Harassment: ಆತನ ಹೆಸರು ವಂದೇ ಮಾತರಂ, ಮಾಡಿದ್ದು ಇಂಥ ಹಲ್ಕಾ ಕೆಲಸ!
Bengaluru: ಬೆಂಗಳೂರಿನಲ್ಲಿ ರಾಜಸ್ಥಾನದ ಬಲೋತ್ರ ಜಿಲ್ಲೆಯ ದಂಪತಿ ವಾಸವಾಗಿದ್ದಾರೆ. ಸ್ವಂತ ಬಿಜಿನೆಸ್ ಮಾಡಲು 4 ಕೋಟಿ ರೂಪಾಯಿ ವರದಕ್ಷಿಣೆಗಾಗಿ ವಂದೇ ಮಾತರಂ ತನ್ನ ಪತ್ನಿಯ ಬಳಿ ಬೇಡಿಕೆ ಇಟ್ಟಿದ್ದಾನೆ. ಹಣ ತರದಿದ್ದಕ್ಕೆ ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ತನ್ನ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ -

ಬೆಂಗಳೂರು: ಆತನ ಹೆಸರು ವಂದೇ ಮಾತರಂ. ತಾಯಿ ಭಾರತಿಯನ್ನು ನಮಿಸುವ ಒಳ್ಳೆಯ ಭಾವನೆಯ ಹೆಸರನ್ನು ಈತನಿಗೆ ತಂದೆ ತಾಯಿಗಳು ಇಟ್ಟಿದ್ದಾರೆ. ಆದರೆ ಮಾಡಿದ್ದು ಮಾತ್ರ ಹಲ್ಕಾ ಕೆಲಸ. ವರದಕ್ಷಿಣೆ (Dowry) ಕೊಡದಿದ್ದಕ್ಕೆ ಈತ ತನ್ನ ಪತ್ನಿಯ ಖಾಸಗಿ ಫೋಟೋಗಳನ್ನು ಆಕೆಯ ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿ ಕಿರುಕುಳ (Harassment) ನೀಡಿದ್ದಾನೆ. ಅದೂ ಒಂದೆರಡಲ್ಲ, 4 ಕೋಟಿ ರೂಪಾಯಿಗಳಿಗೆ ಡಿಮ್ಯಾಂಡ್ ಮಾಡಿದ್ದಾನೆ. ಪತಿ ವಂದೇಮಾತರಂ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ವರದಕ್ಷಿಣೆಗಾಗಿ ಪತ್ನಿಗೆ ಪತಿ ಕಿರುಕುಳ ನೀಡಿರುವ ಆರೋಪ ದಾಖಲಾಗಿದೆ. ಪಶ್ಚಿಮ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿಯ ದೂರು ಆಧರಿಸಿ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ರಾಜಸ್ಥಾನದ ಬಲೋತ್ರ ಜಿಲ್ಲೆಯ ದಂಪತಿ ವಾಸವಾಗಿದ್ದಾರೆ. ಸ್ವಂತ ಬಿಜಿನೆಸ್ ಮಾಡಲು 4 ಕೋಟಿ ರೂಪಾಯಿ ವರದಕ್ಷಿಣೆಗಾಗಿ ವಂದೇ ಮಾತರಂ ತನ್ನ ಪತ್ನಿಯ ಬಳಿ ಬೇಡಿಕೆ ಇಟ್ಟಿದ್ದಾನೆ. ಹಣ ತರದಿದ್ದಕ್ಕೆ ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ತನ್ನ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ್ದಾನೆ. ಈ ವಿಚಾರವನ್ನು ಸಂಬಂಧಿಕರು ಸಂತ್ರಸ್ತೆಗೆ ತಿಳಿಸಿದ್ದಾರೆ. ವಿಚಾರ ಗೊತ್ತಾಗಿ ಪತಿಯನ್ನು ವಿಚಾರಿಸಿದಾಗ ಆಕೆಯ ಮೇಲೆ ಪತಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
