಯಾಲಯದ ಆಂತರಿಕ ದೂರುಗಳ ಸಮಿತಿ ಈ ಕುರಿತು ತನಿಖೆ ಆರಂಭಿಸಿದೆ. ಮೇಯಲ್ಲಿಯೇ ಜೆಎನ್‌ಯುನ ಐಸಿಸಿ ಸಮಿತಿಗೆ ದೂರು ಸಲ್ಲಿಸಲಾಗಿತ್ತು. ಲೈಂಗಿಕ ಬೇಡಿಕೆಗಳಿಗೆ ಒಪ್ಪಿಕೊಂಡರೆ ಪರೀಕ್ಷೆಯಲ್ಲಿ ಹೆಚ್ಚುವರಿ ಅಂಕ ನೀಡುವುದಾಗಿ ಪ್ರಾಧ್ಯಾಪಕ ಆಮಿಷ ಒಡ್ಡಿದ್ದ ಮತ್ತು ತರಗತಿಗಳಲ್ಲಿ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ವಿಶ್ವ ವಿದ್ಯಾಲಯದ ರಜೆಯ ನಂತರ ಜುಲೈ ಮಧ್ಯ ಭಾಗದಲ್ಲಿ ತರಗತಿ ಪುನರಾರಂಭಗೊಂಡಾಗ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಸಮಿತಿಯು ವಿದ್ಯಾರ್ಥಿನಿಯರ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಆದರೆ ಆರೋಪಿತ ಪ್ರಾಧ್ಯಾಪಕ ಈ ಎಲ್ಲ ಆರೋಪಗಳನ್ನು ಸುಳ್ಳು ಎಂದು ತಿರಸ್ಕರಿಸಿದ್ದಾನೆ.

ವಿಶ್ವ ವಿದ್ಯಾಲಯದ ಹಿರಿಯ ಪ್ರಾಧ್ಯಾಪಕನೊಬ್ಬನ ವಿರುದ್ಧ ಈ ಹಿಂದೆ ದಾಖಲಾಗಿದ್ದ ಲೈಂಗಿಕ ಕಿರುಕುಳದ ಪ್ರಕರಣ ಸದ್ದು ಮಾಡುತ್ತಿದ್ದಂತೆ, ಈ ದೂರು ಕೂಡ ಕೇಳಿಬಂದಿದೆ. 2025ರ ಏಪ್ರಿಲ್‌ನಲ್ಲಿ ಜೆಎನ್‌ಯು ಕಾರ್ಯಕಾರಿ ಮಂಡಳಿಯು ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದ ಒಬ್ಬ ಬೋಧನಾ ಪ್ರಾಧ್ಯಾಪಕ ಸೇರಿ ಒಟ್ಟು ನಾಲ್ಕು ಸಿಬ್ಬಂದಿಯನ್ನು ವಜಾಗೊಳಿಸಿತ್ತು. ಇನ್ನುಳಿದ ಮೂವರು ಸಿಬ್ಬಂದಿ ಭ್ರಷ್ಟಾಚಾರದ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಹೆಸರಿಸಲಾಗಿತ್ತು.

ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 16 ವರ್ಷದ ಕಾಮುಕನನ್ನು ಓಡಿಸಿದ ಬೀದಿನಾಯಿಗಳು

ಪ್ರೊ. ಸ್ವರ್ಣ ಸಿಂಗ್ ಎಂಬುವವರನ್ನು ಜಪಾನ್ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೆಎನ್‌ಯು ವಜಾಗೊಳಿಸಿತು. ಆಂತರಿಕ ದೂರುಗಳ ಸಮಿತಿಯ ಸುದೀರ್ಘ ತನಿಖೆ ಮತ್ತು ಪ್ರಬಲ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಶ್ವ ವಿದ್ಯಾಲಯವು ಈ ನಿರ್ಧಾರ ಕೈಗೊಂಡಿತು.

ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ಪ್ರಾಧ್ಯಾಪಕರೊಂದಿಗೆ ಸಮನ್ವಯ ಸಾಧಿಸುತ್ತಿದ್ದ ಜಪಾನ್‌ನ ಅಧಿಕಾರಿಯು, ಸ್ವರ್ಣ ಸಿಂಗ್ ಜತೆಗಿನ ಕೊನೆಯ ಭೇಟಿಯ ನಂತರ ಅಧಿಕೃತ ದೂರನ್ನು ದಾಖಲಿಸಿದ್ದರು. ಸ್ವರ್ಣ ಸಿಂಗ್ ವಿರುದ್ಧ ಈ ಹಿಂದೆ ಹಲವು ದೂರುಗಳು ದಾಖಲಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಂಗ್ ವಿರುದ್ಧ ಆಡಿಯೋ ರೆಕಾರ್ಡಿಂಗ್ ಸೇರಿ ಸಾಕಷ್ಟು ಸಾಕ್ಷ್ಯಗಳು ಇದ್ದ ಕಾರಣ ವಜಾಗೊಳಿಸಲಾಯಿತು.