ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇವಸ್ಥಾನದ ಬಳಿ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ; ದೀಪಾವಳಿ ಸಂಭ್ರಮದ ಮಧ್ಯೆ ಭಕ್ತರಿಗೆ ಆಘಾತ

Assam Horror: ದೇವಸ್ಥಾನವೊಂದರ ಬಳಿ ಗೋಣಿ ಚೀಲದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಅಸ್ಸಾಂನ ಗುವಾಹಟಿಯ ಖನಪಾರದ ಗಣೇಶ ದೇವಸ್ಥಾನ ಆವರಣದಲ್ಲಿ ನಡೆದಿದೆ. ಹಬ್ಬದ ಖುಷಿಯಲ್ಲಿದ್ದ ಭಕ್ತರು ದೇವಸ್ಥಾನಕ್ಕೆ ಬಂದು ಈ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.

ದೀಪಾವಳಿ ವೇಳೆ ದೇಗುಲ ಬಳಿ ಮಹಿಳೆಯ ಮೃತದೇಹ ಪತ್ತೆ

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Nov 8, 2026 3:41 PM

ದಿಸ್ಪುರ, ನ. 8: ದೇಶವೇ ದೀಪಾವಳಿ ಸಂಭ್ರಮದಲ್ಲಿ ತೇಲುತ್ತಿದ್ದರೆ ಅತ್ತ ಅಸ್ಸಾಂನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ದೇವಸ್ಥಾನವೊಂದರ ಬಳಿ ಗೋಣಿ ಚೀಲದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಹಬ್ಬದ ಖುಷಿಯಲ್ಲಿದ್ದ ಭಕ್ತರು ದೇವಸ್ಥಾನಕ್ಕೆ ಬಂದು ಈ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. 12 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಇದಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ (Assam Horror). ಅಸ್ಸಾಂನ ಗುವಾಹಟಿಯ ಖನಪಾರದ ಗಣೇಶ ದೇವಸ್ಥಾನ ಆವರಣದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ದೀಪಾವಳಿ ಪ್ರಯುಕ್ತ ಶನಿವಾರ (ನವೆಂಬರ್‌ 7) ಅಸ್ಸಾಂನ ಗುವಾಹಟಿಯ ಖನಪಾರದ ಗಣೇಶ ದೇವಸ್ಥಾನಕ್ಕೆ ಆಗಮಿಸಿದ ಅಲ್ಲಿನ ಅನಿರೀಕ್ಷಿತ ದೃಶ್ಯ ಕಂಡು ಹೌಹಾರಿದ್ದಾರೆ. ಬೆಳಗ್ಗೆ 11.15ಕ್ಕೆ ದೇವಸ್ಥಾನದ ಬಳಿ ಬಿದ್ದಿರುವ ಚೀಲವನ್ನು ಗಮನಿಸಿದ ಸ್ಥಳೀಯರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದರು. ಕಾರ್ಯಪ್ರವೃತ್ತರಾದ ಪೊಲೀಸರು ಮೃತದೇಹ ಪತ್ತೆ ಹಚ್ಚಿದರು.

ಸ್ಥಳೀಯವಾಗಿ ಆತಂಕ ಸೃಷ್ಟಿಸಿದ ಈ ಘಟನೆ ನಡೆದ ಕೂಡಲೇ ದಿಸ್ಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಫೋರೆನ್ಸಿಕ್‌ ತಂಡದ ಸದಸ್ಯರು ಆಗಮಿಸಿ ಸಾಕ್ಷಿ ಕಲೆ ಹಾಕಿದ್ದು, ತನಿಖೆ ಮುಂದುವರಿದಿದ. ಮೃತರನ್ನು ಕೋಯಿನಾಧೋರಾದ 38 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ತಾಯಿಯಾದ ಈಕೆ ಖನಪಾರದಲ್ಲಿ ಟಿಕೆಟ್‌ ಕಲೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ವಿವಾಹಿತ; ಗೋಲ್‌ಗೊಪ್ಪ ಕೊಡಿಸುವುದಾಗಿ ಕರೆದೊಯ್ದು ಹೀನ ಕೃತ್ಯ

ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ

ಫೋರೆನ್ಸಿಕ್‌ ತಂಡದ ಸದಸ್ಯರ ಪ್ರಕಾರ ಮೃತದೇಹ ಕೊಳೆಯುವ ಸ್ಥಿತಿಯಲ್ಲಿದೆ. ಆ ಮೂಲಕ ಮಹಿಳೆ ಮೃತಪಟ್ಟು ವಾರ ಕಳೆದಿದೆ ಎಂದು ಲೆಕ್ಕ ಹಾಕಲಾಗಿದೆ. ಕೊಲೆಯ ನಿಖರ ಕಾರಣ ಮತ್ತು ಸಮಯ ಪೋಸ್ಟ್‌ ಮಾರ್ಟಂ ಪರೀಕ್ಷೆಯ ಬಳಿಕ ಗೊತ್ತಾಗಲಿದೆ.

ʼʼಮರಣಕ್ಕೆ ಕಾರಣ ಮತ್ತು ನಿಖರ ಸಮಯವನ್ನು ನಿರ್ಧರಿಸಲು ಮೃತದೇಹವನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (GMCH) ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಹಿಳೆ ಸುಮಾರು 12 ದಿನಗಳಿಂದ ನಾಪತ್ತೆಯಾಗಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಅವರಮನೆಯವರು ಬಸಿಷ್ಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆಯ ಸುಳಿವು ಪತ್ತೆಹಚ್ಚುವ ಪ್ರಯತ್ನದ ಭಾಗವಾಗಿ ಅಧಿಕಾರಿಗಳು ಮೇಘಾಲಯ ಪೊಲೀಸರನ್ನು ಕೂಡ ಸಂಪರ್ಕಿಸಿದ್ದರು ಎನ್ನಲಾಗಿದೆ.

ಹಾಸನದಲ್ಲಿ ನವವಿವಾಹಿತೆ ಕಣ್ಮರೆ ಕೇಸ್‌; 8 ದಿನಗಳ ಬಳಿಕ ಮೃತದೇಹ ಪತ್ತೆ!

ಬಗೆಹರಿಯದ ನಿಗೂಢತೆ

ಸದ್ಯ ಈ ಪ್ರಕರಣದ ನಿಗೂಢತೆ ಹಾಗೆಯೇ ಮುಂದುವರಿದಿದೆ. ಈ ಮಹಿಳೆ ನಾಪತ್ತೆಯಾಗಿದ್ದು ಹೇಗೆ? ಸಾವಿಗೆ ಕಾರಣವಾದ ಅಂಶ ಯಾವುದು? ಅವರನ್ನು ಕೊಲೆ ಮಾಡಲಾಗಿದೆಯೇ ಅಥವಾ ಸಹಜ ಸಾವೇ? ಮುಂತಾದ ಉತ್ತರವಿಲ್ಲದ ಪ್ರಶ್ನೆಗಳು ಕಾಡುತ್ತಿದ್ದು, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಮಹಿಳೆ ಮೇಲೆ ಆಳವಾದ ಗಾಯಗಳಿವೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಅದರಲ್ಲೂ ದೇವಸ್ಥಾನದ ಬಳಿ ಮಹಿಳೆಯ ಮೃತದೇಹವನ್ನು ಎಸೆದಿದ್ದು ಯಾರು, ಯಾಕೆ ಎನ್ನುವ ಪ್ರಶ್ನೆಯೂ ಸ್ಥಳೀಯರಿಗೆ ಕಾಡುತ್ತಿದೆ. ತನಿಖೆ ಬಳಿಕವಷ್ಠೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.