ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನೆಯಲ್ಲಿ ಪುತ್ರಿಯೊಂದಿಗೆ ಸಿಕ್ಕಿಬಿದ್ದ ಕೆಲಸಗಾರ; ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಂದ ಮಾಲೀಕ!

ಮಗಳ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಸ್ವಂತ ಕಾರ್ಖಾನೆಯ ಕೆಲಸಗಾರನನ್ನು ತಂದೆಯೊಬ್ಬ ರಾತ್ರಿಯಿಡೀ ಕ್ರೂರವಾಗಿ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಕೇರಳ ಮೂಲದ ಕಿರಣ್ ಎಂದು ಗುರುತಿಸಲಾಗಿದೆ.

ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಂದ ಮಾಲೀಕ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 5, 2026 12:00 PM

ಬೆಂಗಳೂರು: ಮಗಳ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಸ್ವಂತ ಕಾರ್ಖಾನೆಯ ಕೆಲಸಗಾರನನ್ನು ತಂದೆಯೊಬ್ಬ ರಾತ್ರಿಯಿಡೀ ಕ್ರೂರವಾಗಿ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ (Bengaluru) ಯಲಹಂಕದಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಕೇರಳ ಮೂಲದ ಕಿರಣ್ ಎಂದು ಗುರುತಿಸಲಾಗಿದೆ. ಈತ ತಮಿಳುನಾಡು ಮೂಲದ ಆನಂದ್ (Murder Case) ರಾಜ್ ಎಂಬುವವರಿಗೆ ಸೇರಿದ ಸ್ವೀಟ್ ಕಾರ್ನ್ ಯಂತ್ರ ತಯಾರಿಸುವ ಸಣ್ಣ ಕಾರ್ಖಾನೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ.

ಅವಧಿಯಲ್ಲಿ ಆನಂದ್ ರಾಜ್ ಅವರ ಮಗಳೊಂದಿಗೆ ಕಿರಣ್ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಆದರೆ ಈ ವಿಷಯ ಆನಂದ್ ರಾಜ್‌ಗೆ ಇಷ್ಟವಿರಲಿಲ್ಲ. ಸೋಮವಾರದಂದು ಆನಂದ್ ರಾಜ್ ತಾವು ತಮಿಳುನಾಡಿನ ಸ್ವಗ್ರಾಮಕ್ಕೆ ಹೋಗುತ್ತಿರುವುದಾಗಿ ಮಗಳಿಗೆ ತಿಳಿಸಿ ಹೊರಟಿದ್ದರು. ಆದರೆ ಅದೇ ದಿನ ಮಧ್ಯಾಹ್ನ ಪತ್ನಿಯೊಂದಿಗೆ ಇದ್ದಕ್ಕಿದ್ದಂತೆ ಯಲಹಂಕದ ಮನೆಗೆ ಮರಳಿ ಬಂದಿದ್ದಾರೆ. ಈ ವೇಳೆ ಮೈಸೂರಿನಲ್ಲಿ ಪಿಯುಸಿ ಓದುತ್ತಿರುವ ಮತ್ತು ದಸರಾ ರಜೆಗಾಗಿ ಮನೆಗೆ ಬಂದಿದ್ದ ಮಗಳು, ಕಿರಣ್ ಜೊತೆ ಮನೆಯಲ್ಲಿದ್ದಳು.

ಮಗಳನ್ನು ನೋಡಿದ ತಕ್ಷಣ ಆನಂದ್ ರಾಜ್ ಆಕೆಯನ್ನು ಮತ್ತು ಪತ್ನಿಯನ್ನು ಚಿಕ್ಕಬಳ್ಳಾಪುರದಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಕಿರಣ್‌ನನ್ನು ಮನೆಯೊಳಗೆ ಕೂಡಿಹಾಕಿ, ಕ್ರಿಕೆಟ್ ಬ್ಯಾಟ್‌ನಿಂದ ರಾತ್ರಿಯಿಡೀ ಮನಬಂದಂತೆ ಥಳಿಸಿದ್ದಾರೆ. ಮರುದಿನ ಮಧ್ಯಾಹ್ನ ಆನಂದ್ ರಾಜ್ ಕಿರಣ್‌ನ ಕೆಳಹೊಟ್ಟೆಗೆ ಬಲವಾಗಿ ಒದ್ದಾಗ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

cholesterol: ಎಲ್‌ಡಿಎಲ್ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಕುರಿತು ಪ್ರತಿಯೊಬ್ಬರೂ ವೈದ್ಯರನ್ನು ಕೇಳಬೇಕಾದ 3 ಪ್ರಮುಖ ಪ್ರಶ್ನೆಗಳು

ತಕ್ಷಣ ಆನಂದ್ ರಾಜ್ ಆಟೋರಿಕ್ಷಾದಲ್ಲಿ ಕಿರಣ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರಾದರೂ, ಆತ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಯಲಹಂಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಆನಂದ್ ರಾಜ್‌ನನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.