ನಾಗರಿಕ ಪ್ರಜ್ಞೆಯ ಕೊರತೆ; ರೈಲಿನಲ್ಲಿ ಸಹ ಪ್ರಯಾಣಿಕರ ರಂಪಾಟದ ಕಹಿ ಅನುಭವ ಬಿಚ್ಚಿಟ್ಟ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್
Viral News: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ತಮಗಾದ ಕಹಿ ಅನುಭವವೊಂದನ್ನು ಶೇರ್ ಮಾಡಿದ್ದಾರೆ. ಇತ್ತೀಚಿನ ರೈಲು ಪ್ರಯಾಣವೊಂದರಲ್ಲಿ ಪ್ರಯಾಣಿಕರು ನಾಗರಿಕ ಪ್ರಜ್ಞೆ ಮರೆತು ತೀವ್ರ ಕಿರಿಕಿರಿ ಉಂಟು ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿದ್ದಾಗ ಪ್ರಯಾಣಿಕರು ಇತರರ ಬಗ್ಗೆಯೂ ಯೋಚಿಸಬೇಕು, ಸಾರ್ವಜನಿಕರ ಶಾಂತಿಗೆ ಧಕ್ಕೆ ತರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಬರೆದುಕೊಂಡಿದ್ದಾರೆ.
ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 24: ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲೂ ಕೆಲವರು ನಾಗರಿಕ ಪ್ರಜ್ಞೆ ಮರೆತು ಅತಿರೇಕದ ವರ್ತನೆ ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ತಮಗಾದ ಕಹಿ ಅನುಭವವೊಂದನ್ನು ಶೇರ್ (Viral News) ಮಾಡಿದ್ದಾರೆ. ಇತ್ತೀಚೆಗೆ ರೈಲು ಪ್ರಯಾಣವೊಂದರಲ್ಲಿ ಪ್ರಯಾಣಿಕರು ನಾಗರಿಕ ಪ್ರಜ್ಞೆ ಮರೆತು ತೀವ್ರ ಕಿರಿಕಿರಿ ಉಂಟು ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿದ್ದಾಗ ಪ್ರಯಾಣಿಕರು ಇತರರ ಬಗ್ಗೆಯೂ ಯೋಚಿಸಬೇಕು, ಶಾಂತಿಗೆ ಧಕ್ಕೆ ತರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಸಾರ್ವಜನಿಕ ಸಾರಿಗೆಯಾದ ಬಸ್, ರೈಲ್ವೆಯನ್ನು ಕೆಲವು ಪ್ರಯಾಣಿಕರು ತಮ್ಮದೇ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಇದೀಗ ಶಿವಶ್ರೀ ಸ್ಕಂದಪ್ರಸಾದ್ ಇತ್ತೀಚಿನ ರೈಲು ಪ್ರಯಾಣದಲ್ಲಾದ ಕಿರಿಕಿರಿ ಮತ್ತು ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ಬೇಸರ ಹೊರಹಾಕಿದ್ದಾರೆ
ಶಿವಶ್ರೀ ಸ್ಕಂದಪ್ರಸಾದ್ ಅವರ ಪೋಸ್ಟ್:
