ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

I Love Muhammad: ಮಹಾರಾಷ್ಟ್ರದಲ್ಲೂ ಭುಗಿಲೆದ್ದ 'ಐ ಲವ್ ಮುಹಮ್ಮದ್' ವಿವಾದ; ಭಾರೀ ಘರ್ಷಣೆ- 30 ಜನರ ಬಂಧನ

ಉತ್ತರ ಪ್ರದೇಶದಲ್ಲಿ ಐ ಲವ್ ಮುಹಮ್ಮದ್ ವಿವಾದವು ಮತ್ತಷ್ಟು ಕಾವೇರಿದ್ದು, ಪರಿಸ್ಥಿತಿಯ ನಿಯಂತ್ರಣ ಕಳೆದುಕೊಂಡಿದೆ. ಬರೇಲಿಯಲ್ಲಿ ಇಸ್ಲಾಮಿಕ್ ಧರ್ಮಗುರು ಮೌಲಾನಾ ತೌಕೀರ್ ರಜಾ ‘ಐ ಲವ್ ಮುಹಮ್ಮದ್’ ಪೋಸ್ಟರ್‌ಗಳ ಬೆಂಬಲವಾಗಿ ಧರಣಿ ನಡೆಸುವುದಾಗಿ ಘೋಷಿಸಿದ್ದರು. ಆದರೆ, ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಕಾರಣ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತು. ಇದೀಗ ವಿಡಿಯೊ ಸೋಮವಾರ ಬೆಳಗ್ಗೆ ವೈರಲ್ ಆಗಿ, ಪ್ರತಿಭಟನೆಗೆ ಕಾರಣವಾಗಿದ್ದು, ಇದರಿಂದ ಉದ್ವಿಗ್ನತೆ ಹೆಚ್ಚಾಗಿ, ಹಿಂಸೆಗೆ ತಿರುಗಿತು.

I LOVE ಮುಹಮ್ಮದ್ ವಿವಾದಕ್ಕೆ ಕಾರಣಕರ್ತರು ಯಾರು ಗೊತ್ತಾ...?

-

Profile Sushmitha Jain Sep 29, 2025 5:54 PM

ಅಹಲ್ಯಾನಗರ: ಉತ್ತರ ಪ್ರದೇಶದ (Uttar Pradesh) ಬಳಿಕ ಮಹಾರಾಷ್ಟ್ರದ (Maharashtra) ಅಹಲ್ಯಾನಗರ (ಅಹಮದ್‌ನಗರ್) ಜಿಲ್ಲೆಯ ಮಿಲಿವಾಡಾ ಪ್ರದೇಶದಲ್ಲಿ ಭಾನುವಾರ ರಾತ್ರಿ ರಸ್ತೆಯ ಮೇಲೆ ರಂಗೋಲಿಯಲ್ಲಿ ‘ಐ ಲವ್ ಮುಹಮ್ಮದ್’ (I love Muhammad) ಎಂಬ ಬಿಡಿಸಿದ್ದು ಬೆಳಕಿಗೆ ಬಂದಿದೆ. ಇದರ ವಿಡಿಯೊ ಸೋಮವಾರ ಬೆಳಗ್ಗೆ ವೈರಲ್(Viral Video) ಆಗಿ, ಪ್ರತಿಭಟನೆಗೆ ಕಾರಣವಾಗಿದ್ದು, ಇದರಿಂದ ಉದ್ವಿಗ್ನತೆ ಹೆಚ್ಚಾಗಿ, ಹಿಂಸೆಗೆ ತಿರುಗಿತು.

