Robbery Case: ಗನ್ ತೋರಿಸಿ ನಿವೃತ್ತ NSG ಸಿಬ್ಬಂದಿಯ ಮನೆಯಲ್ಲಿ ದರೋಡೆ; ಆರೋಪಿಯ ಬಂಧನ
ನಿವೃತ್ತ NSG ಸಿಬ್ಬಂದಿಯೊಬ್ಬರ ಮನೆಯಲ್ಲಿ ಶನಿವಾರ ನಡೆದ 60 ಲಕ್ಷ ರೂ. ಮೌಲ್ಯದ ದರೋಡೆ (Robbery) ಪ್ರಕರಣಕ್ಕೆ ಸಂಬಂಧಿಸಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ 35 ವರ್ಷದ ಆರೋಪಿ ಅಲೋಕ್ ಕುಮಾರ್ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ರಾಷ್ಟ್ರೀಯ ಭದ್ರತಾ ಪಡೆ (NSG) ಸಿಬ್ಬಂದಿಯಾದ 86 ವರ್ಷದ ಭೀಮಸೇನ್, ಈಗ ಕಿನಾರಿ ಮಾರ್ಕೆಟ್‌ನಲ್ಲಿ ಒಡವೆ ವ್ಯಾಪಾರ ನಡೆಸುತ್ತಿದ್ದಾರೆ. ಶನಿವಾರ ಅವರು ತನ್ನ ಮಗ ಸಂದೀಪ್, ಸೊಸೆ ನೀಲಂ ಮತ್ತು ಮೊಮ್ಮಗನೊಂದಿಗೆ ಮನೆಯಲ್ಲಿದ್ದಾಗ ದರೋಡೆ ನಡೆದಿದೆ.


ನವದೆಹಲಿ: ದೆಹಲಿಯ (Delhi) ಚಾಂದಿನಿ ಚೌಕ್‌ನಲ್ಲಿ (Chandni Chowk) ನಿವೃತ್ತ NSG ಸಿಬ್ಬಂದಿಯೊಬ್ಬರ ಮನೆಯಲ್ಲಿ ಶನಿವಾರ ನಡೆದ 60 ಲಕ್ಷ ರೂ. ಮೌಲ್ಯದ ದರೋಡೆ (Robbery) ಪ್ರಕರಣಕ್ಕೆ ಸಂಬಂಧಿಸಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ 35 ವರ್ಷದ ಆರೋಪಿ ಅಲೋಕ್ ಕುಮಾರ್ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಪೌರ ಸಂಸ್ಥೆಯ ಉದ್ಯೋಗಿಯ ಚಾಲಕನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ರಾಷ್ಟ್ರೀಯ ಭದ್ರತಾ ಪಡೆ (NSG) ಸಿಬ್ಬಂದಿಯಾದ 86 ವರ್ಷದ ಭೀಮಸೇನ್, ಈಗ ಕಿನಾರಿ ಮಾರ್ಕೆಟ್‌ನಲ್ಲಿ ಒಡವೆ ವ್ಯಾಪಾರ ನಡೆಸುತ್ತಿದ್ದಾರೆ. ಶನಿವಾರ ಅವರು ತನ್ನ ಮಗ ಸಂದೀಪ್, ಸೊಸೆ ನೀಲಂ ಮತ್ತು ಮೊಮ್ಮಗನೊಂದಿಗೆ ಮನೆಯಲ್ಲಿದ್ದಾಗ ದರೋಡೆ ನಡೆದಿದೆ. “ಸುನಿಲ್ ಎಂಬಾತ ಮನೆಯ ಬಾಗಿಲಿಗೆ ಬಂದು ಕುಟುಂಬದ ಸದಸ್ಯರ ಹೆಸರು ಕರೆದಿದ್ದಾನೆ. ಬಾಗಿಲು ತೆರೆದ ತಕ್ಷಣ, ಮೂವರು ಮಾಸ್ಕ್ ಧರಿಸಿದ ದರೋಡೆಕಾರರು ಶಸ್ತ್ರಸಜ್ಜಿತರಾಗಿ ಒಳಗೆ ನುಗ್ಗಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದರೋಡೆಕಾರರು ಕೆಲವು ದಾಖಲೆಗಳಿಗಾಗಿ ಮನೆಯನ್ನು ಶೋಧಿಸಿದರು. ಮೊಮ್ಮಗ ತಡೆಯಲು ಯತ್ನಿಸಿದಾಗ, ಒಬ್ಬ ದರೋಡೆಕಾರ ಗನ್ ತೋರಿಸಿ, ಆತನ ಕೈಗಳನ್ನು ಕಟ್ಟಿ, ಗಮ್ ಟೇಪ್‌ನಿಂದ ಬಾಯಿ ಮುಚ್ಚಿದ್ದಾನೆ. “ಆರೋಪಿಗಳು ಮನೆಯೆಲ್ಲಾ ಹುಡುಕಾಡಿ, 50 ಲಕ್ಷ ರೂ. ಮೌಲ್ಯದ ಒಡವೆ ಮತ್ತು ರತ್ನಗಳನ್ನು ಹಾಗೂ 3,550 ಡಾಲರ್ ನಗದನ್ನು ಕದ್ದಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Frude Case: ಸಬ್-ಇನ್ಸ್‌ಪೆಕ್ಟರ್‌ನಿಂದ 2 ಕೋಟಿ ರೂ. ಕಳವು: ಗರ್ಲ್‌ಫ್ರೆಂಡ್ ಜತೆ ಗೋವಾ, ಮನಾಲಿ ಟ್ರಿಪ್
ಪರಾರಿಯಾಗುವ ಮುನ್ನ, ದರೋಡೆಕಾರರು ಕುಟುಂಬವನ್ನು ಅಡುಗೆಮನೆಯಲ್ಲಿ ಕೂಡಿಹಾಕಿ, ಬಾಗಿಲನ್ನು ಹೊರಗಡೆಯಿಂದ ಲಾಕ್ ಮಾಡಿದ್ದರು. ದರೋಡೆಕಾರರು ತಪ್ಪಿಸಿಕೊಂಡ ಬಳಿಕ, ಕುಟುಂಬವು ನೆರೆಹೊರೆಯವರ ಸಹಾಯದಿಂದ ಬಿಡಿಸಿಕೊಂಡು, ಪೊಲೀಸರಿಗೆ ಮಾಹಿತಿ ನೀಡಿತು. ನೋಯ್ಡಾದಲ್ಲಿ ಬಂಧಿತನಾದ ಅಲೋಕ್‌ನಿಂದ ದರೋಡೆಗೆ ಬಳಸಿದ ಶಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಕದ್ದ ವಸ್ತುಗಳು ಜಪ್ತಿಯಾಗಿಲ್ಲ. ಉಳಿದ ಆರೋಪಿಗಳನ್ನು ಬಂಧಿಸಲು ತನಿಖೆ ಮುಂದುವರಿದಿದೆ.