ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ನಾಯಿ ಕರೆದೊಯ್ಯುವ ವಿಚಾರಕ್ಕೆ ಮಹಿಳೆಯರಿಬ್ಬರ ನಡುವೆ ಮಾರಾಮಾರಿ: ವಿಡಿಯೊ ವೈರಲ್
Viral Video: ಕೇವಲ ಸಾಕು ನಾಯಿಯ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಭೀಕರ ಜಗಳ ನಡೆದಿದ್ದು ದೈಹಿಕ ಹಲ್ಲೆಯಾಗಿ ಮಾರ್ಪಟ್ಟಿದೆ. ಗಾಜಿಯಾಬಾದ್‌ನ ವಸತಿ ಸೊಸೈಟಿಯಲ್ಲಿ ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಕರೆದೊಯ್ಯುವ ವಿಚಾರವಾಗಿ ಜಗಳ ನಡೆದಿದ್ದು ಬಳಿಕ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಂಗ್ರಹ ಚಿತ್ರ -
ಉತ್ತರ ಪ್ರದೇಶ,ಸೆ.14: ಕ್ಷುಲ್ಲಕ ಕಾರಣದ ಜಗಳ ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದನ್ನು ನೀವು ನೋಡಿರಬಹುದು. ಇದೀಗ ಕೇವಲ ಸಾಕು ನಾಯಿಯ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಭೀಕರ ಜಗಳ ನಡೆದಿದ್ದು ದೈಹಿಕ ಹಲ್ಲೆಯಾಗಿ ಮಾರ್ಪಟ್ಟಿದೆ. ಗಾಜಿಯಾಬಾದ್‌ನ ವಸತಿ ಸೊಸೈಟಿಯಲ್ಲಿ ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಕರೆದೊಯ್ಯುವ ವಿಚಾರವಾಗಿ ಜಗಳ ನಡೆದಿದ್ದು ಬಳಿಕ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಸೆಪ್ಟೆಂಬರ್ 12 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಿನಾ ಎಂದು ಗುರುತಿಸಲಾದ ಶಿಕ್ಷಕಿ ಇಂದಿರಾಪುರಂನ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಗಾಜಿಯಾ ಬಾದ್‌ನ ರಾಜ್ ನಗರ ಎಕ್ಸ್‌ಟೆನ್ಶನ್‌ನಲ್ಲಿರುವ 'ವಿಂಡ್ಸರ್ ಪ್ಯಾರಡೈಸ್' ಸೊಸೈಟಿ ಲಿಫ್ಟ್‌ನಲ್ಲಿ ಸಾಕುನಾಯಿಯನ್ನು ಒಯ್ಯುವ ವಿಚಾರವಾಗಿ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ.
ವಿಡಿಯೋ ನೋಡಿ:
A dispute over taking a pet dog in a lift turned violent at a residential society in Ghaziabad, with a woman accused of assaulting a school teacher. The incident, reported from Windsor Paradise Society in Raj Nagar Extension, was captured on CCTV.
— NDTV (@ndtv) September 14, 2026
Read more:… pic.twitter.com/VCzlHZyMa5
ಶಾಲೆಯಿಂದ ಮನೆಗೆ ಹೋಗುತ್ತಿದ್ದ ಶಿಕ್ಷಕಿ ಹೀನಾ ಲಿಫ್ಟ್ ಹತ್ತಲು ಯತ್ನಿಸಿದಾಗ, ಅಲ್ಲಿ ಶ್ವೇತಾ ಸುಬೆ ಎಂದು ಗುರುತಿಸಲ್ಪಟ್ಟ ಮಹಿಳೆ ಈಗಾಗಲೇ ತನ್ನ ನಾಯಿಯೊಂದಿಗೆ ಇದ್ದಿದ್ದರು. ಶಿಕ್ಷಕಿಗೆ ಆಕೆ ಲಿಫ್ಟ್ ಒಳಗೆ ಬಾರದಂತೆ ಸೂಚಿಸಿದ್ದಳು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ವಿಕೋಪಕ್ಕೆ ಹೋದ ಗಲಾಟೆಯಲ್ಲಿ ಶ್ವೇತಾ ಎಂಬ ಮಹಿಳೆ ಕೋಲಿನಿಂದ ಶಿಕ್ಷಕಿಗೆ ಹೊಡೆದು, ಕೆನ್ನೆಗೆ ಸರಿಯಾಗಿ ಬಾರಿಸಿದ್ದಾರೆ. ತಕ್ಷಣವೇ ಶಿಕ್ಷಕಿ ಎದುರೇಟು ನೀಡಿದ್ದರಿಂದ ದೈಹಿಕ ಘರ್ಷಣೆಗೆ ಕಾರಣವಾಯಿತು. ಬಳಿಕ ಸೆಕ್ಯುರಿಟಿ ಗಾರ್ಡ್ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾರೆ.
ಘಟನೆಯ ವೀಡಿಯೊ ವೈರಲ್ ಆಗಿದ್ದು ಲಿಫ್ಟ್‌ನಲ್ಲಿ ಇಬ್ಬರು ಮಹಿಳೆಯರು ತೀವ್ರ ವಾಗ್ವಾದ ನಡೆಸುತ್ತಿರುವುದನ್ನು ತೋರಿಸುತ್ತದೆ. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನು ಕೋಲಿನಿಂದ ಹೊಡೆದು ನಂತರ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬರುತ್ತದೆ. ಆಗ ಇನ್ನೊಬ್ಬ ಮಹಿಳೆ ಕೂಡ ಪ್ರತಿದಾಳಿ ನಡೆಸುತ್ತಾಳೆ, ಇದರಿಂದಾಗಿ ದೈಹಿಕ ವಾಗ್ವಾದ ಉಂಟಾಗುತ್ತದೆ.
ಘಟನೆಯ ನಂತರ, ಹಿನಾ ನಂದಗ್ರಾಮ್ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್ ಮತ್ತು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದರು. ದೂರನ್ನು ಪರಿಶೀಲಿಸ ಲಾಗುತ್ತಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.