ರಾಜ್ಯದ ಇಂದಿರಾ ಕ್ಯಾಂಟೀನ್‌ನಂತೆ ದೆಹಲಿಯಲ್ಲಿಯೂ ಅಟಲ್ ಕ್ಯಾಂಟೀನ್ ಥಾಲಿ; 5 ರುಪಾಯಿಗೆ ಸಿಗಲಿದೆ ದಾಲ್, ಅನ್ನ, ಚಪಾತಿ
ಬಡವರು, ಕಾರ್ಮಿಕರು, ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಘನತೆಯಿಂದ ಆಹಾರ ಒದಗಿಸುವ ಗುರಿಯೊಂದಿಗೆ ದೆಹಲಿಯಲ್ಲಿ 100 ಅಟಲ್ ಕ್ಯಾಂಟೀನ್‌ಗಳನ್ನು ತೆರೆಯಲಾಗಿದೆ. ರಾಜ್ಯದ ಇಂದಿರಾ ಕ್ಯಾಂಟೀನ್‌ನಂತೆ ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹೊಟ್ಟೆ ತುಂಬಾ ಊಟ ಸಿಗಲಿದೆ. ಅಟಲ್ ಕ್ಯಾಂಟೀನ್ ನಲ್ಲಿ 5 ರೂ. ಗೆ ಸಿಗಲಿದೆ ರೋಟಿ, ಅನ್ನ, ಚಪಾತಿಯನ್ನೊಳಗೊಂಡ ಥಾಲಿಯಲ್ಲಿ ದಿನಕ್ಕೆ ಎರಡು ಬಾರಿ ಹೊಟ್ಟೆ ತುಂಬಾ ಊಟ ಸಿಗಲಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ಉಪ್ಪಿನಕಾಯಿ, ಕರಿ, ದಾಲ್, ಅನ್ನ, ಚಪಾತಿ... ಇದು ಯಾವುದೇ ಮದುವೆ ಮನೆಯ ಊಟದ ಮೆನುವಲ್ಲ ದೆಹಲಿಯಲ್ಲಿ (Delhi) ಪ್ರಾರಂಭಿಸಲಾಗಿರುವ ಅಟಲ್ ಕ್ಯಾಂಟೀನ್‌ಗಳಲ್ಲಿ (atal canteen) ಲಭ್ಯವಾಗುವ ಊಟದ ಮೆನು (atal canteen thali menu). ಬಡವರು, ಕಾರ್ಮಿಕರು, ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಘನತೆಯಿಂದ ಆಹಾರ ಒದಗಿಸುವ ಉದ್ದೇಶದೊಂದಿಗೆ ದೆಹಲಿಯಲ್ಲಿ ಪ್ರಾರಂಬಿಸಲಾಗಿರುವ 100 ಅಟಲ್ ಕ್ಯಾಂಟೀನ್‌ಗಳಲ್ಲಿ (atal canteen) ಕೇವಲ 5 ರೂ. ಗೆ (5 Rs Thali) ಸಿಗಲಿದೆ ಹೊಟ್ಟೆ ತುಂಬಾ ಊಟದ ಥಾಲಿ.
ಅಟಲ್ ಕ್ಯಾಂಟೀನ್ ಗೆ ಚಾಲನೆ ನೀಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಾತನಾಡಿ, ಅಟಲ್ ಕ್ಯಾಂಟೀನ್ ಗೆ ಚಾಲನೆ ನೀಡಿ, ದೆಹಲಿಯ 100 ಅಟಲ್ ಕ್ಯಾಂಟೀನ್‌ಗಳಲ್ಲಿ ಶುಕ್ರವಾರದಿಂದ 5 ರೂ. ಥಾಲಿ ಲಭ್ಯವಾಗಲಿದೆ. ಇದು ಬಡವರು, ಕಾರ್ಮಿಕರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಘನತೆಯಿಂದ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಅಟಲ್ ಕ್ಯಾಂಟೀನ್ ದೆಹಲಿಯ ಆತ್ಮವಾಗಲಿದೆ. ಯಾರೂ ಹಸಿವಿನಿಂದ ಮಲಗಬೇಕಾಗಿಲ್ಲದ ಸ್ಥಳವಾಗಿದೆ ಎಂದು ಅವರು ತಿಳಿಸಿದರು.
