ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ಷುಲ್ಲಕ ಕಾರಣಕ್ಕೆ ಕಾರ್ಗಿಲ್‌ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆ ಮಾಜಿ ಯೋಧನ ಮೇಲೆ ಹಲ್ಲೆ; ಗಂಭೀರ ಗಾಯ

Viral News: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ ಭಾರತೀಯ ವಾಯುಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಅಮಿತ್ ಕುಮಾರ್ ಗುಪ್ತಾ ಅವರ ಮೇಲೆ ಹರಿಯಾಣದ ಗುರುಗ್ರಾಮದಲ್ಲಿ ಪಾರ್ಕಿಂಗ್ ಸಿಬ್ಬಂದಿಯೊಬ್ಬ ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.

ಕಾರ್ಗಿಲ್‌ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆ ಮಾಜಿ ಯೋಧನ ಮೇಲೆ ಹಲ್ಲೆ

ವಾಯುಪಡೆ ಮಾಜಿ ಯೋಧನ ಮೇಲೆ ಹಲ್ಲೆ -

Vishakha Bhat Heggar
Vishakha Bhat Heggar Sep 14, 2026 3:52 PM

ಗುರುಗ್ರಾಮ: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ ಭಾರತೀಯ ವಾಯುಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಅಮಿತ್ ಕುಮಾರ್ ಗುಪ್ತಾ (Physical Assault) ಅವರ ಮೇಲೆ ಹರಿಯಾಣದ ಗುರುಗ್ರಾಮದಲ್ಲಿ ಪಾರ್ಕಿಂಗ್ ಸಿಬ್ಬಂದಿಯೊಬ್ಬ ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. (Op Safed Sagar) ಅಮಿತ್‌ ಅವರು ‘ಆಪರೇಷನ್ ಸಫೇದ್ ಸಾಗರ್’ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಅವರ ಮೇಲಿನ ಈ ದಾಳಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಡೆದಿದ್ದೇನು?

