Rajendra Singh Babu: ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ 4.37 ಲಕ್ಷ ವಂಚನೆ; ಡಬ್ಬಿಂಗ್ ನೆಪದಲ್ಲಿ ಖಾತೆಯಿಂದ ಹಣ ದೋಚಿದ ಸೈಬರ್ ಕಳ್ಳರು
Cyber Crime: 'ರಕ್ತ ಕಾಶ್ಮೀರ' ಸಿನಿಮಾ ಡಬ್ಬಿಂಗ್ ನೆಪದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಆಧಾರ್ ಸಂಖ್ಯೆ, ಪಾನ್ ಕಾರ್ಡ್ ವಿವರವನ್ನು ಪಡೆದ ಸೈಬರ್ ವಂಚಕರು, ಖಾತೆಯಿಂದ ಲಕ್ಷ ಲಕ್ಷ ಹಣ ದೋಚಿದ್ದಾರೆ. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

-

ಬೆಂಗಳೂರು: ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಮಾಡಿದ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರಿಗೆ ಸೈಬರ್ ಖದೀಮರು (Cyber Crime) ವಂಚಿಸಿರುವ ವಿಷಯ ಬೆಳಕಿಗೆ ಬಂದಿದೆ. ಸಿನಿಮಾ ಡಬ್ಬಿಂಗ್ ಹೆಸರಲ್ಲಿ ಸೈಬರ್ ಕಳ್ಳರು, ಬರೋಬ್ಬರಿ 4.37 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ.
'ರಕ್ತ ಕಾಶ್ಮೀರ' ಸಿನಿಮಾ ಡಬ್ಬಿಂಗ್ ನೆಪದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಆಧಾರ್ ಸಂಖ್ಯೆ, ದಾಖಲೆಗಳ ವಿವರವನ್ನು ಪಡೆದ ಸೈಬರ್ ವಂಚಕರು ಅವರ ಖಾತೆಯಿಂದ ಲಕ್ಷ ಲಕ್ಷ ಹಣ ದೋಚಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು, ರಕ್ತ ಕಾಶ್ಮೀರ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ಬಿಂಗ್ ಮಾಡಿಸಲು ಡಿಸ್ಟ್ರಿಬ್ಯೂಟರ್ ಒಬ್ಬರು, ಯಾರೋ ವ್ಯಕ್ತಿಯ ಜತೆ ಫೋನ್‌ನಲ್ಲಿ ಮಾತನಾಡಿಸಿದರು. ಡಬ್ಬಿಂಗ್ ರೈಟ್ಸ್ ನೀಡಲು 1.40 ಕೋಟಿ ರೂ.ಗೆ ಅಗ್ರಿಮೆಂಟ್ ಫಿಕ್ಸ್ ಆಯ್ತು. ಅದಾದ ನಂತರ ಆ ವ್ಯಕ್ತಿ ನನ್ನ ಅಕೌಂಟ್ ನಂಬರ್, ಪ್ಯಾನ್, ಆಧಾರ್ ವಿವರ ತಗೊಂಡಿದ್ದ. ನಿಮಗೆ ಬ್ಲೂಡಾರ್ಟ್‌ನಲ್ಲಿ ಅಗ್ರಿಮೆಂಟ್ ಕಳುಹಿಸಿದ್ದೇನೆ ಎಂದು ಹೇಳಿದ್ದ. ಆದರೆ, ಕೊರಿಯರ್‌ನಲ್ಲಿ ಖಾಲಿ ಕವರ್ ಇತ್ತು. ಹೀಗಾಗಿ ಮೋಸ ಹೋಗಿರುವುದು ಗೊತ್ತಾದ ಮೇಲೆ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Sudha Murthy: ಇನ್ಫೋಸಿಸ್ ಸುಧಾಮೂರ್ತಿಗೆ ಸೈಬರ್ ಕಳ್ಳರ ಕಾಟ; ದೂರು ದಾಖಲು
ಡಬ್ಬಿಂಗ್‌ಗೆ ಮಾತುಕತೆ ನಡೆಸಿದ್ದ ವ್ಯಕ್ತಿಗೆ ಫೋನ್ ಮಾಡಿ, ದುಡ್ಡು ಬಂದಿಲ್ಲ ಕೇಳಿದೆ. ಆದರೆ ಮೂರ್ನಾಲ್ಕು ದಿನಗಳ ನಂತರ ಆತನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬಳಿಕ 4.37 ಲಕ್ಷ ಹಣವನ್ನು ಖಾತೆಯಿಂದ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಶಿಕ್ಷಕಿಗೆ ರೇಪ್ ಬೆದರಿಕೆ, ದರ್ಶನ್ ಅಭಿಮಾನಿಗಳ ಹೆಸರಿನ ಕೇಡಿಗಳ ವಿರುದ್ಧ ದೂರು ದಾಖಲು
ಬೆಂಗಳೂರು : ಶಾಲಾ ಶಿಕ್ಷಕಿಯನ್ನು ಗುರಿಯಾಗಿಸಿ ಫೇಸ್ ಬುಕ್‌ನಲ್ಲಿ ಅಶ್ಲೀಲ ಸಂದೇಶದ ಪೋಸ್ಟ್ ಹಾಕಿ ರೇಪ್ ಬೆದರಿಕೆ (threat) ಒಡ್ಡಿದ ಆರೋಪದಡಿ ನಟ ದರ್ಶನ್ (Actor darshan) ಅಭಿಮಾನಿಗಳು ಎನ್ನಲಾದವರು ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಂಚಶೀಲ ನಗರದ ನಿವಾಸಿ ಅಜಿತ್ ಆನಂದ ಹೆಗಡೆ ಎಂಬವರು ದೂರು ನೀಡಿದ್ದಾರೆ.
ದೂರಿನ ಮೇರೆಗೆ ಖದರ್ ಕನ್ನಡಿಗ ಫೇಸ್ಬುಕ್ ಪೇಜ್, ನವೀನ್, ಹರೀಶ್ ನಾಯ್ಕ, ಕೆಂಚ ತೂಗುದೀಪ, ಭೀಮ್ಸ್ ಬೋಸಾಯಮ್, ಮಾಕ್ಸ್ವೆಲ್ ಗೌತಮ್, ರವಿ ದರ್ಶನ್, ಪ್ರವೀನ್ ಶೆಟ್ಟಿ, ಇಡ್ಲಿ ಸೋಮ, ರಮೇಶ್ ನಾಗಪ್ಪ ಹಾಗೂ ಶಿವು ತೂಗುದೀಪ ಹೆಸರಿನ ಫೇಸ್‌ಬುಕ್ ಪೇಜ್‌ಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.