Full, wholesome meal for just ₹5 at Atal Canteen
— Rekha Gupta (@gupta_rekha) December 25, 2025
🔹 Clean and hygienic kitchens
🔹 Affordable for every worker and citizen
🔹 Every plate served with dignity and respect
🔹 45 Atal Canteens inaugurated today across Delhi, 55 more coming up soon
A Delhi Government initiative… pic.twitter.com/66FCqtJxXv
ಅಟಲ್ ಕ್ಯಾಂಟೀನ್ ಮಾಹಿತಿ ಪ್ರಕಾರ ಪ್ರದೇಶವನ್ನು ಅವಲಂಬಿಸಿ, ಬೇಳೆ, ಅನ್ನ, ಚಪಾತಿ, ತರಕಾರಿ ಮತ್ತು ಉಪ್ಪಿನಕಾಯಿಯನ್ನು ಒಳಗೊಂಡಿರುವ ಊಟಕ್ಕೆ 500 ರಿಂದ 2,000 ರೂ. ಗಳ ವರೆಗೆ ಇರುತ್ತದೆ. ಪ್ರತಿದಿನ ಎರಡು ಹೊತ್ತಿನ ಊಟ ಸಿಗದ ಅದೆಷ್ಟೋ ಮಂದಿ ಇದ್ದಾರೆ. ಇವರಿಗಾಗಿ ಈ ತೃಪ್ತಿಕರ ಊಟ ಸಿಗಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ದೆಹಲಿ ಸರ್ಕಾರ ಪ್ರಾರಂಭಿಸಿರುವ ಈ ಯೋಜನೆ ಮೂಲಕ ನಗರದಾದ್ಯಂತ 100 ಸ್ಥಳಗಳಲ್ಲಿ ಕೇವಲ 5 ರೂ. ಗಳಿಗೆ ಪೌಷ್ಟಿಕ ಊಟವನ್ನು ವಿತರಿಸಲಾಗುತ್ತದೆ.
ಹೇಗಿದೆ ಮೆನು?
ದೆಹಲಿ ಆರ್‌ಕೆ ಪುರಂ, ಜಂಗ್‌ಪುರ, ಶಾಲಿಮಾರ್ ಬಾಗ್, ಗ್ರೇಟರ್ ಕೈಲಾಶ್, ರಾಜೌರಿ ಗಾರ್ಡನ್, ನರೇಲಾ, ಬವಾನಾ, ಇತರ ಸ್ಥಳಗಳು ಸೇರಿದಂತೆ 45 ಸ್ಥಳಗಳಲ್ಲಿ ಶುಕ್ರವಾರ ಅಟಲ್ ಕ್ಯಾಂಟೀನ್‌ಗಳನ್ನು ಉದ್ಘಾಟಿಸಲಾಗಿದೆ. ಉಳಿದ 55 ಕ್ಯಾಂಟೀನ್‌ಗಳನ್ನು ಮುಂದಿನ ದಿನಗಳಲ್ಲಿ ಉದ್ಘಾಟನೆಯಾಗಲಿದೆ.
ಈ ಕ್ಯಾಂಟೀನ್‌ಗಳು ದಿನಕ್ಕೆ ಎರಡು ಹೊತ್ತಿನ ಊಟಗಳನ್ನು ವಿತರಿಸಲಿದೆ. ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಮತ್ತು ಸಂಜೆ 6.30ರಿಂದ ರಾತ್ರಿ 9.30ರವರೆಗೆ ಸುಮಾರು 500 ಜನರಿಗೆ ಹೊಟ್ಟೆತುಂಬ ಊಟವನ್ನು ವಿತರಿಸಲಾಗುತ್ತದೆ. 5 ರೂ. ನ ಥಾಲಿಯಲ್ಲಿ ದಾಲ್,ಅಕ್ಕಿ, ಚಪಾತಿ, ಋತುಮಾನಕ್ಕೆ ತಕ್ಕಂತೆ ವಿವಿಧ ತರಕಾರಿ ಮತ್ತು ಉಪ್ಪಿನಕಾಯಿ ಇರಲಿದೆ.
ಅಟಲ್ ಕ್ಯಾಂಟೀನ್ ಗಳಲ್ಲಿ ಊಟವನ್ನು ವಿತರಿಸಲು ದೆಹಲಿ ಸರ್ಕಾರವು ಹಸ್ತಚಾಲಿತ ಕೂಪನ್‌ಗಳನ್ನು ಬದಲಿಸಿ ಡಿಜಿಟಲ್ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇಲ್ಲಿನ ನಿತ್ಯದ ವಹಿವಾಟುಗಳನ್ನು ಸಿಸಿಟಿವಿ ಮೂಲಕ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯು ಮೇಲ್ವಿಚಾರಣೆ ಮಾಡಲಿದೆ.