Viral Video: ಹೋಂ ವರ್ಕ್ ಮಾಡದ್ದಕ್ಕೆ ಇದೆಂಥಾ ಶಿಕ್ಷೆ!? ಬಾಲಕನನ್ನು ತಲೆ ಕೆಳಗಾಗಿ ನೇತುಹಾಕಿ ಥಳಿಸಿದ ಶಿಕ್ಷಕಿ
Student Punished Brutally: ಹರಿಯಾಣದ ಪಾಣಿಪತ್‌ನ ಖಾಸಗಿ ಶಾಲೆಯಲ್ಲಿ ನಡೆದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕೊಟ್ಟ ಹೋಮ್‌ವರ್ಕ್ ಮಾಡಿಲ್ಲ ಎಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಯನ್ನು ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಯ ಕೈಕಾಲು ಕಟ್ಟಿ, ತಲೆಕೆಳಕೆ ಮಾಡಿ ಕಿಟಕಿಗೆ ನೇತುಹಾಕಿ ಥಳಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಘಟನೆ ಆಗಸ್ಟ್ ತಿಂಗಳಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ದೃಶ್ಯ -

ಪಾಣಿಪತ್: ಹರಿಯಾಣದ (Haryana) ಪಾಣಿಪತ್‌ನ (Panipat) ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಯನ್ನು ಹೋಮ್ ವರ್ಕ್ (Home Work) ಮಾಡದ ಕಾರಣಕ್ಕೆ ಶಿಕ್ಷಕಿಯೊಬ್ಬಳು (Teacher) ಕೈಕಾಲು ಕಟ್ಟಿ, ತಲೆಕೆಳಗಾಗಿ ಕಿಟಕಿಗೆ ನೇತುಹಾಕಿ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆಗಸ್ಟ್ 13 ರಂದು ನಡೆದ ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯನ್ನು ಮೇಲಿನ ಮಹಡಿಯ ಕೊಠಡಿಗೆ ಕರೆದೊಯ್ದು, ಹಗ್ಗದಿಂದ ಕಟ್ಟಿ, ಕಿಟಕಿಗೆ ತಲೆಕೆಳಗಾಗಿ ನೇತುಹಾಕಿದ್ದಾಳೆ. ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿ, ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದಳು. ಈ ವಿಡಿಯೋ ಮಗುವಿನ ಕುಟುಂಬಕ್ಕೆ ತಲುಪಿದಾಗ, ಅವರು ಶಾಲೆಗೆ ದೂರು ನೀಡಲು ತೆರಳಿದರು. ಆದರೆ, ಶಾಲಾ ಆಡಳಿತ ಮಂಡಳಿ ನಮಗೆ ಏನೂ ಗೊತ್ತಿಲ್ಲ ಎಂದು ಮುಚ್ಚಿಟ್ಟಿದೆ. ಕುಟುಂಬವು ಮಾಡೆಲ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದೆ.
हरियाणा के पानीपत में एक प्राइवेट स्कूल में होमवर्क न करने पर मासूमों की बर्बरता से पिटाई
— Maktoob Hindi (@maktoobhindi) September 29, 2025
एक को खिड़की से उल्टा लटकाया
बच्चों की बेरहमी से पिटाई के आरोप में प्रिंसिपल-ड्राइवर गिरफ्तार
Watch: pic.twitter.com/q3TjFLKgTM
ಈ ಸುದ್ದಿಯನ್ನು ಓದಿ: Viral News: "ಅಮ್ಮಾ ಪ್ಲೀಸ್ ಹೊಡಿಬೇಡಾ..."; ಚಿಕನ್ ಕೇಳಿದ್ದ ಮಗನನ್ನು ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ
ದೂರಿನ ಆಧಾರದ ಮೇಲೆ, ಪೊಲೀಸರು ಶಿಕ್ಷಕಿ ಮತ್ತು ಶಾಲೆಯ ಬಸ್ ಚಾಲಕನ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಶಿಕ್ಷಕಿಯ ಸಂಬಂಧಿಕರು ದೂರು ಹಿಂಪಡೆಯಲು ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಮಾಡೆಲ್ ಟೌನ್ SHO, ಆರೋಪಿಗಳನ್ನು ಬಂಧಿಸಲು ದಾಳಿ ನಡೆಸಿದ್ದೇವೆ. ಶೀಘ್ರದಲ್ಲಿ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಶಾಲೆಯ ಮತ್ತೊಂದು ವಿಡಿಯೊ ವೈರಲ್ ಆಗಿದ್ದು, ಶಿಕ್ಷಕಿಯೊಬ್ಬಳು ಮಕ್ಕಳಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಾಣಿಸಿದೆ. ಅಲ್ಲದೆ ಚಾಲಕನ ಕೈಯಿಂದಲೂ ಥಳಿಸಿದ್ದಳು ಎಂದು ಆರೋಪಿಸಲಾಗಿದೆ. ಈ ವಿಡಿಯೋದ ಆಧಾರದ ಮೇಲೆ ಪ್ರಾಂಶುಪಾಲರ ವಿರುದ್ಧವೂ ಕೇಸ್ ದಾಖಲಾಗಿದೆ. ಶಾಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಗಂಭೀರ ಚಿಂತೆಗೆ ಕಾರಣವಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಕಠಿಣ ಕ್ರಮ ಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಇಂತಹ ಕೃತ್ಯಕ್ಕೆ ಶಿಕ್ಷೆಯಾಗಲೇಬೇಕು ಎಂದು ಜನರು ಆಗ್ರಹಿಸಿದ್ದಾರೆ.