ಮದುವೆ ಆಮಿಷ ಒಡ್ಡಿ ಯುವತಿಗೆ ವಂಚನೆ; ಮಾಜಿ ಸಚಿವ ಡಿ. ಸುಧಾಕರ್ ಸಹೋದರನ ಕುಟುಂಬದ ವಿರುದ್ಧ ಎಫ್‌ಐಆರ್
Tumkur News: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಎಸಗಿರುವ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪದ ಮೇಲೆ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ಸಹೋದರ ಡಿ.ಎಸ್. ಕುಮಾರ್ ಕುಟುಂಬದ ವಿರುದ್ಧ ತುಮಕೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಟ್ಟು ಏಳು ಜನರ ವಿರುದ್ಧ ದೂರು ದಾಖಲಾಗಿದೆ.
ಅರ್ಜುನ್ ನಿಶ್ಚಿತಾರ್ಥದ ಫೋಟೊ -
ತುಮಕೂರು, ಸೆ. 17: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಎಸಗಿರುವ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪದ ಮೇಲೆ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ಸಹೋದರ ಡಿ.ಎಸ್. ಕುಮಾರ್ ಕುಟುಂಬದ ವಿರುದ್ಧ ತುಮಕೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ (Tumkur News). 7 ವರ್ಷಗಳಿಂದ ಪ್ರೀತಿಸುತ್ತಿದ್ದ ಡಿ.ಎಸ್. ಕುಮಾರ್ ಅವರ ಪುತ್ರ ಅರ್ಜುನ್, ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅರ್ಜುನ್, ಆತನ ತಂದೆ ಡಿ.ಎಸ್. ಕುಮಾರ್, ತಾಯಿ ಪದ್ಮರೇಖಾ, ಸಹೋದರಿಯರು ಮತ್ತು ಭಾವ ಸೇರಿ ಒಟ್ಟು ಏಳು ಜನರ ವಿರುದ್ಧ ದೂರು ದಾಖಲಾಗಿದೆ.
ಘಟನೆ ಹಿನ್ನೆಲೆ
ಅರ್ಜುನ್ ಹಾಗೂ ಸಂತ್ರಸ್ತ ಯುವತಿ 16 ವರ್ಷಗಳಿಂದ ಪರಿಚಿತರಾಗಿದ್ದರು. 7 ವರ್ಷಗಳಿಂದ ಪ್ರೀತಿಸುವುದಾಗಿ ನಂಬಿಸಿರುವುದಾಗಿ ಯುವತಿ ತಿಳಿಸಿದ್ದಾರೆ. 2020ರಲ್ಲಿ ಎರಡೂ ಕುಟುಂಬಗಳ ಪೋಷಕರ ಸಮ್ಮುಖದಲ್ಲಿ ಕುಂಕುಮ ಶಾಸ್ತ್ರ ನೆರವೇರಿತ್ತು. ಈ ಸಂದರ್ಭದಲ್ಲಿ ಜತೆಯಾಗಿ ಪ್ರಯಾಣ ಬೆಳೆಸಿದ್ದ ವೇಳೆ ಅರ್ಜುನ್ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಪಾವಗಡ ಜನರ ನಿದ್ದೆಗೆಡಿಸಿದ್ದ ಶಂಕಿತ ನಕ್ಸಲ್ ಉಪ್ಪಾರ್ ವೆಂಕಟೇಶ್ ಕೊನೆಗೂ ಬಂಧನ
ನಿಶ್ಚಿತಾರ್ಥ ಹಾಗೂ ದಿನಾಂಕ ನಿಗದಿ
ಕುಟುಂಬಗಳ ನಡುವೆ ಮಾತುಕತೆ ನಡೆದು, 2025ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು. ಅಲ್ಲದೆ, 2026ರ ಮಾರ್ಚ್ 1ರಂದು ಮದುವೆ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು.ಮದುವೆಗೆ ಕೇವಲ ಎರಡು ತಿಂಗಳುಗಳು ಬಾಕಿ ಇರುವಾಗ ಅರ್ಜುನ್ ಕುಟುಂಬವು ಮದುವೆ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತ ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸರು, ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಮಹಜರ್ ನಡೆಸಿ ತನಿಖೆ ಮುಂದುವರಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಯುವತಿ ಪೊಲೀಸ್ ಠಾಣೆ ಮೆಟ್ಟಲೇರುವ ಮೊದಲೇ ಆಕೆ ವಿರುದ್ಧ ಡಿಎಸ್. ಕುಮಾರ್ ಕುಟುಂಬ ದೂರು ನೀಡಿತ್ತು. ಅದರಂತೆ ತುಮಕೂರು ಎನ್‌ಇಪಿಎಸ್ ಠಾಣೆಯಲ್ಲಿ ಎನ್‌ಸಿಆರ್ ಪ್ರಕರಣ ದಾಖಲಾಗಿದ್ದು, ನಿಶ್ಚಿತಾರ್ಥ ಮತ್ತು ಮದುವೆ ರದ್ದಾದ ಬಳಿಕವೂ ಯುವತಿ ತಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂದು ಆರೋಪಿಸಿ ದೂರು ನೀಡಲಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.