ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಒಂದೂವರೆ ವರ್ಷದ ಮಗುವನ್ನು ನೆಲಕ್ಕೆ ಕುಕ್ಕಿ ಕೊಂದವನಿಗೆ ನರಕ ತೋರಿಸಿದ ಪೊಲೀಸರು; ಒಂದು ಹನಿ ನೀರಿಗಾಗಿ ಅಂಗಾಲಾಚಿದ ರಾಕ್ಷಸ

Firozabad Horror: ಉತ್ತರ ಪ್ರದೇಶದ ಫಿರೋಝಾಬಾದ್‌ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಬಾಲಕನನ್ನು ವಿರಾಜ್‌ ಎಂಬಾತ ನೆಲಕ್ಕೆ ಕುಕ್ಕಿ ಕುಕ್ಕಿ ಕೊಂದಿರುವ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಭಾರಿ ಆಕ್ರೋಶ ವ್ಯಕ್ತವಾಗಿದೆ. ತಲೆ ಮರೆಸಿಕೊಂಡಿರುವ ವಿರಾಜ್‌ನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಒಂದೂವರೆ ವರ್ಷದ ಮಗುವನ್ನು ನೆಲಕ್ಕೆ ಕುಕ್ಕಿ ಕೊಂದವನಿಗೆ ಗುಂಡೇಟು

ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಕ್ರೂರ ಕೃತ್ಯ ಮತ್ತು ವಿರಾಜ್‌ -

Ramesh Ballamoole
Ramesh Ballamoole May 31, 2026 4:01 PM

ಲಖನೌ, ಮೇ 31: ಮಹಿಳೆ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯ ಒಂದೂವರೆ ವರ್ಷದ ಮಗನನ್ನು ನೆಲಕ್ಕೆ ಕುಕ್ಕಿ ಕುಕ್ಕಿ ಕೊಂದವನಿಗೆ ಉತ್ತರ ಪ್ರದೇಶ ಪೊಲೀಸರು ಸರಿಯಾದ ಪಾಠ ಕಲಿಸಿದ್ದಾರೆ. ತಲೆಮರೆಸಿಕೊಳ್ಳಲು ಯತ್ನಿಸಿದ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ನೆಲಕ್ಕೆ ಬಿದ್ದು ಒದ್ದಾಡಿದ್ದಾನೆ (Firozabad Horror). ಗಾಯಗೊಂಡು ಹನಿ ನೀರಿಗಾಗಿ ಪರಿತಪಿಸಿದ್ದಾನೆ. ಬಾಲಕ ಅನುಭವಿಸಿದ ನೋವಿನ ಮುಂದ ಇದು ಏನೇನೂ ಅಲ್ಲ, ಆತ ನೀರು ಸಿಗದೆ ಅಲ್ಲೇ ಸಾಯಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ದುರುಳನ ವಿಡಿಯೊ ವೈರಲ್‌ (Viral Video) ಆಗಿದೆ.

ಉತ್ತರ ಪ್ರದೇಶದ ಫಿರೋಝಾಬಾದ್‌ ಜಿಲ್ಲೆಯಲ್ಲಿ ಮುದ್ದು ಕಂದಮ್ಮನ ಮೇಲೆ ವ್ಯಕ್ತಿಯೊಬ್ಬ ತೋರಿದ ಕ್ರೌರ್ಯ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಾಲಕನ ತಾಯಿಯನ್ನು ಪ್ರೀತಿಸುತ್ತಿದ್ದ ದುಷ್ಟ ವಿರಾಜ್‌ ತಮ್ಮ ಮದುವೆಗೆ ಆಕೆಯೇ ಮಗು ಒಂದೂವರೆ ವರ್ಷದ ಆರವ್‌ನೇ ಅಡ್ಡಿ ಎಂದು ಆತನನ್ನು ಹಲವು ಬಾರಿ ನೆಲಕ್ಕೆ ಬೀಸಿ ಒಗೆದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಇದೀಗ ಪೊಲೀಸರು ಆತನ ಮೇಲೆ ಗುಂಡಿನ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.ಸದ್ಯ ಗಾಯಗೊಂಡು ಬಿದ್ದಿರುವ ವಿರಾಜ್‌ ಆಸ್ಪತ್ರೆಗೆ ಸಾಗಿಸುವಾಗ ʼʼನೀರು ಕೊಡಿʼʼ ಎಂದು ಬೇಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಘಟನೆ ವಿವರ