ರಂಗೋಲಿ ಬಿಡಿಸಿದ್ದನ್ನು ಕಂಡು ಆಕ್ರೋಶಗೊಂಡ ಮುಸ್ಲಿಂ ಯುವಕರು ಅಹಲ್ಯಾನಗರ-ಸಂಭಾಜಿ ಹೈವೇಯನ್ನು ಬಂದ್ ಮಾಡಿ ಪ್ರತಿಭಟಿಸಿದರು. ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನಿಡಿದ ನಂತರ ರಂಗೋಲಿ ಬಿಡಿಸಿದ್ದ ಒಬ್ಬರನ್ನು ಪೊಲೀಸರು ಬಂಧಿಸಿದರು. ಆದರೆ, ಪ್ರತಿಭಟಕರು ಕೋಟ್ಲಾ ಪ್ರದೇಶದಲ್ಲಿ ಜಮಾಯಿಸಿದರು. ಬೆಳಗ್ಗೆ 7 ಗಂಟೆಗೆ ಪೊಲೀಸರು ಪರಿಸ್ಥಿತಿಯನ್ನು ಶಾಂತಿಗೊಳಿಸಲು ಯತ್ನಿಸಿದಾಗ, ಕಲ್ಲೆಸೆತ ಆರಂಭವಾಯಿತು. ಆದರೆ, ಲಘು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು. 30 ಜನರನ್ನು ವಶಕ್ಕೆ ತೆಗೆದುಕೊಂಡು, ಹಿಂಸೆಗೆ ಸಂಬಂಧಿಸಿ ಹೊಸ FIR ದಾಖಲಿಸಲಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಇದು ಸಾಮಾಜಿಕ ಅಶಾಂತಿಗೆ ಷಡ್ಯಂತ್ರವಿರಬಹುದು. ಜನರ ನಡುವೆ ಭಿನ್ನಾಭಿಪ್ರಾಯ ಬಿತ್ತುವುದು ತಪ್ಪು” ಎಂದು ಹೇಳಿದ್ದಾರೆ. “ಲೋಕಸಭೆ ಚುನಾವಣೆಯಂತೆ ಧ್ರುವೀಕರಣದ ಯತ್ನವಿರಬಹುದು” ಎಂದು ಶಂಕಿಸಿದ್ದಾರೆ. BJP ಇದನ್ನು ರಾಜಕೀಯ ಒಳಸಂಚು ಎಂದು ಕರೆದಿದೆ.

ಈ ಸುದ್ದಿಯನ್ನೂ ಓದಿ: Vijay-AIADMK Alliance: ಚುನಾವಣೆಗೂ ಮುನ್ನ ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬೆಳವಣಿಗೆ; ವಿಜಯ್-ಎಐಎಡಿಎಂಕೆ ಮೈತ್ರಿಕೂಟ ಸಾಧ್ಯತೆ

‘ಐ ಲವ್ ಮುಹಮ್ಮದ್’ ವಿವಾದ ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯಿಂದ ಆರಂಭವಾಯಿತು. ಈ ಬ್ಯಾನರ್‌ಗೆ ಹಿಂದೂ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದವು. ಬರೇಲಿ, ಬರಬಂಕಿಯಲ್ಲಿ ಹಿಂಸೆ ನಡೆಯಿತು. ಉತ್ತರಾಖಂಡ್, ತೆಲಂಗಾಣ, ಮಹಾರಾಷ್ಟ್ರದ ನಾಗ್‌ಪುರ್‌ನಲ್ಲಿ ಸಹ ಪ್ರತಿಭಟನೆಗಳು ನಡೆದಿವೆ. AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ, “ಈ ಹೇಳಿಕೆ ಅಪರಾಧವಲ್ಲ” ಎಂದು ಬೆಂಬಲಿಸಿದ್ದಾರೆ. ಯೋಗಿ ಆದಿತ್ಯನಾಥ್ ಇದನ್ನು ಧಾರ್ಮಿಕ ಉಗ್ರತೆಯ ಘರ್ಷಣೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಪೊಲೀಸರು ಎಚ್ಚರಿಕೆಯಿಂದ ಇದ್ದಾರೆ. ಸಾಮಾಜಿಕ ಜಾಲತಾಣದಿಂದ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಗಂಗೋಲಿ ಷಡ್ಯಂತ್ರದ ಭಾಗವೇ ಎಂದು ತನಿಖೆ ನಡೆಯುತ್ತಿದೆ. ಶಾಂತಿ ಕಾಪಾಡಿ ಎಂದು ಅಧಿಕಾರಿಗಳು ಕರೆ ನೀಡಿದ್ದಾರೆ.