ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಸಿಂಗಾಪುರದಿಂದ ದೀಪಾವಳಿಗೆ ಮನೆಗೆ ಬಂದಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ
ಫರಿದಾಬಾದ್ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಇಬ್ಬರು ವ್ಯಕ್ತಿಗಳ ಮಧ್ಯೆ ಗಲಾಟೆ ನಡೆದಿದ್ದು, ದುರಂತದಲ್ಲಿ ಅಂತ್ಯಗೊಂಡಿದೆ. ‘ಟೆಕ್ ಮಹೀಂದ್ರಾ’ ಕಂಪನಿಯ ಮಾಜಿ ಬಿಸಿನೆಸ್ ಹೆಡ್ ಒಬ್ಬರನ್ನು ಅವರ ನೆರೆಯ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯು ಸಂತ್ರಸ್ತರ ಮೇಲೆ ಸುಮಾರು 15 ಸುತ್ತು ಗುಂಡುಗಳನ್ನು ಹಾರಿಸಿದ್ದಾನೆ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು -
ಚಂಡೀಗಢ: ಹರಿಯಾಣದ ಫರೀದಾಬಾದ್ನಲ್ಲಿ ಪಾರ್ಕಿಂಗ್ ವಿಷಯಕ್ಕೆ ಶುರುವಾದ ಸಣ್ಣ ಜಗಳ ತಾರಕಕ್ಕೇರಿದ ಬೆನ್ನಲ್ಲೇ, ಆಗ (Crime News) ತಾನೇ ಸಿಂಗಾಪುರದಿಂದ ಮದುವೆಗಾಗಿ ಆಗಮಿಸಿದ್ದ ಟೆಕ್ ಮಹೀಂದ್ರಾ ಕಂಪನಿಯ ಮಾಜಿ ಬಿಸಿನೆಸ್ ಹೆಡ್ ಒಬ್ಬರನ್ನು ನೆರೆಯ ವ್ಯಕ್ತಿಯೊಬ್ಬ 15 ಬಾರಿ ಗುಂಡಿಕ್ಕಿ ಬರ್ಬರವಾಗಿ (Murder) ಕೊಂದಿದ್ದಾನೆ ಎಂದು ಹೇಳಲಾಗಿದೆ. ಮೃತ ವ್ಯಕ್ತಿಯನ್ನು 42 ವರ್ಷದ ಪರಮ್ ಜೀತ್ ಧಂಕರ್ ಎಂದು ಗುರುತಿಸಲಾಗಿದೆ. ಅವರ ಮೇಲೆ ಏಳು ಬಾರಿ ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ.
ಪರಮ್ ಜೀತ್ ಧಂಕರ್ ಸಿಂಗಾಪುರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ತಮ್ಮ ಸೋದರಳಿಯನ ಮದುವೆಗೆ ಮತ್ತು ದೀಪಾವಳಿಗೆಂದು ನವೆಂಬರ್ 5ರಂದು ಭಾರತಕ್ಕೆ ಬಂದಿದ್ದರು. ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ಮೋನು ಶರ್ಮಾ ವಾಸಿಸುತ್ತಿದ್ದನು. ಪೊಲೀಸರ ಮಾಹಿತಿ ಪ್ರಕಾರ, ಸೆಕ್ಟರ್ 21ಸಿ ಪ್ರದೇಶದ ಕಟ್ಟಡ ಸಂಖ್ಯೆ 641ರ ಮೊದಲ ಮಹಡಿಯಲ್ಲಿ ಪರಮ್ ಜೀತ್ ತಮ್ಮ ಪತ್ನಿ, ಮಗ ಶೌರ್ಯ ಮತ್ತು ಮಗಳೊಂದಿಗೆ ವಾಸವಿದ್ದರು. ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ಮೋಹನ ಶರ್ಮಾ ಅಲಿಯಾಸ್ ಮೋನು ಶರ್ಮಾ ವಾಸವಿದ್ದನು. ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಪರಮ್ ಜೀತ್ ಜಿಮ್ನಿಂದ ಮನೆಗೆ ಮರಳಿದಾಗ, ತಮಗೆ ನಿಗದಿಪಡಿಸಿದ ಪಾರ್ಕಿಂಗ್ ಜಾಗದಲ್ಲಿ ಮೋನು ಶರ್ಮಾ ತನ್ನ ಕಾರನ್ನು ನಿಲ್ಲಿಸಿರುವುದು ಕಂಡುಬಂದಿದೆ. ಈ ವೇಳೆ ಕಾರನ್ನು ಬೇರೆಡೆ ನಿಲ್ಲಿಸುವಂತೆ ಪರಮ್ ಜೀತ್ ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕೆ ಒಪ್ಪದ ಆರೋಪಿ ಮೋನು ಶರ್ಮಾ ತೀವ್ರ ಗಲಾಟೆ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಗಲಾಟೆ ವಿಕೋಪಕ್ಕೆ ತಿರುಗಿ ಮೋನು ಶರ್ಮಾ ತಕ್ಷಣವೇ ತನ್ನ ಬಳಿ ಇದ್ದ ಪಿಸ್ತೂಲ್ನಿಂದ ಪರಮ್ ಜೀತ್ ಮೇಲೆ ಸುಮಾರು 15 ರಿಂದ 16 ಸುತ್ತು ಭೀಕರ ಗುಂಡಿನ ದಾಳಿ ನಡೆಸಿದ್ದಾನೆ. ಇದರಲ್ಲಿ ಸುಮಾರು 8 ರಿಂದ 9 ಗುಂಡುಗಳು ಪರಮ್ ಜೀತ್ ಅವರಿಗೆ ತಗುಲಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.
