Bomb Threat: ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ
ಹಲಸೂರು (Halasuru) ಬಳಿ ಇರುವ ಇಟಲಿ ರಾಯಭಾರಿ ಕಚೇರಿಗೆ (Italian Embassy) ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ಜನವರಿ 30ರಂದು ಬಂದಿದ್ದ ಬೆದರಿಕೆ ಮೇಲ್ ತಡವಾಗಿ ಬೆಳಕಿಗೆ ಬಂದಿದೆ. ಟಾಲಿಯನ್ ಕಾನ್ಸುಲೇಟ್‌ನ ಸೆಕ್ಯೂರಿಟಿ ಮ್ಯಾನೇಜರ್ ಜಿಯೋಡೊಮೆನಿಕ್ ಒ ಮಿಲಾನೋ ಎಂಬವರು ಹಲಸೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಫೆ.05: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಮತ್ತೆ ಹುಸಿ ಬಾಂಬ್ ಬೆದರಿಕೆ (Bomb Threat) ಸದ್ದು ಮಾಡುತ್ತಿದೆ. ಹಲಸೂರು (Halasuru) ಬಳಿ ಇರುವ ಇಟಲಿ ರಾಯಭಾರಿ ಕಚೇರಿಗೆ (Italian Embassy) ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ಜನವರಿ 30ರಂದು ಬಂದಿದ್ದ ಬೆದರಿಕೆ ಮೇಲ್ ತಡವಾಗಿ ಬೆಳಕಿಗೆ ಬಂದಿದೆ. 5 ಆರ್‌ಡಿಎಕ್ಸ್ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ ಎಂದು ಇ-ಮೇಲ್ ಮೂಲಕ ಬೆದರಿಕೆ ಒಡ್ಡಿದ್ದಾರೆ.
ಇಟಾಲಿಯನ್ ಕಾನ್ಸುಲೇಟ್‌ನ ಸೆಕ್ಯೂರಿಟಿ ಮ್ಯಾನೇಜರ್ ಜಿಯೋಡೊಮೆನಿಕ್ ಒ ಮಿಲಾನೋ ಎಂಬವರು ಹಲಸೂರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲಸೂರು ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗೆ ಬಾಂಬ್ ಬೆದರಿಕೆಗಳು ಹೆಚ್ಚುತ್ತಿವೆ. ಜನವರಿ ಕೊನೆಯ ವಾರದಲ್ಲಿ ರಾಜಧಾನಿಯ ರಾಜ್ಯಪಾಲರ ಕಚೇರಿಗೇ ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಅದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಿವಾಸಗಳಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ಪೊಲೀಸರು ಇವುಗಳ ತನಿಖೆ ನಡೆಸುತ್ತಿದ್ದಾರೆ.
ಬೆದರಿಕೆಗೆ ಅಂಜಿ ಗಂಡ ಆತ್ಮಹತ್ಯೆ; ಆರೋಪಿಗಳನ್ನು ಬಂಧಿಸದ ಪೊಲೀಸರ ವಿರುದ್ಧ ನೊಂದ ಪತ್ನಿ ಆಕ್ರೋಶ
ನಮ್ಮ ಮೆಟ್ರೋ ದರ ಏರಿಕೆ
ಬೆಂಗಳೂರು: ಒಂದು ವರ್ಷದ ಹಿಂದಷ್ಟೇ ಪ್ರಯಾಣ ದರವನ್ನು 71.5% ರಷ್ಟು ಹೆಚ್ಚಳ ಮಾಡಿದ್ದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (BMRCL) ಈಗ 5% ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ ಬಿಎಂಆರ್‌ಸಿಎಲ್ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು 5% ರಷ್ಟು ಏರಿಸಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಬಿಎಂಆರ್‌ಸಿಎಲ್ ಪ್ರತಿ ವರ್ಷ 5% ರಷ್ಟು ಪ್ರಯಾಣ ದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ (FFC) 2025ರಲ್ಲಿ ಶಿಫಾರಸು ಮಾಡಿತ್ತು. ಸೋಮವಾರ (ಫೆ.2) ಕರ್ನಾಟಕ ಸರ್ಕಾರ (Karnataka Govt) ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು ಹೊಸ ದರ ಮುಂದಿನ ಸೋಮವಾರ(ಫೆ.9) ಜಾರಿಗೆ ಬರಲಿದೆ. ಕನಿಷ್ಠ 1 ರೂ. ಹಾಗೂ ಗರಿಷ್ಠ 5 ರೂ. ಹೆಚ್ಚಳವಾಗಲಿದೆ. ಕನಿಷ್ಠ 10 ಇರುವ ದರ 11ಕ್ಕೆ, ಗರಿಷ್ಠ 90 ಇರುವ ದರ 95ಕ್ಕೆ ಏರಿಕೆಯಾಗಲಿದೆ.
ದರ ನಿಗದಿ ಸಮಿತಿ ಕಳೆದ ವರ್ಷ 51.55% ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಆದರೆ ಬಿಂಆರ್‌ಸಿಎಲ್ 101.5% ರಷ್ಟು ಹೆಚ್ಚಳ ಮಾಡಿ 2025ರ ಫೆ.9 ರಂದು ಜಾರಿ ಮಾಡಿತ್ತು. ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಪ್ರಯಾಣಿಕರ ಸಂಖ್ಯೆ ದಿಢೀರ್ ಕುಸಿತವಾದ ಬೆನ್ನಲ್ಲೇ ನಾಲ್ಕು ದಿನಗಳ ಬಳಿಕ ದರವನ್ನು 30% ಇಳಿಸಿತ್ತು.