ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಂದೆಯೊಂದಿಗೆ ಜಗಳ; 4 ವರ್ಷದ ಬಾಲಕನನ್ನು ನೆಲಕ್ಕೆ ಬಡಿದು, ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ ವ್ಯಕ್ತಿ

ಮಹಾರಾಷ್ಟ್ರದ ಮುಂಬೈನ ವಸೈನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ವ್ಯಕ್ತಿಯೊಬ್ಬ ಪುಟ್ಟ ಬಾಲಕನ ತಂದೆಯೊಂದಿಗೆ ಜಗಳವಾಡಿ, ಆತನ ನಾಲ್ಕು ವರ್ಷದ ಬಾಲಕನನ್ನು ನೆಲಕ್ಕೆ ಎಸೆದು ಕಬ್ಬಿಣದ ರಾಡ್‌ನಿಂದ ತಲೆ ಹೊಡೆದಿದ್ದಾನೆ. ಸದ್ಯ ಬಾಲಕನಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

4 ವರ್ಷದ ಬಾಲಕ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ ವ್ಯಕ್ತಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 31, 2026 4:44 PM

ಮುಂಬೈ: ಮಹಾರಾಷ್ಟ್ರದ ಮುಂಬೈನ ವಸೈನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ವ್ಯಕ್ತಿಯೊಬ್ಬ ಪುಟ್ಟ ಬಾಲಕನ (Mumbai news) ತಂದೆಯೊಂದಿಗೆ ಜಗಳವಾಡಿ, ಆತನ ನಾಲ್ಕು ವರ್ಷದ ಬಾಲಕನನ್ನು ನೆಲಕ್ಕೆ ಎಸೆದು ಕಬ್ಬಿಣದ ರಾಡ್‌ಗೆ ತಲೆ ಹೊಡೆದಿದ್ದಾನೆ. ಈ ಕ್ರೂರ ಘಟನೆ ವಸತಿ ಸೊಸೈಟಿಯಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ ಹಳದಿ ಟೀ ಶರ್ಟ್ ಧರಿಸಿದ ವಿಘ್ನೇಶ್ ಎಂದು ಗುರುತಿಸಲಾದ ಬಾಲಕ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿ ಕುಳಿತು ಇತರ ಮಕ್ಕಳೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ಮಗುವಿನ ತಂದೆಯೊಂದಿಗೆ ಸಣ್ಣ ವಿಷಯಕ್ಕೆ ಜಗಳವಾಡಿದ ಆರೋಪಿ ಸಂದೀಪ್ ಪವಾರ್, ವಿಘ್ನೇಶ್ ಬಳಿಗೆ ನಡೆದು ಬಂದು ಅವನ ಕಾಲುಗಳನ್ನು ಹಿಡಿದು ವಾಹನದಿಂದ ಹೊರತೆಗೆದಿದ್ದಾನೆ.

ಪವಾರ್ ಅವನನ್ನು ಒಮ್ಮೆ ನೆಲದ ಮೇಲೆ ಕೆಡವಿ, ಕಟ್ಟಡದ ಒಳಗೆ ಓಡಿ ಕಬ್ಬಿಣದ ರಾಡ್‌ ತೆಗೆದುಕೊಂಡು ಬಂದು ಬಾಲಕನ ತಲೆಗೆ ಹೊಡೆದಿದ್ದಾನೆ. ಸದ್ಯ ಬಾಲಕನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಮೀರಾ ರಸ್ತೆಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆತನ ವಿರುದ್ಧ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೇಯಸಿ, ತಂದೆ, ತಾಯಿ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪ್ರಿಯಕರ!

ಗೂಡ್ಸ್‌ ಚಾಲಕನ ಮೇಲೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ವ್ಯಾನ್‌ನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಸರಕು ಸಾಗಣೆ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನ ಜನನಾಂಗ ಕತ್ತರಿಸಿದ್ದಾರೆ. ಮಹಾರಾಷ್ಟ್ರದ ಗಂಗಾಪುರ-ಲಾಸೂರ್ ರಸ್ತೆಯ ಶಿಂದೇವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಘಟನೆ ನಡೆದಿದೆ. ಹಲ್ಲೆಗೊಳಗಾದ 32 ವರ್ಷದ ವ್ಯಕ್ತಿ ತನ್ನ ಮಿನಿ ಪಿಕಪ್ ವಾಹನದಲ್ಲಿ ಸರಕುಗಳನ್ನು ಇಳಿಸಿ ಸ್ನೇಹಿತನೊಂದಿಗೆ ಹಿಂತಿರುಗುತ್ತಿದ್ದಾಗ ತಾಂತ್ರಿಕ ಸಮಸ್ಯೆಯಿಂದಾಗಿ ತಿರುವಿನಲ್ಲಿ ವಾಹನ ನಿಂತಿದೆ. ಆದೇ ಸಮಯದಲ್ಲಿ ಹಾದುಹೋಗುತ್ತಿದ್ದ ವ್ಯಾನ್ ಡಿಕ್ಕಿಯಾಗುವುದನ್ನು ತಪ್ಪಿಸಿದೆ. ಬಳಿಕ ಎರಡು ವಾಹನಗಳಲ್ಲಿದ್ದವರ ನಡುವೆ ಜಗಳ ಶುರುವಾಗಿ ವಿಕೋಪಕ್ಕೆ ತಿರುಗಿದೆ. ಬಳಿಕ ಸರಕು ಸಾಗಣೆ ವಾಹನ ಚಾಲಕ ಹತ್ತಿರದ ಹೊಲಕ್ಕೆ ಓಡಿದ್ದಾನೆ