ಸಿಯಾ ಗೋಯಲ್ ಹುಟ್ಟುಹಬ್ಬದಂದು ಆಕೆಯ ಹೆಸರನ್ನು ಬೆನ್ನಿನ ಮೇಲೆ ಹಚ್ಚೆ ಹಾಕಿ ಸರ್‌ಪ್ರೈಸ್ ನೀಡಿದ್ದ ಕೇತನ್ ಅಗರ್ವಾಲ್: ವಿಡಿಯೊ ವೈರಲ್
Ketan Agarwal Case: ಜೂನ್ 19ರಂದು ಮಹಾರಾಷ್ಟ್ರದ ಪುಣೆಯ ಲೋಹಗಡ್ ಕೋಟೆಯ ಮೇಲಿನಿಂದ ಬಿದ್ದು ಯುವ ಉದ್ಯಮಿ ಕೇತನ್ ಅಗರ್ವಾಲ್ ಮೃತಪಟ್ಟಿದ್ದರು. ಆರಂಭದಲ್ಲಿ ಕೇತನ್ ಅಗರ್ವಾಲ್ ಸಾವನ್ನು ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ ಕೇತನ್ ಮದುವೆಯಾಗಬೇಕಿದ್ದ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ತಳ್ಳಿದ್ದರು ಎನ್ನುವುದು ಬಳಿಕ ಗೊತ್ತಾಗಿತ್ತು. ಇದೀಗ ಈ ಬಗ್ಗೆ ಒಂದೊಂದೆ ವಿವರ ಹೊರ ಬರುತ್ತಿದೆ.
ಕೇತನ್, ಹಚ್ಚೆ ಮತ್ತು ಸಿಯಾ ಗೋಯಲ್ (ಸಂಗ್ರಹ ಚಿತ್ರ) -
ಮುಂಬೈ, ಸೆ. 29: ಜೂನ್ 19ರಂದು ನಡೆದ ಮಹಾರಾಷ್ಟ್ರದ (Maharashtra) ಪುಣೆ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 26 ವರ್ಷದ ಯುವಕನ ಕೊಲೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಮಾಹಿತಿ ಹೊರಬರುತ್ತಿದೆ. ಕೇತನ್ ತನ್ನ ಭಾವಿ ಪತ್ನಿ ಸಿಯಾ ಗೋಯಲ್‌ನನ್ನು (Siya Goyal) ತುಂಬಾ ಪ್ರೀತಿಸುತ್ತಿದ್ದ ಎನ್ನುವುದು ಆತನ ಸಂಬಂಧಿಕರ ಮಾತಿನಿಂದ ಗೊತ್ತಾಗಿದೆ. ಅಲ್ಲದೆ ಹುಟ್ಟುಹಬ್ಬದಂದು ಆಕೆಗೆ ಅಚ್ಚರಿ ಮೂಡಿಸಲು ಆಕೆಯ ಹೆಸರನ್ನು ತನ್ನ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಈ ಮಾಹಿತಿಯು ಪ್ರಕರಣಕ್ಕೆ ಪ್ರಮುಖ ತಿರುವು ನೀಡಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಜೂನ್ 19ರಂದು ಮಹಾರಾಷ್ಟ್ರದ ಪುಣೆಯ ಲೋಹಗಡ್ ಕೋಟೆಯಿಂದ ಬಿದ್ದು ಕೇತನ್ ಅಗರ್ವಾಲ್ ಮೃತಪಟ್ಟಿದ್ದರು. ಆರಂಭದಲ್ಲಿ ಕೇತನ್ ಅಗರ್ವಾಲ್ ಸಾವನ್ನು ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ ಕೇತನ್ ಮದುವೆಯಾಗಬೇಕಿದ್ದ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಕೇತನ್‌ನನ್ನು ತಳ್ಳಿ ಕೊಲೆ ಮಾಡಿರುವುದು ಬಳಿಕ ಗೊತ್ತಾಯಿತು.
ಇಲ್ಲಿದೆ ವಿಡಿಯೊ:
केतन अग्रवाल, सिया से बहुत प्यार करता था जिसका खुलासा चार्जशीट में हुआ है
— Jyotsna yadav (jyoti) (@Jyotsna51400) September 29, 2026
केतन ने सिया के जन्मदिन पर सरप्राइज़ देने के लिए अपनी पीठ पर सिया के नाम का टैटू बनवाया था जिसकी तस्वीर केतन के मोबाइल से मिली है
सिया का जन्मदिन 19 जून को था इससे पहले ही सिया ने केतन की हत्या कर दी थी pic.twitter.com/v2VgktZjnJ
ತನಿಖೆ ಮುಂದುವರಿದಂತೆ ಗೋಯಲ್, ಚೌಧರಿ ಮತ್ತು ಅವರ ಸ್ನೇಹಿತ ರಿತೇಶ್ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸಿಯಾ ಗೋಯಲ್ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ನೀಡಲು ಕೇತನ್ ಅಗರ್ವಾಲ್ ತನ್ನ ಬೆನ್ನಿನ ಮೇಲ್ಭಾಗದಲ್ಲಿ ಆಕೆಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದ ಎಂಬುದು ಇದೀಗ ತನಿಖೆಯಲ್ಲಿ ತಿಳಿದುಬಂದಿದೆ.
ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ತನಿಖೆಯಲ್ಲಿ ಮಹತ್ವದ ಬೆಳವಣಿಗೆ; 3ನೇ ಆರೋಪಿಯ ಬಂಧನ
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯನ್ನು ಪುಣೆ ಗ್ರಾಮೀಣ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರು ಪ್ರಮುಖ ಸುಳಿವು ನೀಡಿದ್ದಾರೆ. ಮೂವರು ಆರೋಪಿಗಳ ಪೈಕಿ ಓರ್ವನಾದ ಚೇತನ್ ಚೌಧರಿ,ಲೋಹಗಡ್ ಕೋಟೆಯ ಬಂಡೆಯಿಂದ ಕೇತನ್‌ನನ್ನು ತಳ್ಳಿರುವುದನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುತು ಬಹಿರಂಗಪಡಿಸದ ಸಾಕ್ಷಿಯೊಬ್ಬರು, ತಮಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ನಡೆದ ಐದು ದಿನಗಳ ನಂತರ ಅವರು ಪೊಲೀಸರನ್ನು ಸಂಪರ್ಕಿಸಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ ಇಲ್ಲಿಯವರೆಗೆ ಮೂವರು ಸಾಕ್ಷಿಗಳು ಹಾಜರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5,053 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ, ಚೇತನ್ ಚೌಧರಿ ಸ್ನೇಹಿತ ರಿತೇಶ್ ಹಾಂಗೆಯನ್ನು ಬಂಧಿಸಲಾಗಿದೆ. ಕೇತನ್‌ನನ್ನು ಕೋಟೆಯಿಂದ ತಳ್ಳಲು ಸಿಯಾ ಮತ್ತು ಚೇತನ್ ಸಂಚು ರೂಪಿಸಿದ್ದು ಆತನಿಗೆ ತಿಳಿದಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.