ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

100 ಕಿ.ಮೀ ಚೇಸಿಂಗ್‌: 15 ಗಂಟೆ, 170 ಸಿಸಿಟಿವಿಗಳ ಪರಿಶೀಲನೆ, ಕಿಡ್ನಾಪ್‌ ಆಗಿದ್ದ ಮಗು ಕೊನೆಗೂ ಸಿಕ್ಕಿದ್ದೇಗೆ?

Child Rescued from Kidnapper: ಘಟನೆ ನಡೆದ ದಿನ, ಮಗುವಿನ ಪೋಷಕರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬೈಕ್ ಸ್ಟಾರ್ಟ್ ಆಗುತ್ತಿರುವುದನ್ನು ಕೇಳಿಸಿಕೊಂಡರು. ತನ್ನ ಐದು ವರ್ಷದ ಮಗನೊಂದಿಗೆ ಆರೋಪಿ ಲಲಿತ್ ಬೈಕ್‌ನಲ್ಲಿ ಹೋಗುವುದನ್ನು ಅವರು ನೋಡುತ್ತಿದ್ದರು. ಬಹಳ ಸಮಯದ ನಂತರ ಇಬ್ಬರೂ ಹಿಂತಿರುಗದಿದ್ದಾಗ ಭಯಗೊಂಡಿದ್ದಾರೆ.

100 ಕಿ.ಮೀ ಬೆನ್ನಟ್ಟಿದ ಪೊಲೀಸರು: ಅಪಹರಣಕಾರನಿಂದ ಮಗು ರಕ್ಷಣೆ

ಅಪಹರಣಕಾರನಿಂದ ಮಗು ರಕ್ಷಣೆ -

Priyanka P
Priyanka P Sep 22, 2026 3:40 PM

ಅಹಮದಾಬಾದ್, ಸೆ.22: ಅಪಹರಣಕ್ಕೊಳಗಾದ ಐದು ವರ್ಷದ ಮಗುವನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ರಕ್ಷಿಸಿರುವ ಘಟನೆ ಗುಜರಾತ್‌ (Gujarat)ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ. 15 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ 170 ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಅಂತಿಮವಾಗಿ ರಾಜ್‌ಕೋಟ್ ಜಿಲ್ಲೆಯಲ್ಲಿ ಶಂಕಿತನನ್ನು ಬಂಧಿಸಲಾಯಿತು. ಅಮ್ರೇಲಿಯ ಮೋಟಾ (Crime news) ಅಂಕಾದಿಯಾ ಗ್ರಾಮದಲ್ಲಿ ಅಪಹರಣ ನಡೆದಿದೆ. ಶಂಕಿತನನ್ನು 25 ವರ್ಷದ ಲಲಿತ್ ರೂಪಸಿಂಗ್‌ಭಾಯ್ ಜಾಮ್ರೆ ಎಂದು ಗುರುತಿಸಲಾಗಿದೆ .

ಆರು ತಿಂಗಳ ಹಿಂದೆ ಮಗುವಿನ ಕುಟುಂಬವನ್ನು ಮೊದಲ ಬಾರಿಗೆ ಭೇಟಿಯಾಗಿದ್ದ. ಅಪಹರಣಕ್ಕೆ ಸುಮಾರು 10 ದಿನಗಳ ಮೊದಲು ಆರೋಪಿ ಲಲಿತ್ ಮತ್ತೆ ಕಾಣಿಸಿಕೊಂಡ. ಕೆಲಸ ಸಿಗುವವರೆಗೆ ತಾತ್ಕಾಲಿಕ ಆಶ್ರಯ ನೀಡುವಂತೆ ಕೋರಿದ್ದಾನೆ. ಮಗುವಿನ ತಂದೆ, ಮಧ್ಯಪ್ರದೇಶದಿಂದ ವಲಸೆ ಬಂದ ಕೃಷಿ ಕಾರ್ಮಿಕ ರಾಕೇಶ್ ಬಮಾನಿಯಾ ಅವರು ಅವನನ್ನು ನಂಬಿದರು. ಆತ ನಂಬಿಕಸ್ಥ. ಪರಿಚಯಸ್ಥ ಎಂದು ನಂಬಿದ ಅವರು ಅವನಿಗೆ ಆಶ್ರಯ ನೀಡಲು ಒಪ್ಪಿಕೊಂಡರು.

