ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CSK vs RR - ಸೋತಿದ್ರೆ ನಾನು ಕೆಟ್ಟ ನಾಯಕ: ರಿಯಾನ್ ಪರಾಗ್ ಅಚ್ಚರಿಯ ಮಾತು!

ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಚಾಂಪಿಯನ್ಸ್‌ ರಾಜಸ್ಥಾನ್‌ ರಾಯಲ್ಸ್‌ 2026ರ ಸಾಲಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಅದರಲ್ಲೂ, ಬಹುಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಪವರ್‌ಫುಲ್‌ ಪ್ರದರ್ಶನ ನೀಡಿದ ರಿಯಾನ್‌ ಪರಾಗ್‌ ಸಾರಥ್ಯದ ರಾಯಲ್ಸ್‌ 8 ವಿಕೆಟ್‌ಗಳ ಜಯ ದಾಖಲಿಸಿತು. ಈ ಗೆಲುವಿನ ಬಳಿಕ ಮಾತನಾಡಿದ ರಿಯಾನ್‌, ಮುಕ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸೋತಿದ್ರೆ ನಾನು ಕೆಟ್ಟ ನಾಯಕ: ರಿಯಾನ್ ಪರಾಗ್ ಅಚ್ಚರಿಯ ಮಾತು!

-

Vijeth Kumar DN
Vijeth Kumar DN Mar 31, 2026 5:41 PM

ಗುವಾಹಟಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ಪಂದ್ಯದಲ್ಲಿ ಆಲ್‌ರೌಂಡ್‌ ಆಟವಾಡಿದ ರಾಯಲ್ಸ್‌ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಬಳಿಕ ಮಾತನಾಡಿದ ಆರ್‌ಆರ್ ನಾಯಕ ರಿಯಾನ್‌ ಪರಾಗ್‌, ತಮ್ಮ ನಾಯಕತ್ವದ ಬಗ್ಗೆ ಸ್ಪಷ್ಟ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ನಮ್ಮ ತಂಡ ಯೋಜನೆಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಯಿತು. ಪಿಚ್ ಮತ್ತು ಪರಿಸ್ಥಿತಿ ನಮ್ಮ ಪರವಾಗಿದ್ದವು. ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡಿದ್ದೇನೆ ಎಂದು ಅನಿಸುತ್ತದೆ. ಮುಂದಿನ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ನೀಡಲು ಆಶಿಸುತ್ತೇವೆ," ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ ವೇಳೆ ರಿಯಾನ್‌ ಪರಾಗ್‌ ಮಾತನಾಡಿದರು.

ಪಂದ್ಯದ ಫಲಿತಾಂಶದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸಿತು ಎಂದ ರಿಯಾನ್‌, "ಆರಂಭದಲ್ಲಿ ಪಿಚ್‌ನಲ್ಲಿ ತೇವಾಂಶವಿತ್ತು, ಇದರಿಂದ ಬೌಲರ್‌ಗಳಿಗೆ ಪ್ರಾಬಲ್ಯ ಮೆರೆಯಲು ಸಹಾಯವಾಯಿತು. ನಂತರ ಪಿಚ್ ಗುಣದಲ್ಲಿ ಬದಲಾವಣೆ ಕಂಡು, ನಮಗೆ ಬ್ಯಾಟ್‌ ಮಾಡುವುದು ಸುಲಭವಾಯಿತು," ಎಂದು ವಿವರಿಸಿದರು.

IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ

ಏನೇ ಆಗಲಿ ಟಿ20 ಕ್ರಿಕೆಟ್‌ನಲ್ಲಿ ಫಲಿತಾಂಶವೇ ಮುಖ್ಯ ಎಂಬುದನ್ನು ಪರಾಗ್ ಒತ್ತಿಹೇಳಿದರು. "ನಾವು ಇಂದು ಸೋತಿದ್ದರೆ, ಇದೇ ನಿರ್ಧಾರಗಳನ್ನು ತೆಗೆದುಕೊಂಡಿದ್ದರೂ ಜನರು ನನ್ನನ್ನು ಕೆಟ್ಟ ನಾಯಕ ಅಂತ ಹೇಳುತ್ತಿದ್ದರು. ಗೆದ್ದರೆ ಎಲ್ಲವೂ ಚೆನ್ನಾಗೇ ಕಾಣುತ್ತದೆ. ಆದರೆ ಕೆಲವೊಮ್ಮೆ ಆಟಗಾರರು ಬೌಂಡರಿ ಹೊಡೆದರೆ, ಪರಿಸ್ಥಿತಿ ಬೇರೆಯಾಗಿರುತ್ತಿತ್ತು," ಎಂದು ಕ್ಯಾಪ್ಟನ್ಸಿ ಹೊಗಳಿಕೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇನ್ನೊಂದೆಡೆ, ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಮಾತನಾಡಿದ ಮೆಂಟರ್‌ ಮೈಕ್‌ ಹಸ್ಸೀ ತಂಡದ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. "ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಕಾರಣ ಒತ್ತಡ ಹೆಚ್ಚಾಯಿತು. ಇದರಿಂದ ದೊಡ್ಡ ಜೊತೆಯಾಟ ಕಟ್ಟಲು ಸಾಧ್ಯವಾಗಲಿಲ್ಲ," ಎಂದು ಹೇಳಿದರು.

IPL 2026: ಲಖನೌ vs ಡೆಲ್ಲಿ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಯಾವುದು?

"ನಮ್ಮ ಆಟಗಾರರು ಸ್ಪಷ್ಟ ಮನಸ್ಥಿತಿಯೊಂದಿಗೆ ಆಡಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆತ್ಮವಿಶ್ವಾಸದಿಂದ ಆಟವಾಡಬೇಕು. ಕೆಲವೊಮ್ಮೆ ಫಲಿತಾಂಶ ನಮ್ಮ ಪರವಾಗಿರದೇ ಇರಬಹುದು, ಆದರೆ ಅದು ಕ್ರಿಕೆಟ್‌ನ ಭಾಗ," ಎಂದು ಹಸ್ಸಿ ವಿವರಿಸಿದರು.

ಸಿಎಸ್‌ಕೆ vs ಆರ್‌ಆರ್‌ ಸಂಕ್ಷಿಪ್ತ ಸ್ಕೋರ್‌

ಚೆನ್ನೈ ಸೂಪರ್‌ ಕಿಂಗ್ಸ್‌: 19.4 ಓವರ್‌ಗಳಲ್ಲಿ 127 ರನ್‌ಗೆ ಆಲ್‌ಔಟ್‌ (ಸರ್ಫರಾಝ್‌ ಖಾನ್‌ 17, ಕಾರ್ತಿಕ್‌ ಶರ್ಮಾ 18, ಜೇಮಿ ಓವರ್‌ಟರ್ನ್‌ 43; ಜೋಫ್ರಾ ಆರ್ಚರ್‌ 19ಕ್ಕೆ 2, ನಂಡ್ರೆ ಬರ್ಗರ್‌ 26ಕ್ಕೆ 2, ರವೀಂದ್ರ ಜಡೇಜಾ 18ಕ್ಕೆ 2).

ರಾಜಸ್ಥಾನ್‌ ರಾಯಲ್ಸ್‌: 12.1 ಓವರ್‌ಗಳಲ್ಲಿ 2 ವಿಕೆಟ್‌ಗೆ 128 ರನ್‌ (ಯಶಸ್ವಿ ಜೈಸ್ವಾಲ್‌ 38*, ವೈಭವ್‌ ಸೂರ್ಯವಂಶಿ 52, ಧ್ರುವ್‌ ಜುರೆಲ್‌ 18; ಅಂಕುಶ್‌ ಕಂಬೋಜ್‌ 27ಕ್ಕೆ 2).

ಪಂದ್ಯಶ್ರೇಷ್ಠ: ನಂಡ್ರೆ ಬರ್ಗರ್‌