ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಂಬಿಬಿಎಸ್ ಕನಸು ಈಡೇರದ್ದಕ್ಕೆ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಮುಂದಾದ ಯುವತಿ: ವಿಡಿಯೊ ವೈರಲ್‌

Girl Rescued: ಕೇರಳಂನ ಪರಂತುಂಪಾರ ಪ್ರವಾಸಿ ತಾಣದಲ್ಲಿರುವ ಟ್ಯಾಗೋರ್ ಹೆಡ್ ಎಂಬ ಅತ್ಯಂತ ಎತ್ತರದ ಸ್ಥಳದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಯುವತಿಯೊಬ್ಬಳನ್ನು ರಕ್ಷಿಸಲಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ಯುವತಿಯನ್ನು ಮಾತನಾಡುತ್ತಾ ಅವಳನ್ನು ಶಾಂತಗೊಳಿಸಲು ಪ್ರಯತ್ನಿಸಿರುವ ವಿಡಿಯೊ ವೈರಲ್‌ ಆಗಿದೆ.

ಆತ್ಮಹತ್ಯೆ ಮಾಡಲು ಮುಂದಾದ ಯುವತಿಯ ರಕ್ಷಣೆ: ಇಲ್ಲಿದೆ ವಿಡಿಯೊ

ಆತ್ಮಹತ್ಯೆ ಮಾಡಲು ಮುಂದಾದ ಯುವತಿಯ ರಕ್ಷಣೆ -

Priyanka P
Priyanka P Sep 29, 2026 3:35 PM

ತಿರುವನಂತಪುರಂ, ಸೆ. 29: ಕೇರಳಂನ (Keralam) ಇಡುಕ್ಕಿ ಜಿಲ್ಲೆಯ ಪರಂತುಂಪಾರ ಪ್ರವಾಸಿ ತಾಣದಲ್ಲಿರುವ ಟ್ಯಾಗೋರ್ ಹೆಡ್ (Tagore Head) ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಯುವತಿಯೊಬ್ಬಳನ್ನು ರಕ್ಷಿಸಲಾಗಿದೆ. ಇಡುಕ್ಕಿ ಜಿಲ್ಲೆಯ ವಂಡಿಪೆರಿಯಾರ್‌ನಲ್ಲಿ ಈ ಘಟನೆ ನಡೆದಿದೆ. ಯುವತಿ ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಎಂಬಿಬಿಎಸ್ ಓದಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ದುಃಖಿತಳಾಗಿದ್ದಳು ಎನ್ನಲಾಗಿದೆ. ಸೆಪ್ಟೆಂಬರ್ 28ರ ಬೆಳಗ್ಗೆ 11 ಗಂಟೆ ಸುಮಾರಿಗೆ ಪರುಂತುಂಪರ ತಲುಪಿದ ಯುವತಿ ಟ್ಯಾಗೋರ್ ಹೆಡ್ ಬೆಟ್ಟ ಏರಿದ್ದಾಳೆ. ಅಲ್ಲಿಂದ ಕೆಳಗೆ ಹಾರುವುದಾಗಿ ಬೆದರಿಕೆ ಹಾಕಿದ್ದಾಳೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಯುವತಿಯನ್ನು ಮಾತನಾಡುತ್ತಾ ಅವಳನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. ಎಲ್ಲವನ್ನೂ ನೋಡಿಕೊಳ್ಳಲಾಗುವುದು, ಯಾವುದಕ್ಕೂ ಚಿಂತಿಸಬೇಕಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಆಕೆಗೆ ಸಾಂತ್ವನ ಹೇಳಿದ್ದಾರೆ. ನಂತರ ಅಧಿಕಾರಿ ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಹಿಂತಿರುಗುವಂತೆ ಮಾಡಲು ಯಶಸ್ವಿಯಾಗಿದ್ದು, ಇದು ವಿಡಿಯೊದಲ್ಲಿ ಸೆರೆಯಾಗಿದೆ.

ಪ್ರವಾಸಿ ತಾಣದಲ್ಲಿದ್ದ ಛಾಯಾಗ್ರಾಹಕರೊಬ್ಬರು ಯುವತಿಯೊಬ್ಬಳು ಬೆಟ್ಟದ ಅಂಚಿನಲ್ಲಿ ನಿಂತಿರುವುದನ್ನು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂತು. ಅವರು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿದರು. ನಂತರ ಅವರು ಪೀರ್ಮಡೆ ಪೊಲೀಸರಿಗೆ ತಿಳಿಸಿದರು.

ಇಲ್ಲಿದೆ ವಿಡಿಯೊ:



ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಅಧಿಕಾರಿಗಳು ಮೊದಲು ಛಾಯಾಗ್ರಾಹಕರೊಂದಿಗೆ ಮಾತನಾಡಿದರು. ನಂತರ ಯುವತಿಯನ್ನು ಫೋನ್ ಮೂಲಕ ಸಂಪರ್ಕಿಸಿದರು. ಆಕೆಗೆ ಕೌನ್ಸೆಲಿಂಗ್ ನೀಡಿ, ಕ್ರಮೇಣ ಅಪಾಯಕಾರಿ ಸ್ಥಳದಿಂದ ದೂರ ಹೋಗುವಂತೆ ಮನವೊಲಿಸಿದ ನಂತರ, ಅಗ್ನಿಶಾಮಕ ದಳದ ತಂಡದ ಸಹಾಯದಿಂದ ಯುವತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು.

16 ಲಕ್ಷ ಫಾಲೋವರ್ಸ್ ಹೊಂದಿದ್ದ ಸೋಷಿಯಲ್‌ ಮೀಡಿಯಾ ಇನ್ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆ

ಯುವತಿಯು ಪಿಯುಸಿಯಲ್ಲಿ ವಾಣಿಜ್ಯ ವಿಷಯವನ್ನು ವ್ಯಾಸಂಗ ಮಾಡಿದ್ದಳು. ಆದರೆ, ಆಕೆಗೆ ಚಿಕ್ಕಂದಿನಿಂದಲೂ ಡಾಕ್ಟರ್ ಆಗಬೇಕೆಂಬ ಕನಸಿತ್ತು ಎನ್ನಲಾಗಿದೆ. ಆದರೆ, ಕಾಮರ್ಸ್ ವಿಷಯವನ್ನು ಓದಿದ್ದರಿಂದ, ಇದು ಎಂಬಿಬಿಎಸ್ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಅಗತ್ಯವಾದ ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಗೊಂಡಿದ್ದಳು. ಈ ಕಾರಣದಿಂದ ಆಕೆ ತೀವ್ರ ದುಃಖಿತಳಾಗಿದ್ದಳು. ಆಕೆಯ ನಿರಾಶೆಯೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನು ರಕ್ಷಿಸಿದ ನಂತರ ಆಕೆಗೆ ವೃತ್ತಿಪರ ಸಮಾಲೋಚನೆ ನೀಡಲಾಯಿತು.