Tragic #Faridabad Parking Dispute Murder 🚨 #CCTV Found of #ParamjitDhankhar #TechMahindra’s Asia Head, was fatally shot 15-16 times in Faridabad over a parking row. The accused, Mohan Sharma, has been arrested. #JusticeForParamjit @policefaridabad @cmofficeup @dgpharyan https://t.co/VV3rJY8d1F
— jarvis ☠️ (@Vishii14) November 11, 2026
ಪೊಲೀಸ್ ತನಿಖೆ ವೇಳೆ ಎರಡು ಕುಟುಂಬಗಳ ನಡುವೆ ಕಳೆದ ಕೆಲ ದಿನಗಳ ಹಿಂದೆ ಗಲಾಟೆ ನಡೆದಿತ್ತು ಎಂಬುದು ತಿಳಿದುಬಂದಿದೆ. ಆರೋಪಿ ಮೋನು ಶರ್ಮಾ ತನ್ನ ಸಾಕು ನಾಯಿಯನ್ನು ಪ್ರತಿದಿನ ಪಾರ್ಕಿಂಗ್ ಪ್ರದೇಶಕ್ಕೆ ಕರೆತಂದು ಮಲ-ಮೂತ್ರ ವಿಸರ್ಜನೆ ಮಾಡಿಸುತ್ತಿದ್ದ. ಇದಕ್ಕೆ ಪರಮ್ ಜೀತ್ ಅವರ ಮಗ ಶೌರ್ಯ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಘಟನೆಗೆ 4 ರಿಂದ 5 ದಿನಗಳ ಮುಂಚೆಯೂ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು ಮತ್ತು ಆರೋಪಿಯು ಪರಮ್ ಜೀತ್ ಮಗ ಶೌರ್ಯನನ್ನು ನಿಂದಿಸಿದ್ದ ಎನ್ನಲಾಗಿದೆ.
ದುಲಾರ್ಚಂದ್ ಕೊಲೆ ಪ್ರಕರಣ: ಅನಂತ್ ಸಿಂಗ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಕೃತ್ಯ ಎಸಗಿದ ಬಳಿಕ ಆರೋಪಿ ಮೋನು ಶರ್ಮಾ ತನ್ನ ಕುಟುಂಬದೊಂದಿಗೆ ಪರಾರಿಯಾಗಿದ್ದಾನೆ. ಮೃತ ಪರಮ್ ಜೀತ್ ಅವರ ಪುತ್ರ ಶೌರ್ಯ ನೀಡಿದ ದೂರಿನ ಆಧಾರದ ಮೇಲೆ, ಮೋನು ಶರ್ಮಾ, ಆತನ ಪತ್ನಿ ದಿವ್ಯಾ, ಮಗ ಮಯಾಂಕ್, ಮಗಳು ನೈನಾ ಮತ್ತು ಸಹೋದರ ಹೇತ್ರಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪರಮ್ ಜೀತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮುಖ್ಯ ಆರೋಪಿ ಮೋನು ಶರ್ಮಾನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಎಂದು ಸೂರಜ್ ಕುಂಡ್ ಪೊಲೀಸ್ ಠಾಣೆಯ ಎಸ್ಎಚ್ಒ ಪ್ರಹ್ಲಾದ್ ಸಿಂಗ್ ತಿಳಿಸಿದ್ದಾರೆ.