I had a traumatic train ride today. It is very sad to see how people do not respect public spaces enough. When we are in the public, we should not shout or even talk loudly and disrespect every individual’s personal space in Public. As artists, we have a 100 thoughts running. And…
— Sivasri Skandaprasad 🇮🇳 (@ArtSivasri) September 24, 2026
ಬೋಗಿಯಲ್ಲಿದ್ದ ಸುಮಾರು 40 ಜನರ ಮಧ್ಯವಯಸ್ಕರ ಗುಂಪು ಸತತವಾಗಿ ಗಟ್ಟಿಯಾಗಿ ಮಾತನಾಡುತ್ತ ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದೆ. ಸ್ನೇಹಿತರ ಜತೆ ಅಥವಾ ದೊಡ್ಡ ಗುಂಪಿನಲ್ಲಿ ಪ್ರಯಾಣ ಮಾಡುವಾಗ ಮಾತುಕತೆ ಸಹಜ. ಆದರೆ ಸಾರ್ವಜನಿಕ ಸ್ಥಳದಲ್ಲಿ ಇತರ ಪ್ರಯಾಣಿಕರ ಶಾಂತಿಗೆ ಧಕ್ಕೆ ತರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು
ʼʼಸಾರ್ವಜನಿಕ ಸ್ಥಳಗಳಲ್ಲಿ ಇರುವಾಗ ನಾವು ಕೂಗಾಡಬಾರದು ಅಥವಾ ಜೋರಾಗಿ ಮಾತನಾಡಬಾರದು. ಇತರರ ವೈಯಕ್ತಿಕ ಸ್ವಾತಂತ್ರ್ಯ ಅಥವಾ ಖಾಸಗಿತನಕ್ಕೆ ಅಗೌರವ ತೋರಬಾರದು. ಗಟ್ಟಿಯಾಗಿ ಮಾತನಾಡಿದ್ದಲ್ಲದೆ ಆ ಗುಂಪಿನ 8 ಜನರು ಕಾರ್ಡ್ ಆಟವಾಡುತ್ತಾ ಗಟ್ಟಿಯಾಗಿ ನಗುತ್ತಾ ರಂಪಾಟ ಮುಂದುವರಿಸಿದ್ದಾರೆʼʼ ಎಂದು ತಿಳಿಸಿದ್ದಾರೆ.
ಶಿವಶ್ರೀ ತಮ್ಮ ಸೀಟು ಬದಲಾಯಿಸಿಕೊಡುವಂತೆ ಟಿಟಿಇ ಬಳಿ ಮನವಿ ಮಾಡಿದರು. ಆದರೆ ರೈಲು ಭರ್ತಿಯಾಗಿತ್ತು. ಕೊನೆಗೆ ಕಿರಿಕಿರಿ ನಿಲ್ಲದೆ ಹೋದಾಗ ಈ ಬಗ್ಗೆ ಟಿಟಿಇಗೆ ದೂರು ನೀಡಿದರು. ಟಿಟಿಇ ಆ ಗುಂಪಿಗೆ ಆಟ ನಿಲ್ಲಿಸಲು ಹೇಳಿದರು. ನಂತರ ಮತ್ತೆ ಅಲ್ಲಿಗೆ ಬಂದ ಟಿಟಿಇ, "ಯಾಕೆ ಸರ್ ಗಲಾಟೆ ಮಾಡ್ತಾ ಇದ್ದೀರಾ?" ಎಂದು ತಮಾಷೆಯಾಗಿ ಕೇಳಿ ಆ ವಿಚಾರವನ್ನೇ ಬಿಟ್ಟು ಬಿಟ್ಟರು.
ʼʼಭಾರತೀಯಳಾಗಿ ನಾನು ಕೂಡ ನಾಗರಿಕ ಪ್ರಜ್ಞೆಯ ಪರೀಕ್ಷೆಯಲ್ಲಿ ಸೋತೆ. ನಮ್ಮ ಸಾರ್ವಜನಿಕ ನಡವಳಿಕೆಯನ್ನು ಯಾವಾಗ ಸುಧಾರಿಸಿಕೊಳ್ಳುತ್ತೇವೆ?ʼʼ ಎಂದು ಪ್ರಶ್ನಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಶಿವಶ್ರೀ ಅವರ ಮಾತನ್ನು ಬೆಂಬಲಿಸಿದ್ದು, ಇಂತಹ ಜನರಿಂದಲೇ ತಮ್ಮ ದೇಶಕ್ಕೆ ಕೆಟ್ಟ ಹೆಸರು ಎಂದಿದ್ದಾರೆ. ಒಬ್ಬರು, ʼʼಕಿರಿಕಿರಿ ಮಾಡುವವರನ್ನು ಪ್ರಯಾಣದ ಅರ್ಧದಲ್ಲೆ ಇಳಿಸಿದಾಗಲೇ ಬುದ್ದಿ ಬರುವುದುʼʼ ಎಂದು ಕಿಡಿಕಾರಿದ್ದಾರೆ.