ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Assault: ಲಿಫ್ಟ್‌ ನೀಡುವ ನೆಪದಲ್ಲಿ ಮಹಿಳಾ ಉದ್ಯೋಗಿ ಮೇಲೆ ಕಂಪನಿ ಸಿಇಓ ಅತ್ಯಾಚಾರ!

ಪಾರ್ಟಿ ಮುಗಿಸಿ ಮನೆಗೆ ಲಿಫ್ಟ್ ನೀಡುವ ಆಫರ್ ನೀಡಿ ಖಾಸಗಿ ಐಟಿ ಕಂಪನಿಯ ಉದ್ಯೋಗಿ ಮೇಲೆ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಡಿಸೆಂಬರ್ 20 ರಂದು ಖಾಸಗಿ ಹೋಟೆಲ್‌ನಲ್ಲಿ ನಡೆದ ಪಾರ್ಟಿಯ ನಂತರ ಈ ಘಟನೆ ನಡೆದಿದೆ.

ಲಿಫ್ಟ್‌ ನೀಡುವ ನೆಪದಲ್ಲಿ ಮಹಿಳಾ ಉದ್ಯೋಗಿ ಮೇಲೆ ಕಂಪನಿ ಸಿಇಓ ಅತ್ಯಾಚಾರ!

ಅತ್ಯಾಚಾರ ಆರೋಪಿಗಳು -

Vishakha Bhat
Vishakha Bhat Dec 26, 2025 12:32 PM

ಜೈಪುರ: ಪಾರ್ಟಿ ಮುಗಿಸಿ ಮನೆಗೆ ಲಿಫ್ಟ್ ನೀಡುವ ಆಫರ್ ನೀಡಿ ಖಾಸಗಿ ಐಟಿ ಕಂಪನಿಯ ಉದ್ಯೋಗಿ ಮೇಲೆ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ (Physical Assault) ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಡಿಸೆಂಬರ್ 20 ರಂದು ಖಾಸಗಿ ಹೋಟೆಲ್‌ನಲ್ಲಿ ನಡೆದ ಪಾರ್ಟಿಯ ನಂತರ ಈ ಘಟನೆ ನಡೆದಿದೆ. ಮಹಿಳೆ ರಾತ್ರಿ 9 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿದರು ಮತ್ತು ಪಾರ್ಟಿ ಸುಮಾರು ಬೆಳಗಿನ ಜಾವ 1.30 ರವರೆಗೆ ನಡೆಯಿತು ಎಂದು ತಿಳಿದು ಬಂದಿದೆ. ಪಾರ್ಟಿ ಬಳಿಕ ಕಂಪನಿ ಸಿಇಎ ಸೇರಿ ಮೂವರು ಮಹಿಳೆಯನ್ನು ಮನೆಗೆ ಡ್ರಾಪ್‌ ಮಾಡುವುದಾಗಿ ಕಾರು ಹತ್ತಿಸಿಕೊಂಡಿದ್ದರು.

ದಾರಿಯಲ್ಲಿ, ಅವರು ಅಂಗಡಿಯಿಂದ ಧೂಮಪಾನ ಸಾಮಗ್ರಿಗಳನ್ನು ಖರೀದಿಸಿ ಮಹಿಳೆಗೆ ನೀಡಿದರು. ಅದನ್ನು ಸೇವಿಸಿದ ನಂತರ ಆಕೆ ಪ್ರಜ್ಞೆ ತಪ್ಪಿದ್ದಾಳೆ ಎನ್ನಲಾಗಿದೆ. ಆಕೆಗೆ ಭಾಗಶಃ ಪ್ರಜ್ಞೆ ಬಂದಾಗ, ಸಿಇಒ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು, ನಂತರ ಮೂವರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮನೆಗೆ ಬಿಡಲಾಯಿತು. ಪೂರ್ಣ ಪ್ರಜ್ಞೆ ಬಂದಾಗ, ಆಕೆಗೆ ಕಿವಿಯೋಲೆ, ಸಾಕ್ಸ್ ಮತ್ತು ಒಳ ಉಡುಪುಗಳು ಕಾಣೆಯಾಗಿವೆ ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಗಾಯಗಳಿರುವುದು ಕಂಡುಬಂದಿದೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾಳೆ.

ಆರಂಭಿಕ ತನಿಖೆಯ ನಂತರ, ಮೂವರು ಆರೋಪಿಗಳಾದ ಕಂಪನಿಯ ಸಿಇಒ ಜಯೇಶ್, ಸಹ-ಆರೋಪಿ ಗೌರವ್ ಮತ್ತು ಅವರ ಪತ್ನಿ ಶಿಲ್ಪಾ ಎಂಬುವವರನ್ನು ಬಂಧಿಸಲಾಗಿದೆ. ವೈದ್ಯಕೀಯ ವರದಿಯಲ್ಲಿ ಗಾಯದ ಗುರುತುಗಳು ದೃಢಪಟ್ಟಿದ್ದು, ಮೇಲ್ನೋಟಕ್ಕೆ ಸಾಮೂಹಿಕ ಅತ್ಯಾಚಾರ ನಡೆದಿರುವುದಕ್ಕೆ ಪುರಾವೆಗಳಿವೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಗೋಯಲ್ ಹೇಳಿದ್ದಾರೆ. ಘಟನೆಯ ಸಮಯದಲ್ಲಿ ಧ್ವನಿಗಳನ್ನು ಸೆರೆಹಿಡಿಯಲಾಗಿದೆ ಎನ್ನಲಾದ ಕಾರಿನಲ್ಲಿ ಅಳವಡಿಸಲಾದ ಡ್ಯಾಶ್‌ಕ್ಯಾಮ್‌ನಿಂದ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಕಳೆದ ತಿಂಗಳು ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ.

ಉನ್ನಾವೋ ಅತ್ಯಾಚಾರ ಆರೋಪಿ ಸೆಂಗಾರ್‌ಗೆ ಜಾಮೀನು; ಪ್ರತಿಭಟಿಸಿದ್ದ ಸಂತ್ರಸ್ತೆ ತಾಯಿ ಮೇಲೆ ಹಲ್ಲೆ

ಬೆಂಗಳೂರಿನ ಹೋಟೆಲೊಂದರಲ್ಲಿ ತಮ್ಮ ಮೇಲೆ ವಿಶೇಷ ವಿಮಾನದ ಪೈಲಟ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕ್ಯಾಬಿನ್‌ ಸಿಬ್ಬಂದಿ ದೂರು ನೀಡಿದ್ದರು. ಮೂಲಗಳ ಪ್ರಕಾರ ನವೆಂಬರ್ 18 ರಂದು ಆರೋಪಿ ಪೈಲಟ್ ರೋಹಿತ್ ಸರನ್ ತನ್ನ ಸಹೋದ್ಯೋಗಿ ಸಂತ್ರಸ್ಥೆ ಜೊತೆ ಹೈದರಾಬಾದ್‌ನ ಬೇಗಂಪೇಟೆ ಮತ್ತು ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಚಾರ್ಟರ್ಡ್ ವಿಮಾನದಲ್ಲಿ ಹೋಟೆಲ್‌ಗೆ ಆಗಮಿಸಿದಾಗ ಈ ಘಟನೆ ನಡೆದಿದೆ.