ಅಮಿತ್ ಕುಮಾರ್ ಗುಪ್ತಾ ಅವರು ತಮ್ಮ ಕುಟುಂಬದೊಂದಿಗೆ ಗುರುಗ್ರಾಮದ ಮ್ಯಾಗ್ನಮ್ ಗ್ಲೋಬಲ್ ಪಾರ್ಕ್‌ನಲ್ಲಿರುವ ರೆಸ್ಟೋರೆಂಟ್‌ಗೆ ರಾತ್ರಿಯ ಊಟಕ್ಕೆ ತೆರಳಿದ್ದರು. ರಾತ್ರಿ ಸುಮಾರು 8 ಗಂಟೆಗೆ, ಅವರು ತಮ್ಮ ಕುಟುಂಬವನ್ನು ರೆಸ್ಟೋರೆಂಟ್‌ ಬಳಿ ಇಳಿಸಿದ ನಂತರ ಕಾರು ಪಾರ್ಕ್ ಮಾಡಲು ಹೋದಾಗ, ಪಾರ್ಕಿಂಗ್ ಸಿಬ್ಬಂದಿ ಅವರನ್ನು ವ್ಯಾಲೆ, ಬೇಸ್‌ಮೆಂಟ್‌ ಮತ್ತು ಮಲ್ಟಿ-ಲೆವಲ್‌ ಪಾರ್ಕಿಂಗ್‌ ಹೀಗೆ ಬೇರೆ ಬೇರೆ ಕಡೆ ಅಲೆದಾಡಿಸಿ ಕೊನೆಗೆ ಕಾರು ಪಾರ್ಕ್ ಮಾಡಲು ನಿರಾಕರಿಸಿದ್ದಾರೆ. ಕಾರನ್ನು ರಿವರ್ಸ್ ತೆಗದುಕೊಳ್ಳಲು ಯತ್ನಿಸಿದಾಗ ಸಿಬ್ಬಂದಿಯೊಬ್ಬ ಕಾರಿನ ವಿಂಡ್‌ಶೀಲ್ಡ್ ಒಡೆಯಲು ಯತ್ನಿಸಿದ್ದಾನೆ. ಇದನ್ನು ಪ್ರಶ್ನಿಸಿ ಗುಪ್ತಾ ಅವರು ಕಾರಿನಿಂದ ಹೊರಬರುತ್ತಿದ್ದಂತೆ, ಆರೋಪಿಯು ಕಬ್ಬಿಣದ ರಾಡ್‌ನಿಂದ ಅವರ ಮೇಲೆ ದಾಳಿ ಮಾಡಿದ್ದಾನೆ. ರಾಡ್‌ನಿಂದ ಹೊಡೆದ ಪರಿಣಾಮ ಅವರ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ಕೈ ಮೂಳೆ ಮುರಿದಿದೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೇಳಿಕೆ ನೀಡಿರುವ ಅವರು, "ನಾನು ಕಾರಿನಿಂದ ಹೊರಬಂದು ಕೇಳಿದಾಗ, ಆ ಸಿಬ್ಬಂದಿ ಕಬ್ಬಿಣದ ರಾಡ್ ತಂದು ನನ್ನ ಮೇಲೆ ಎರಡು ಬಾರಿ ಹಲ್ಲೆ ನಡೆಸಿದನು. ಒಮ್ಮೆ ನನ್ನ ಕೈಗೆ ಹಾಗೂ ಇನ್ನೊಮ್ಮೆ ತಲೆಗೆ ಹೊಡೆದಿದ್ದಾನೆ. ನನ್ನ ಕೈ ಮೂಳೆ ಮುರಿದು, ತೀವ್ರ ರಕ್ತಸ್ರಾವವಾಯಿತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಆರೋಪಿತ ವ್ಯಕ್ತಿ ಗುಪ್ತಾ ಅವರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಯಾಗಲಿ ಅಥವಾ ಇತರ ಪಾರ್ಕಿಂಗ್ ಸಿಬ್ಬಂದಿಯಾಗಲಿ ಅವರ ನೆರವಿಗೆ ಬರಲಿಲ್ಲ. ತಾವು ತುರ್ತು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೂ ಅರ್ಧ ಗಂಟೆಯಾದರೂ ಪೊಲೀಸರು ಬರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಅಂತಿಮವಾಗಿ ರೆಸ್ಟೋರೆಂಟ್‌ನ ಶೆಫ್ ಒಬ್ಬರು ಮಧ್ಯಪ್ರವೇಶಿಸಿ, ಅವರ ಜೀವ ಉಳಿಸಿದರು ಎಂದು ಅವರು ಹೇಳಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಪ್ರಿಯಕರನ ವಿರುದ್ಧ ಹಲ್ಲೆ, ಕೊಲೆ ಶಂಕೆ: ಪೊಲೀಸ್ ತನಿಖೆ ಚುರುಕು

ಪೊಲೀಸರ ವಿರುದ್ದ ಆರೋಪ

ʼಘಟನೆ ನಡೆದಾಗ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ ಮತ್ತು ತುರ್ತು ಕರೆ ಮಾಡಿದರೂ 30 ನಿಮಿಷಗಳ ಕಾಲ ಪೊಲೀಸರು ಸ್ಥಳಕ್ಕೆ ತಲುಪಲಿಲ್ಲʼ ಎಂದು ಮಾಜಿ ಯೋಧ ಅಮಿತ್ ಕುಮಾರ್ ಆರೋಪಿಸಿದ್ದಾರೆ. ಅಂತಿಮವಾಗಿ ರೆಸ್ಟೋರೆಂಟ್‌ನ ಶೆಫ್ ಒಬ್ಬರು ಮಧ್ಯಪ್ರವೇಶಿಸಿ ಅವರ ಜೀವ ಉಳಿಸಿದ್ದಾರೆ. ಆಸ್ಪತ್ರೆಯ ಎಂಎಲ್‌ಸಿ ವರದಿಯಲ್ಲಿ ತಮ್ಮ ತಲೆಯ ಗಾಯ ಮತ್ತು ಮೂಳೆ ಮುರಿತದ ವಿವರಗಳನ್ನು ಸರಿಯಾಗಿ ನಮೂದಿಸಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಪ್ರಸ್ತುತ ಗುರುಗ್ರಾಮದ ಸೆಕ್ಟರ್-65 ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆ ಯತ್ನ ಪ್ರಕರಣದಡಿ ತನಿಖೆ ಆರಂಭವಾಗಿದೆ.