ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕರೆಂಟ್ ಶಾಕ್ ಕೊಡಿಸಿ, ಬಲವಂತವಾಗಿ ಮೂತ್ರ ಕುಡಿಸಿದ ಸ್ವಯಂ ಘೋಷಿತ ದೇವಮಾನವ; ಬಗೆದಷ್ಟು ಹೊರ ಬರುತ್ತಿದೆ ಕಾಮಕಾಂಡ

Self-Styled Godman Arrested: ಸ್ವಯಂ ಘೋಷಿತ ದೇವಮಾನವ ಮತ್ತು ಆತನ ಸಹಚರರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ. ಮಹಿಳೆಯೊಬ್ಬರ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿ ಆತ ಇದೀಗ ಕಾನೂನು ಬಲೆಗೆ ಬಿದ್ದಿದ್ದಾನೆ. ತಾನು ದೇವರ ಅವತಾರ ಎಂದು ಮಹಿಳೆಯ ಮನವೊಲಿಸಿದ್ದ ಬಾಬಾ ಆಕೆಗೆ ತನ್ನ ಮೂತ್ರವನ್ನೂ ಕುಡಿಸಿದ್ದ.

ಮಹಿಳೆಗೆ ಬಲವಂತವಾಗಿ ಮೂತ್ರ ಕುಡಿಸಿದ ಸ್ವಯಂ ಘೋಷಿತ ದೇವಮಾನವ!

ರಾಧೇಶ್ಯಾಮ್ ಮಿಶ್ರಾ ಮತ್ತು ಆತನ ಆಶ್ರಮ -

Priyanka P
Priyanka P Jun 18, 2026 7:34 PM

ಮುಂಬೈ, ಜೂ. 18: ಸ್ವಯಂ ಘೋಷಿತ ದೇವಮಾನವ (Self-Styled Godman) ಮತ್ತು ಆತನ ಸಹಚರರನ್ನು ಮಹಾರಾಷ್ಟ್ರದ (Maharashtra) ಪುಣೆಯಲ್ಲಿ ಬಂಧಿಸಲಾಗಿದೆ. ಮಹಿಳೆಯೊಬ್ಬರ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭಿರ ಆರೋಪ ಆತನ ವಿರುದ್ಧ ಕೇಳಿ ಬಂದಿದೆ. ಮಹಿಳೆಗೆ ಪತಿಯಿಂದ ವಿಚ್ಛೇದನ ಪಡೆಯುವಂತೆ ಒತ್ತಾಯಿಸಿದ್ದಲ್ಲದೆ, ಕಳವು ಮಾಡಲು ಪ್ರೇರೇಪಿಸಿದ್ದಾನೆ. ಅಲ್ಲದೆ, ಆಕೆಗೆ ವಿದ್ಯುತ್ ಶಾಕ್ ನೀಡುವ ಮೂಲಕ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ. ತಾನು ದೇವರ ಅವತಾರ ಎಂದು ಮಹಿಳೆಯನ್ನು ಮನವೊಲಿಸಿದ್ದ ಬಾಬಾ ಆಕೆಗೆ ತನ್ನ ಮೂತ್ರವನ್ನೂ ಕುಡಿಸಿದ್ದ! ಪ್ರಕರಣ ಸಂಬಂಧ ಬಾಬಾ ಜತೆಗೆ ಆತನ ಸಹಚರರನ್ನು ಬಂಧಿಸಲಾಗಿದೆ (crime news).

ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಎಂಬಾತ ಪುಣೆಯ ವಾಘೋಲಿಯ ಉಬಾಳೆ ನಗರದಲ್ಲಿ ಆಧುನಿಕ ಗುರುಕುಲ ಎಂದು ಕರೆಯುತ್ತಿದ್ದ ಕೇಂದ್ರವನ್ನು ನಡೆಸುತ್ತಿದ್ದ. ಮಿಶ್ರಾ ಹಲವು ವರ್ಷಗಳಿಂದ ಜನರನ್ನು ಶೋಷಿಸುತ್ತಿದ್ದ. ಸಂತ್ರಸ್ತ ಮಹಿಳೆ ಸುಮಾರು 2010ರ ವೇಳೆಗೆ ಆತನ ಸಂಪರ್ಕಕ್ಕೆ ಬಂದಿದ್ದು, ಬಳಿಕ ಆತನ ಪ್ರಭಾವಕ್ಕೆ ಒಳಗಾಗಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕಾಲಾನಂತರದಲ್ಲಿ, ದೇವಮಾನವ ಆ ಮಹಿಳೆಯನ್ನು ಆಕೆಯ ಕುಟುಂಬದಿಂದ ಪ್ರತ್ಯೇಕಿಸಿ, ಅವರ ಪತಿಗೆ ವಿಚ್ಛೇದನ ನೀಡಿದ್ದಾನೆ. 2010 ಮತ್ತು 2016ರ ನಡುವೆ ಲೈಂಗಿಕವಾಗಿ ಶೋಷಿಸಿದ್ದು, ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಕರೆಂಟ್ ಶಾಕ್ ಕೂಡ ನೀಡಿದ್ದಾನೆ. ಅಲ್ಲದೆ, ಅಶ್ಲೀಲ ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ. ಆ ವಿಡಿಯೊಗಳನ್ನು ಬಳಸಿ ಆ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು.

ಪತಿಯನ್ನು ಹೊರಗೆ ಕೂರಿಸಿ, ಮಾದಕ ದ್ರವ್ಯ ಕೊಟ್ಟು ಮಹಿಳೆ ಮೇಲೆ ಅತ್ಯಾಚಾರ

ಮಿಶ್ರಾ ಮತ್ತು ಅವನ ಸಹಾಯಕರು ಆ ಮಹಿಳೆ ಮತ್ತು ಇತರ ಅನೇಕ ಅನುಯಾಯಿಗಳು ತಾನು ದೇವರ ಪುನರ್ಜನ್ಮ ಎಂದು ನಂಬುವಂತೆ ಮಾಡಿ ತನ್ನ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದ. ಆ ಆರು ವರ್ಷಗಳಲ್ಲಿ ಅವನು ತನ್ನನ್ನು ಮತ್ತು ತನ್ನ ಆಶ್ರಮವನ್ನು ಶ್ರೀಮಂತಗೊಳಿಸಲು ಅವಳಿಂದ ಕಳ್ಳತನವನ್ನೂ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪೊಲೀಸರು ಮಿಶ್ರಾ ಆಶ್ರಮದ ಮೇಲೆ ದಾಳಿ ನಡೆಸಿ, ಭೂಗತ ಕೊಠಡಿಯಿಂದ ಅಪಾರ ಪ್ರಮಾಣದ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡರು. 12 ಲ್ಯಾಪ್‌ಟಾಪ್‌ಗಳು, 11 ಮೊಬೈಲ್ ಫೋನ್‌ಗಳು, 19 ಹಾರ್ಡ್ ಡ್ರೈವ್‌ಗಳು ಮತ್ತು ಹಲವು ಪೆನ್‌ಡ್ರೈವ್‌ಗಳು ಮತ್ತು ಕ್ಯಾಸೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 6.5 ಲಕ್ಷ ರುಪಾಯಿ ನಗದು ಮತ್ತು 15 ಲಕ್ಷ ರುಪಾಯಿ ಮೌಲ್ಯದ ಆಭರಣಗಳು ಮತ್ತು ಮಾತ್ರೆಗಳು ಹಾಗೂ ಔಷಧಗಳ ದೊಡ್ಡ ಸಂಗ್ರಹ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಾಧನಗಳ ಸಂಪೂರ್ಣ ವಿಧಿವಿಜ್ಞಾನ ಪರೀಕ್ಷೆ ಪ್ರಸ್ತುತ ನಡೆಯುತ್ತಿದೆ.

ಮಿಶ್ರಾ ಮತ್ತು ಆಪ್ತ ಸಹಾಯಕ ಸ್ವಾಮಿ ಕನ್ವಾಲ್ ನಯನ್ ಸೇರಿ ಏಳು ಸಹಚರರನ್ನು ಬಂಧಿಸಲಾಗಿದೆ. ಇನ್ನೂ ಹೆಚ್ಚಿನ ಸಂತ್ರಸ್ತರು ಮುಂದೆ ಬರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ವಿವರ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಂಟು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಜೂನ್‌ 20ರವರೆಗೆ ಕಸ್ಟಡಿಗೆ ನೀಡಲಾಗಿದೆ.