ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಾಟಮಂತ್ರ ಮಾಡುತ್ತಿದ್ದ ಶಂಕೆ: ವ್ಯಕ್ತಿಯನ್ನು ಕೊಂದು ಸುಟ್ಟು ಹಾಕಿದ ಗ್ರಾಮಸ್ಥರು

ಮಾಟಮಂತ್ರ ಮಾಡುತ್ತಿದ್ದಾನೆ ಎನ್ನುವ ಶಂಕೆಯಲ್ಲಿ ಗ್ರಾಮಸ್ಥರು ವ್ಯಕ್ತಿಯೊಬ್ಬನನ್ನು ಕೊಂದು ಸುಟ್ಟು ಹಾಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಕಟಕ್ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಸೇರಿ ಕೊಂದಿದ್ದಾರೆ. ಸಾಕ್ಷ್ಯ ಅಳಿಸಿ ಹಾಕಲು ದೇಹವನ್ನು ಸುಟ್ಟು ಹಾಕಿದರು. ಪ್ರಕರಣಕ್ಕೆ ಸಂಬಂಧಿಸಿ 25 ಮಂದಿಯನ್ನು ಬಂಧಿಸಲಾಗಿದೆ.

ಮಾಟಮಂತ್ರ ಶಂಕೆ: ವ್ಯಕ್ತಿಯನ್ನು ಕೊಂದ ಗ್ರಾಮಸ್ಥರು

ಸಂಗ್ರಹ ಚಿತ್ರ -

ಕಟಕ್: ಮಾಟ ಮಂತ್ರ ಮಾಡುತ್ತಿದ್ದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು (murder case) ಸುಟ್ಟು ಹಾಕಿರುವ ಘಟನೆ ಒಡಿಶಾದಲ್ಲಿ (odisha crime) ನಡೆದಿದೆ. ಕಟಕ್ ಜಿಲ್ಲೆಯ (Cuttack district) ತಲಮುಂಡುಲಿ ಗ್ರಾಮದಲ್ಲಿ ಮೇ 10 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತನ ತಂದೆ ಪೊಲೀಸರಿಗೆ ದೂರು ನೀಡಿದ ಬಳಿಕ 25 ಜನರನ್ನು ಬಂಧಿಸಲಾಗಿದೆ. ಮಾಟಮಂತ್ರ ನಡೆಸುತ್ತಿದ್ದ ಎನ್ನುವ ಶಂಕೆಯಲ್ಲಿ ಟಿಕಿಮಾ ಬೆಹೆರಾ ಎಂಬಾತನನ್ನು ಗ್ರಾಮದ ಗುಂಪೊಂದು ಕೊಂದು ಹಾಕಿದೆ. ಬಳಿಕ ಸಾಕ್ಷ್ಯ ನಾಶ ಮಾಡುವ ಸಲುವಾಗಿ ದೇಹವನ್ನು ಸುಟ್ಟು ಹಾಕಿದೆ ಎಂದು ಮೃತನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಸುಮಾರು ಏಳು ವರ್ಷಗಳ ಹಿಂದೆ ಪತ್ನಿಯಿಂದ ದೂರವಾಗಿದ್ದ ಟಿಕಿಮಾ ಬೆಹೆರಾ ಒಡಿಶಾದ ಕಟಕ್ ಜಿಲ್ಲೆಯ ತಲಮುಂಡುಲಿ ಗ್ರಾಮಕ್ಕೆ ಬಂದು ತನ್ನ ಸಹೋದರ ಮತ್ತು ಅತ್ತಿಗೆಯೊಂದಿಗೆ ವಾಸಿಸುತ್ತಿದ್ದನು. ಮೇ 10ರಂದು ಗ್ರಾಮದ ಗುಂಪೊಂದು ಆತನನ್ನು ಮನೆಯಿಂದ ಹೊರಗೆಳೆದುಕೊಂಡು ಹೋಗಿ ಹೊಡೆದು ಕೊಂದು ಹಾಕಿದೆ. ಬಳಿಕ ಸಾಕ್ಷ್ಯ ನಾಶ ಮಾಡುವ ಸಲುವಾಗಿ ದೇಹವನ್ನು ಸುಟ್ಟು ಹಾಕಿತು. ಪ್ರಕರಣಕ್ಕೆ ಸಂಬಂಧಿಸಿ 25 ಜನರನ್ನು ಬಂಧಿಸಿರುವುದಾಗಿ ಪೊಲೀಸರು ಬುಧವಾರ ತಿಳಿಸಿದರು.