17 ವರ್ಷದ ಬಾಲಕನ ಜತೆ ಓಡಿಹೋದ 27 ವರ್ಷದ ಇಬ್ಬರು ಮಕ್ಕಳ ತಾಯಿಯ ಬಂಧನ
ತಿರುವನಂತಪುರಂ: ಕೇರಳದ (Kerala) ಆಲಪ್ಪುಳದ (Alappuzha) 27 ವರ್ಷದ ಇಬ್ಬರು ಮಕ್ಕಳ ತಾಯಿಯೊಬ್ಬಳು 17 ವರ್ಷದ ಅಪ್ರಾಪ್ತ ವಿದ್ಯಾರ್ಥಿಯ ಜತೆ ಓಡಿಹೋದ ಆಘಾತಕಾರಿ ಘಟನೆ ನಡೆದಿದೆ. ಸದ್ಯ ಕೇರಳ ಪೊಲೀಸರು ಆಕೆಯನ್ನು ಕೊಲ್ಲೂರಿನಲ್ಲಿ ಬಂಧಿಸಿದ್ದಾರೆ. ಸುಮಾರು 12 ದಿನಗಳ ಹಿಂದೆ ಬಾಲಕ ನಾಪತ್ತೆಯಾಗಿರುವ ಕುರಿತು ಆಲಪ್ಪುಳದ ಚೆರ್ತಲಾ ಬಳಿಯ ಪಲ್ಲಿಪುರಂನಲ್ಲಿ ದೂರು ದಾಖಲಾಗಿತ್ತು. ಬಂಧಿತ ಮಹಿಳೆಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಪ್ರಾಪ್ತ ಬಾಲಕನನ್ನು ಕರೆದುಕೊಂಡು ಆಲಪ್ಪುಳದಿಂದ 600 ಕಿ.ಮೀ. ದೂರದ ಕರ್ನಾಟಕದ ಕೊಲ್ಲೂರಿನಲ್ಲಿ ಒಡಾಡಿದ್ದಳು. ಬಾಲಕನ ಪೋಷಕರು ಆತ ಕಾಣೆಯಾದ ಬಗ್ಗೆ ಚೆರ್ತಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆಯಲ್ಲಿ, ಮಹಿಳೆ ತಾನು ಬಾಲಕನೊಂದಿಗೆ ಜೀವನ ನಡೆಸಲು ಬಯಸಿದ್ದೆ. ಆದ್ದರಿಂದ ಪತಿಯನ್ನು ಬಿಟ್ಟು ಓಡಿಹೋದೆ ಎಂದು ತಿಳಿಸಿದ್ದಾಳೆ. ಆಕೆ ತನ್ನ ಮೊಬೈಲ್ ಫೋನ್ ಬಳಸದಿರುವುದರಿಂದ ಪೊಲೀಸರಿಗೆ ಆಕೆಯನ್ನು ಪತ್ತೆಹಚ್ಚುವುದು ಕಷ್ಟವಾಗಿತ್ತು.
ಬೆಂಗಳೂರಿಗೆ ತೆರಳಿರಬಹುದೆಂದು ಶಂಕಿಸಿದ ಪೊಲೀಸರು ಹಲವು ಸ್ಥಳಗಳಲ್ಲಿ ಶೋಧ ನಡೆಸಿದರೂ ವಿಫಲರಾದರು. ಎರಡು ದಿನಗಳ ಹಿಂದೆ ಮಹಿಳೆ ಕೊಲ್ಲೂರಿನಿಂದ ಆಲಪ್ಪುಳದ ಸಂಬಂಧಿಯೊಬ್ಬರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದರಿಂದ ಆಕೆಯ ಸ್ಥಳವನ್ನು ಪತ್ತೆ ಹಚ್ಚಲಾಯಿತು. ಸೋಮವಾರ ಆಕೆಯನ್ನು ಆಲಪ್ಪುಳಕ್ಕೆ ಕರೆತಂದು, ಚೆರ್ತಲಾದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಕೊಟ್ಟರಕ್ಕರ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬಾಲಕನನ್ನು ಆತನ ಪೋಷಕರೊಂದಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: Physical Abuse: ಬೆಂಗಳೂರಿನ ನಡುರಸ್ತೆಯಲ್ಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