ರತಿ ಮತ್ತು ಸುಮಿತ್‌ ದಂಪತಿಯ ಮಗನೇ ಮೃತ ಆರವ್‌. ರತಿಗೆ ಮದುವೆಯಾಗಿದ್ದರೂ ವಿರಾಜ್‌ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಆತನ ಮನೆಯವರು ಆಕೆಗೆ ಮಗನಿರುವುದರಿಂದ ಈ ಸಂಬಂಧವನ್ನು ಒಪ್ಪಿರಲಿಲ್ಲ. ಹೀಗಾಗಿ ತಮ್ಮ ಮದುವೆಗೆ ಆರವ್‌ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿ ವಿರಾಜ್‌ ಕೊಲೆ ಮಾಡಿದ್ದಾನೆ. ಮಗುವನ್ನು ಎತ್ತಿಕೊಂಡು ಬಂದು ರಸ್ತೆಗೆ ಬಲವಾಗಿ ಹಲವರು ಬಾರಿ ಕುಕ್ಕಿದ್ದಾನೆ. ಬಳಿಕ ತಲೆ ಮರೆಸಿಕೊಂಡಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದ ಆರವ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದ.

ಘಟನೆಯ ವಿಡಿಯೊ:



ಎನ್‌ಕೌಂಟರ್‌

ತನಿಖೆ ಕೈಗೆತ್ತಿಕೊಂಡ ಪೊಲೀಸರು ವಿರಾಜ್‌ಗಾಗಿ ತೀವ್ರ ಹುಡುಕಾಟ ಆರಂಭಿಸಿದರು. ಆತನ ಪತ್ತೆಗಾಗಿ 4 ತಂಡಗಳನ್ನು ರಚಿಸಲಾಯಿತು. ಮಣಿಪುರ ರಸ್ತೆಯ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಎನ್ನುವ ಮಾಹಿತಿ ಎಸ್‌ಪಿ ರವಿ ಶಂಕರ್‌ ಅವರಿಗೆ ಲಭಿಸಿತು. ಕೂಡಲೇ ಅಲ್ಲಿಗೆ ಧಾವಿಸಿ ಪೊಲೀಸರು ಆತನನ್ನು ಸುತ್ತುವರಿದರು. ವಿರಾಜ್‌ ಬಳಿ ಅಪರಾಧದ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಕೊನೆಗೆ ಪೊಲೀಸರು ಗತ್ಯಂತರವಿಲ್ಲದೆ ನಡೆಸಿದ ಪ್ರತಿದಾಳಿಯಲ್ಲಿ ವಿರಾಜ್‌ ಕಾಲಿಗೆ ಗಾಯವಾಯಿತು.

ಕುಟುಂಬ ಸದಸ್ಯರ ಸಾವಿನಿಂದ ಎದೆ ಬಡಿದುಕೊಂಡು ಗೋಳಾಡಿದ ಮಹಿಳೆ; ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಆಗಿದ್ದೇ ಬೇರೆ!

ಆತನನ್ನು ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಸ್ಟ್ರೆಚರ್‌ನಲ್ಲಿ ಮಲಗಿ ಆತ ನೀರಿಗಾಗಿ ಅಂಗಲಾಚುತ್ತಿರುವ ವಿಡಿಯೊ ಇದೀಗ ವೈರಲ್‌ ಆಗಿದೆ. ಆತನಿಗೆ ತಕ್ಕ ಶಾಸ್ತಿಯಾಗಿದೆ. ಪೊಲೀಸರು ಸ್ಥಳದಲ್ಲೇ ಆತನನ್ನು ಹತ್ಯೆ ಮಾಡಬೇಕಿತ್ತು ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.