ಹಾಡ ಹಗಲೇ 4 ವರ್ಷದ ಮಗುವಿನ ಅಪಹರಣ: ದುಷ್ಕರ್ಮಿಗಳ ವಿರುದ್ಧ ಅಜ್ಜ-ಅಜ್ಜಿಯ ದಿಟ್ಟ ಹೋರಾಟ

ಮೇ 10ರಂದು ಈ ಘಟನೆ ನಡೆದಿದ್ದರೂ ಟಿಕಿಮಾ ಬೆಹೆರ್ ನ ತಂದೆ ಶ್ವೇತಾ ಬೆಹೆರಾ ಅವರು ಮಂಗಳವಾರ ಪೊಲೀಸರಿಗೆ ಔಪಚಾರಿಕವಾಗಿ ದೂರು ನೀಡಿದ್ದರು. ಇದರ ಬಳಿಕ ಸುಮಾರು 25 ಜನರನ್ನು ಬಂಧಿಸಲಾಗಿದೆ.

ಶ್ವೇತಾ ಬೆಹೆರಾ ಅವರು ತನ್ನ ಮಗ ಟಿಕಿಮಾ ಬೆಹೆರಾನನ್ನು ತಲಮುಂಡುಲಿ ಗ್ರಾಮದಲ್ಲಿ ಮನೆಯಿಂದ ಹೊರಗೆಳೆದು ಹೊಡೆದು ಥಳಿಸಿ ಕೊಂದ ಮೇಲೆ ಸಾಕ್ಷ್ಯ ಅಳಿಸಲು ಅವನ ದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಟಿಕಿಮಾ ಬೆಹೆರಾನನ್ನು ಸುಮಾರು ಏಳು ವರ್ಷಗಳ ಹಿಂದೆ ಪತ್ನಿ ತ್ಯಜಿಸಿದ್ದಾಳೆ. ಇದರ ಬಳಿಕ ಆತ ತನ್ನ ಸಹೋದರ ಮತ್ತು ಅತ್ತಿಗೆಯೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದನು ಎಂದು ತಿಳಿಸಿದ್ದಾರೆ.

ಭಯೋತ್ಪಾದಕ ಸಂಘಟನೆಗೆ ಯುವಕರ ನೇಮಕಾತಿ; ಅಪರಾಧಿ ಹಮ್ರಾಜ್ ವರ್ಶಿದ್ ಶೇಖ್‌ಗೆ 7 ವರ್ಷ ಜೈಲು ಶಿಕ್ಷೆ

ಘಟನೆ ಕುರಿತು ಮಾಹಿತಿ ನೀಡಿರುವ ಕಟಕ್ ಗ್ರಾಮೀಣ ಭಾಗದ ಎಸ್ಪಿ ವಿನಿತ್ ಅಗರ್ವಾಲ್, ಮಾಟಮಂತ್ರದ ಶಂಕೆಯ ಮೇಲೆ ಟಿಕಿಮಾ ಬೆಹೆರಾನನ್ನು ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸುಮಾರು 25 ಮಂದಿಯನ್ನು ಬಂಧಿಸಿದ್ದೇವೆ. ಇದರ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಒಬ್ಬರು ವಿಚಾರಣೆಯ ಸಮಯದಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.ಮೃತನ ಭಾಗಶಃ ಸುಟ್ಟ ದೇಹ ಮತ್ತು ಮೂಳೆಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.