ಘಟನೆ ನಡೆದ ದಿನ, ಮಗುವಿನ ಪೋಷಕರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬೈಕ್ ಸ್ಟಾರ್ಟ್ ಆಗುತ್ತಿರುವುದನ್ನು ಕೇಳಿಸಿಕೊಂಡರು. ತನ್ನ ಐದು ವರ್ಷದ ಮಗನೊಂದಿಗೆ ಆರೋಪಿ ಲಲಿತ್ ಬೈಕ್‌ನಲ್ಲಿ ಹೋಗುವುದನ್ನು ಅವರು ನೋಡುತ್ತಿದ್ದರು. ಬಹಳ ಸಮಯದ ನಂತರ ಇಬ್ಬರೂ ಹಿಂತಿರುಗದಿದ್ದಾಗ ರಾಕೇಶ್ ಭಯಗೊಂಡಿದ್ದಾರೆ. ನೆರೆಯ ತೋಟದ ಮಾಲೀಕರಿಗೆ ಈ ವಿಷಯವನ್ನು ತಿಳಿಸಿದರು. ಕೂಡಲೇ ಅವರು ಅಮ್ರೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದರು.

4 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ: ಎನ್‌ಕೌಂಟರ್‌ ಮೂಲಕ ಪಾಪಿಯನ್ನು ಹೊಡೆದುರುಳಿಸಿದ ಖಾಕಿ ಪಡೆ

ಅಪಹರಣ ಪ್ರಕರಣದ ತನಿಖೆ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಏಕೆಂದರೆ ಲಲಿತ್ ಬಳಿ ಮೊಬೈಲ್ ಫೋನ್ ಇರಲಿಲ್ಲ. ಹೀಗಾಗಿ ಮೊಬೈಲ್‌ಫೋನ್‌ನ ಸ್ಥಳವನ್ನು ತಾಂತ್ರಿಕವಾಗಿ ಟ್ರ್ಯಾಕ್ ಮಾಡುವ ಮೂಲಕ ಆತನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಪೊಲೀಸರ ಬಳಿ ಇದ್ದ ಪ್ರಮುಖ ಸುಳಿವೆಂದರೆ, ಶಂಕಿತನ ಹೆಸರು ಮತ್ತು ಕಳ್ಳತನವಾಗಿದ್ದ ಬೈಕ್‌ನ ನೋಂದಣಿ ಸಂಖ್ಯೆ ಮಾತ್ರ. ಈ ಮಾಹಿತಿಯನ್ನು ಆಧರಿಸಿ ಪೊಲೀಸರು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿದರು.

ಅಮ್ರೇಲಿ ಸ್ಥಳೀಯ ಅಪರಾಧ ವಿಭಾಗ ಮತ್ತು ಅಮ್ರೇಲಿ ಗ್ರಾಮೀಣ ಪೊಲೀಸ್ ಠಾಣೆಯ ಐದು ವಿಶೇಷ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು. 15 ಗಂಟೆಗಳ ಕಾಲ ನಡೆದ ಸೂಕ್ಷ್ಮ ತನಿಖೆಯಲ್ಲಿ ಅಧಿಕಾರಿಗಳು 170ಕ್ಕೂ ಹೆಚ್ಚು ಸ್ಥಳಗಳಿಂದ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ವಿಶ್ಲೇಷಿಸಿದರು. ಅಂತಿಮವಾಗಿ ರಾಜ್‌ಕೋಟ್‌ನ ಗೊಂಡಲ್ ಕಡೆಗೆ ಶಂಕಿತನ ಮಾರ್ಗವನ್ನು ಗುರುತಿಸಿತು.

ಅಧಿಕಾರಿಗಳು, ರಾಜ್‌ಕೋಟ್‌ನ ವೀರ್‌ಪುರ ಪ್ರದೇಶದಾದ್ಯಂತ ಇರುವ ಸ್ಥಳೀಯ ಆಶ್ರಯ ತಾಣಗಳು, ತಿನಿಸು ಮಳಿಗೆಗಳು, ಅತಿಥಿ ಗೃಹಗಳು ಮತ್ತು ಕೃಷಿ ಭೂಮಿಯನ್ನು ಪರಿಶೀಲಿಸಿದರು. ಅಂತಿಮವಾಗಿ ಮಗುವನ್ನು ಅಪಹರಿಸಿದ ಸ್ಥಳದಿಂದ 100 ಕಿಲೋಮೀಟರ್‌ಗಳಿಗೂ ಹೆಚ್ಚು ದೂರದಲ್ಲಿ ಲಲಿತ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಐದು ವರ್ಷದ ಮಗುವನ್ನು ಸುರಕ್ಷಿತವಾಗಿ ವಶಪಡಿಸಿಕೊಂಡರು. ಅಪಹರಣ ಮಾಡಲು ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.