ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ: ವೈದ್ಯರಿಂದ 2 ಕೋಟಿ ರುಪಾಯಿ ಸುಲಿಗೆ ಮಾಡಿದ ನರ್ಸ್; ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಖಾಸಗಿ ಚಿತ್ರಗಳ ಲೀಕ್, ಕೊಲೆ, ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಖಾಸಗಿ ಆಸ್ಪತ್ರೆ ವೈದ್ಯರೊಬ್ಬರಿಂದ ನರ್ಸ್ ವೊಬ್ಬ 2 ಕೋಟಿ ರೂ. ಸುಲಿಗೆ ಮಾಡುವುದಾಗಿ ಬೆದರಿಕೆ ಒಡ್ಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನರ್ಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

ವೈದ್ಯರಿಂದ 2 ಕೋಟಿ ರೂ. ಸುಲಿಗೆ ಮಾಡಿದ ನರ್ಸ್

ಸಂಗ್ರಹ ಚಿತ್ರ -

ರಾಜಸ್ಥಾನ: ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ (physical abuse threat) ಸಿಲುಕಿಸುವುದು, ಕೊಲೆ ಮಾಡುವುದು, ಖಾಸಗಿ ಚಿತ್ರಗಳನ್ನು ಲೀಕ್ (leak private pictures) ಮಾಡುವುದಾಗಿ ಹೇಳಿ ನರ್ಸ್ ವೊಬ್ಬಳು ಖಾಸಗಿ ಆಸ್ಪತ್ರೆ ವೈದ್ಯರಿಗೆ (threat to doctor) ಬೆದರಿಕೆಯೊಡ್ಡಿ ಸುಮಾರು 2 ಕೋಟಿ ರೂ. ಲೂಟಿ ಮಾಡಿರುವ ಘಟನೆ ರಾಜಸ್ಥಾನದಲ್ಲಿ (Rajasthan crime) ನಡೆದಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ಆರೋಪಿ ನರ್ಸ್ ಕಮಲಾ ಅಲಿಯಾಸ್ ಕಮಲೇಶ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಆಕೆ ನಿರಂತರ ಬೆದರಿಕೆಯೊಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ.

ರಾಜಸ್ಥಾನದ ಬಾರ್ಮರ್‌ನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಖಾಸಗಿ ಛಾಯಾಚಿತ್ರಗಳನ್ನು ಸೋರಿಕೆ ಮಾಡುವುದಾಗಿ, ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಮತ್ತು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹಲವಾರು ವರ್ಷಗಳಿಂದ ಸುಲಿಗೆ ಮಾಡುತ್ತಿದ್ದ ನರ್ಸ್ ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿ ನರ್ಸ್ ಹಲವಾರು ವರ್ಷಗಳಿಂದ ಸುಮಾರು 2 ಕೋಟಿ ರೂ. ಗೂ ಹೆಚ್ಚು ಹಣ ಲೂಟಿ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

Bantwal News: ಬಂಟ್ವಾಳದಲ್ಲಿ ಶಾಲಾ ಬಸ್‌ ಮೇಲೆ ಮರ ಬಿದ್ದು ಬಾಲಕಿ ಸಾವು, ನಾಲ್ವರು ಮಕ್ಕಳಿಗೆ ಗಂಭೀರ ಗಾಯ

ವೈದ್ಯರು ನೀಡಿರುವ ದೂರಿನ ಪ್ರಕಾರ, 2016ರ ಡಿಸೆಂಬರ್ ನಿಂದ ಕಮಲೇಶ್ ಅದೇ ವೈದ್ಯರ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಹೆಚ್ಚಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಮಲೇಶ್ ಚಹಾ ಮಾಡುವ ನೆಪದಲ್ಲಿ ಅವರ ವೈಯಕ್ತಿಕ ಕೋಣೆಗೆ ಬಂದು ರಹಸ್ಯವಾಗಿ ಖಾಸಗಿ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಳು.

ಬಳಿಕ ಇವುಗಳನ್ನು ತೋರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅತ್ಯಾಚಾರದ ಸುಳ್ಳು ಆರೋಪ ಹೊರಿಸುವುದಾಗಿ ಮತ್ತು ಹಣ ನೀಡಲು ನಿರಾಕರಿಸಿದರೆ ಕೊಲ್ಲುವುದಾಗಿ ಕೂಡ ಬೆದರಿಕೆ ಹಾಕಿದ್ದಾಗಿ ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ.

ಎಲ್ಲಿ ತನ್ನ ಖ್ಯಾತಿಗೆ ಕಳಂಕ ಬರುವುದೋ ಎನ್ನುವ ಬೆದರಿಕೆಯಿಂದ ಆಕೆಗೆ ಹಣ ಪಾವತಿಸುವುದನ್ನು ಮುಂದುವರೆಸಿದೆ. ಆಸ್ಪತ್ರೆಯ ಬ್ಯಾಂಕ್ ಖಾತೆಯಿಂದ ನೇರವಾಗಿ ವರ್ಗಾಯಿಸಲಾದ ಸುಮಾರು 35 ಲಕ್ಷ ರೂ. ಸೇರಿದಂತೆ ಈವರೆಗೆ ಆಕೆಗೆ ಸುಮಾರು 2 ಕೋಟಿ ರೂ.ಗಳನ್ನು ಪಾವತಿಸಿರುವುದಾಗಿ ಅವರು ತಿಳಿಸಿದ್ದಾರೆ.

ಆರೋಪಿಯು ಖಾಲಿ ಚೆಕ್‌, ಸ್ಟಾಂಪ್ ಪೇಪರ್‌ಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದುದರಿಂದ ಅದನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಿರುವುದಾಗಿ ವೈದ್ಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ಆರೋಪಿಯು ವೈದ್ಯರ ಮೇಲೆ ನಿರಂತರ ನಿಗಾ ಇರಿಸಲು ಅವರಿಗೆ ಒಂದು ಪ್ರತ್ಯೇಕ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಕೂಡ ನೀಡಿದ್ದು, ಇದರ ಮೂಲಕ ದಿನದ 24 ಗಂಟೆಗಳ ಕಾಲ ಕೂಡ ನಿಗಾ ಇರಿಸಿದ್ದಳು. ಆಸ್ಪತ್ರೆಯ ಸಿಸಿಟಿವಿ ಕೆಮರಾಗಳ ಪಾಸ್‌ವರ್ಡ್‌ ಕೂಡ ಆಕೆ ಬಳಿ ಇತ್ತು ಎಂದು ವೈದ್ಯರು ಹೇಳಿದ್ದಾರೆ.

ನರ್ಸ್ ಆಗಿ ಮಾಸಿಕ 12,000 ರೂ. ಸಂಬಳ ಪಡೆಯುತ್ತಿದ್ದ ಕಮಲೇಶ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾಳೆ . ವೈದ್ಯರು ತನ್ನನ್ನು ತಾನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕೆ ದೂರಿದ್ದಾಳೆ.

ಬೆಳಗಾವಿಯಲ್ಲಿ ಹೀನ ಕೃತ್ಯ; ಕೋಚಿಂಗ್ ಸೆಂಟರ್‌ನಲ್ಲಿ ಬಾಲಕಿಯರ ಮೇಲೆ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯ!

ಈ ಕುರಿತು ದೂರು ದಾಖಲಿಸಲಾಗಿದೆ. ಆರೋಪಿ ಕಮಲೇಶ್ ನನ್ನು ಬಂಧಿಸಿ 17,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿರುವ ಬಾರ್ಮರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಆರ್ಯ, ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.