ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧಾರ್ಮಿಕ ಸ್ಥಳಕ್ಕೆ ಕರೆದೊಯ್ಯುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಪೊಲೀಸರು!

Crime news: ಹರಿಯಾಣ ಮೂಲದ ಯುವತಿ ಮೇಲೆ ಮೂವರು ಪೊಲೀಸರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 23 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಅಮ್ರೋಹಾದ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಫಾರ್ಮ್‌ಹೌಸ್‌ನಲ್ಲಿ ಮೂವರು ಸಿಬ್ಬಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಯುವತಿ ಮೇಲೆ ಅತ್ಯಾಚಾರ: ನಾಲ್ವರು ಪೊಲೀಸರ ಬಂಧನ

ಸಾಂದರ್ಭಿಕ ಚಿತ್ರ -

Priyanka P
Priyanka P Sep 24, 2026 5:31 PM

ಲಖನೌ, ಸೆ. 24: ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾದರೆ ಜನಸಾಮಾನ್ಯರ ಪಾಡೇನು? ಹೌದು, ಪೊಲೀಸರೊಂದಿಗೆ ನಂಬಿಕೆ ಮೇಲೆ ಹೋಗಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಫಾರ್ಮ್‌ಹೌಸ್‌ವೊಂದರಲ್ಲಿ ಹರಿಯಾಣ ಮೂಲದ ಯುವತಿ ಮೇಲೆ ಮೂವರು ಪೊಲೀಸರು ಅತ್ಯಾಚಾರ ಎಸಗಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ (Crime news). 23 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಅಮ್ರೋಹಾದ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯುವುದಾಗಿ ನಂಬಿಸಿ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಫಾರ್ಮ್‌ಹೌಸ್‌ನಲ್ಲಿ ಸಮವಸ್ತ್ರದಲ್ಲಿದ್ದ ಮೂವರು ಸಿಬ್ಬಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಾಲ್ಕನೇ ವ್ಯಕ್ತಿ ಕೂಡ ಆಕೆಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದಾನೆ. ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ನಾಲ್ವರನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಎಂದು ಮೂಲಗಳು ತಿಳಿಸಿವೆ.

ಫತೇಹಾಬಾದ್ ನಿವಾಸಿ, ಸಂತ್ರಸ್ತೆ ಯುವತಿಯನ್ನು ಸೆಪ್ಟೆಂಬರ್ 20ರಂದು ಪರಿಚಿತ ಮಹಿಳೆಯೊಬ್ಬಳು ಸಂಪರ್ಕಿಸಿದ್ದಳು. ಅಮ್ರೋಹಾದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಮುಜಫರ್‌ನಗರ ನಿವಾಸಿ, ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಮೋಹಿತ್ ಜತೆ ತೆರಳುವಂತೆ ಆಕೆ ತಿಳಿಸಿದ್ದಳು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಲಖನ್ ಸಿಂಗ್ ಯಾದವ್ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 21ರಂದು ಯುವತಿ ಸೋನಿಪತ್‌ನಲ್ಲಿ ಮೋಹಿತ್‌ನನ್ನು ಭೇಟಿಯಾದಳು. ನಂತರ ಇಬ್ಬರೂ ಮೀರತ್‌ಗೆ ಪ್ರಯಾಣ ಬೆಳೆಸಿದರು. ಬಳಿಕ, ರಾಜಸ್ಥಾನದ ಅಲ್ವಾರ್ ನಿವಾಸಿಯಾಗಿರುವ ಸಿಆರ್‌ಪಿಎಫ್ ಹೆಡ್ ಕಾನ್ಸ್‌ಟೇಬಲ್ ಲಾಲಾರಾಮ್ ಯಾದವ್ ಅವರೊಂದಿಗೆ ಸೇರಿಕೊಂಡನು.

ಮದುವೆ ನಿರಾಕರಿಸಿದಕ್ಕೆ ವಿಡಿಯೊ ಕಾಲ್‌ ಮಾಡಿ ಯುವತಿ ಆತ್ಮಹತ್ಯೆ: 23 ನಿಮಿಷ ಲೈವ್ ನೋಡ್ತಾ ನಿಂತ ಪ್ರಿಯಕರ!

ಸೆಪ್ಟೆಂಬರ್ 22ರ ಸಂಜೆ ಮೋಹಿತ್ ಮತ್ತು ಯಾದವ್ ಯುವತಿಯನ್ನು ಕಾರಿನಲ್ಲಿ ಹಸನ್‌ಪುರಕ್ಕೆ ಕರೆದೊಯ್ದರು. ದಾರಿಯಲ್ಲಿ ಉತ್ತರ ಪ್ರದೇಶ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಸಂಜಯ್ ತೋಮರ್‌ ಕಾರ್‌ಗೆ ಹತ್ತಿದ್ದ. ನಂತರ ಮೂವರು ಆಕೆಯನ್ನು ಅತ್ರಾಸಿ-ಹಸನ್‌ಪುರ ರಸ್ತೆಯಲ್ಲಿರುವ ಒಂದು ತೋಟದ ಮನೆಗೆ ಕರೆದೊಯ್ದು ಎರಡು ಕೊಠಡಿಗಳನ್ನು ಬಾಡಿಗೆಗೆ ಪಡೆದರು. ಯುವತಿಯ ದೂರಿನ ಪ್ರಕಾರ, ಪೊಲೀಸ್ ಮುಖ್ಯಪೇದೆ ಪ್ರಮೋದ್ ತೋಟದ ಮನೆಯಲ್ಲಿ ಆಹಾರ ಮತ್ತು ಮದ್ಯದ ವ್ಯವಸ್ಥೆ ಮಾಡಿದ್ದ.

ಮೋಹಿತ್, ಯಾದವ್ ಮತ್ತು ತೋಮರ್ ಒಬ್ಬರ ನಂತರ ಒಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ನಂತರ ಪ್ರಮೋದ್ ಕೋಣೆಗೆ ಪ್ರವೇಶಿಸಿ ತನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆದರೆ ಆಕೆ ಅವನನ್ನು ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡಿದ್ದಾಗಿ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.

ನಂತರ ಆಕೆ ಪೊಲೀಸ್ ಸಹಾಯವಾಣಿ ಸಂಖ್ಯೆಯನ್ನು ಹುಡುಕಿ ಬುಧವಾರ (ಸೆಪ್ಟೆಂಬರ್‌ 23) ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೊಲೀಸರನ್ನು ಸಂಪರ್ಕಿಸಿದರು. ಹಸನ್‌ಪುರ ಮತ್ತು ರಾಜಬ್‌ಪುರ ಪೊಲೀಸ್ ಠಾಣೆಗಳ ತಂಡಗಳು ತೋಟದ ಮನೆಗೆ ತಲುಪಿ, ಸಂತ್ರಸ್ತೆಯನ್ನು ಸುರಕ್ಷಿತವಾಗಿ ಕರೆದೊಯ್ದು ನಾಲ್ವರನ್ನು ಬಂಧಿಸಿತು.

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾಲ್ವರನ್ನೂ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಲಖನ್ ಸಿಂಗ್ ಯಾದವ್ ತಿಳಿಸಿದ್ದಾರೆ.