ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Murder Case: ಊಟಕ್ಕಾಗಿ ಹೋಟೆಲ್‌ಗೆ ಹೋದ ಯುವಕನ ಕೊಲೆ, ಆಕಸ್ಮಿಕವಾಗಿ ಕಾಲು ತುಳಿದದ್ದೇ ಕಾರಣ!

ಮನೆ ಸಮೀಪದ ಹೋಟೆಲ್‌ಗೆ ರಾತ್ರಿ ದೋಸೆ ತಿನ್ನಲು ಶಶಿ ಅವರು ಹೋಗಿದ್ದರು. ಅದೇ ವೇಳೆ ಮಂಜುನಾಥ ಸಹ ಹೋಟೆಲ್‌ಗೆ ಹೋಗಿದ್ದ. ದೋಸೆ ತಿನ್ನುವಾಗ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ತುಳಿದಿದ್ದಾನೆ. ಈ ವಿಚಾರಕ್ಕೆ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಡ್ಯಾಗರ್‌ನಿಂದ ಶಶಿಗೆ ಇರಿಯಲಾಗಿದೆ.

ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಕಾಲು ತುಳಿದ ಯುವಕನ ಕೊಲೆ

ಕೊಲೆಯಾದ ಶಶಿ -

ಹರೀಶ್‌ ಕೇರ
ಹರೀಶ್‌ ಕೇರ Mar 4, 2026 8:08 AM

ಬೆಂಗಳೂರು, ಮಾರ್ಚ್‌ 04: ಹೋಟೆಲ್‌ನಲ್ಲಿ ದೋಸೆ ತಿನ್ನುವ ವೇಳೆ ಆಕಸ್ಮಿಕವಾಗಿ ಕಾಲ್ತುಳಿದ ಕಾರಣಕ್ಕೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಮೇಲೆ ಸೋದರರಿಬ್ಬರು ಮುಗಿಬಿದ್ದು ಡ್ಯಾಗರ್‌ನಿಂದ ಹಲ್ಲೆ (dagger attack) ನಡೆಸಿ ಕೊಂದು (Murder Case) ಪರಾರಿಯಾಗಿರುವ ಘಟನೆ ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ ನಗರದ ಶಶಿಕುಮಾರ್ (31) ಹತ್ಯೆಗೀಡಾದ ದುರ್ದೈವಿ.

ಈ ಹತ್ಯೆ ಕೃತ್ಯ ಎಸಗಿ ತಪ್ಪಿಸಿಕೊಂಡಿರುವ ಸೋದರರಾದ ಭಾಗ್ಯರಾಜ್ ಹಾಗೂ ಮಂಜುನಾಥ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಸವೇಶ್ವರ ನಗರದ ಗುರು ರಾಘವೇಂದ್ರ ಹೋಟೆಲ್ ಬಳಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಸಾಲ ವಸೂಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಶಿ, ತನ್ನ ಕುಟುಂಬದ ಜತೆ ಮಂಜುನಾಥ ನಗರದಲ್ಲಿ ನೆಲೆಸಿದ್ದರು. ಮನೆ ಸಮೀಪದ ಹೋಟೆಲ್‌ಗೆ ರಾತ್ರಿ ದೋಸೆ ತಿನ್ನಲು ಅವರು ಹೋಗಿದ್ದರು. ಅದೇ ವೇಳೆ ಮಂಜುನಾಥ ಸಹ ಹೋಟೆಲ್‌ಗೆ ಹೋಗಿದ್ದ. ಆಗ ದೋಸೆ ತಿನ್ನುವಾಗ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ತುಳಿದಿದ್ದಾನೆ. ಈ ವಿಚಾರಕ್ಕೆ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

Assault Case: ಪಿಯುಸಿ ಪರೀಕ್ಷೆ ಬರೆಯಲು ಹೋಗದಂತೆ ವಿದ್ಯಾರ್ಥಿನಿ ಮೇಲೆ ಸೋದರಮಾವನ ಹಲ್ಲೆ

ಈ ಗಲಾಟೆ ವಿಷಯವನ್ನು ತನ್ನ ಸೋದರ ಭಾಗ್ಯರಾಜ್‌ಗೆ ಮಂಜುನಾಥ್ ಹೇಳಿ ಕರೆಸಿಕೊಂಡಿದ್ದಾನೆ. ಆಗ ಡ್ಯಾಗರ್ ಸಮೇತ ಹೋಟೆಲ್‌ಗೆ ಬಂದ ಭಾಗ್ಯರಾಜ್, ಏಕಾಏಕಿ ಶಶಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಶಶಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

11 ತಿಂಗಳ ಮಗುವಿನ ತಂದೆ

ಮೃತ ಶಶಿಕುಮಾರ್‌ ಅವರಿಗೆ 11 ತಿಂಗಳ ಮಗುವಿದೆ. ಅವರ ಪತ್ನಿ ಬಾಣಂತನಕ್ಕೆ ತವರು ಮನೆಗೆ ಹೋಗಿದ್ದರಿಂದ ರಾತ್ರಿ ಊಟ ಮಾಡಲು ಹೋಟೆಲ್‌ಗೆ ಶಶಿಕುಮಾ‌ರ್ ಅವರು ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.