ರಾಜ್ಯ ಸರಕಾರಕ್ಕೆ ಮೈಸೂರು ರಾಜವಂಶಸ್ಥೆ ತಿರುಗೇಟು
ಅರಮನೆ ಸ್ವಾಧೀನ ಕಾಯ್ದೆಯ ವ್ಯಾಪ್ತಿಗೂ ಇವು ಒಳಪಡುವುದಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಅಂಬಾರಿ ಯಾವತ್ತಿಗೂ ಅರಮನೆ ಬಿಟ್ಟು ಹೋಗಿಲ್ಲ. ಅದರ ಒಡೆತನ ರಾಜಮನೆತನದ್ದೇ ಆಗಿದೆ. ಅಂಬಾರಿಯನ್ನು ನೀಡುವುದಕ್ಕೆ ಬಾಡಿಗೆ ಪಡೆಯುವುದಿಲ್ಲ, ಗೌರವಧನ ನೀಡುವ ಸಂಪ್ರದಾಯವಿದೆ. ಸರ್ಕಾರ ಮೊದಲು ಪತ್ರ ಬರೆದು ಅಂಬಾರಿಯನ್ನು ಕೇಳುತ್ತದೆ. ನಂತರ ಅದಕ್ಕೆ ಸಂಬಂಧಿಸಿದ ಪ್ರಚಾರ ನಡೆಯುತ್ತದೆ
-
ಮೈಸೂರು: ಮೈಸೂರು ದಸರಾ ಮುಗಿದರೂ ಅರಮನೆಯ ಸುತ್ತ ಎದ್ದಿರುವ ವಿವಾದಗಳ ಕಾವು ಮಾತ್ರ ತಣ್ಣಗಾಗಿಲ್ಲ. ಅರಮನೆಯ ಆಸ್ತಿ ಹಕ್ಕಿನಿಂದ ಹಿಡಿದು ಚಿನ್ನದ ಸಿಂಹಾಸನ, ಚಿನ್ನದ ಅಂಬಾರಿ, ಅಂಬಾರಿ ಆನೆಯ ಆಯ್ಕೆ, ದಸರಾ ಧಾರ್ಮಿಕ ಆಚರಣೆಗಳವರೆಗೆ ಒಂದರ ಹಿಂದೆ ಒಂದರಂತೆ ಚರ್ಚೆಗೆ ಗ್ರಾಸವಾಗಿರುವ ವಿಚಾರ ಗಳಿಗೆ ಇದೀಗ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇರವಾಗಿ ಉತ್ತರಿಸಿದ್ದಾರೆ.
ಮೈಸೂರಿನ ಅರಮನೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಲವು ವರ್ಷ ಗಳಿಂದ ಮುಂದು ವರಿದಿರುವ ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷದ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ತಮ್ಮ ಕುಟುಂಬದ ಆಸ್ತಿ ಹಕ್ಕು, ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಸುದ್ದಿಗೋಷ್ಠಿಯ ಕೇಂದ್ರಬಿಂದು ವಾಗಿದ್ದು ಚಿನ್ನದ ಸಿಂಹಾಸನ ಮತ್ತು ಚಿನ್ನದ ಅಂಬಾರಿಯ ಒಡೆತನದ ಪ್ರಶ್ನೆ. ಮೈಸೂರು ಅರಮನೆಯ ಚಿನ್ನದ ಸಿಂಹಾಸನ ಮತ್ತು ಚಿನ್ನದ ಅಂಬಾರಿ ಅಂದು, ಇಂದು, ಎಂದೆಂದಿಗೂ ರಾಜಮನೆತನದ ಖಾಸಗಿ ಸ್ವತ್ತುಗಳು. ಅವು ಎಂದಿಗೂ ರಾಜ್ಯ ಸರ್ಕಾರದ ಅಧೀನದಲ್ಲಿರಲಿಲ್ಲ.
ಇದನ್ನೂ ಓದಿ: Mysuru Dasara 2026: ಆಕರ್ಷಕ ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಗೆ ಅದ್ಧೂರಿ ತೆರೆ
ಅರಮನೆ ಸ್ವಾಧೀನ ಕಾಯ್ದೆಯ ವ್ಯಾಪ್ತಿಗೂ ಇವು ಒಳಪಡುವುದಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಅಂಬಾರಿ ಯಾವತ್ತಿಗೂ ಅರಮನೆ ಬಿಟ್ಟು ಹೋಗಿಲ್ಲ. ಅದರ ಒಡೆತನ ರಾಜಮನೆತನದ್ದೇ ಆಗಿದೆ. ಅಂಬಾರಿಯನ್ನು ನೀಡುವುದಕ್ಕೆ ಬಾಡಿಗೆ ಪಡೆಯುವುದಿಲ್ಲ, ಗೌರವಧನ ನೀಡುವ ಸಂಪ್ರದಾಯವಿದೆ. ಸರ್ಕಾರ ಮೊದಲು ಪತ್ರ ಬರೆದು ಅಂಬಾರಿಯನ್ನು ಕೇಳುತ್ತದೆ. ನಂತರ ಅದಕ್ಕೆ ಸಂಬಂಧಿಸಿದ ಪ್ರಚಾರ ನಡೆಯುತ್ತದೆ ಎಂದು ವಿವರಿಸಿದ್ದಾರೆ.
ಸರ್ಕಾರ ಯದುವಂಶದ ಉತ್ತರಾಧಿಕಾರಿಯಲ್ಲ
ದಸರಾ ಆಚರಣೆ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಪ್ರಮೋದಾದೇವಿ ಯದುವಂಶದ ಧಾರ್ಮಿಕ ಒಡೆಯರ್, ಆಚರಣೆಗಳನ್ನು ಮುಂದುವರಿಸುವ ಜವಾಬ್ದಾರಿ ರಾಜಮನೆತನದ್ದೇ ಹೊರತು ಸರ್ಕಾರದ್ದಲ್ಲ ಎಂದು ಹೇಳಿದ್ದಾರೆ. ನಾವು ನಮ್ಮ ಆಚರಣೆಗಳನ್ನು ಬಂದಿದ್ದೇವೆ. ಮಾಡಿಕೊಂಡು ಮುಂದೆಯೂ ಮುಂದುವರಿಸುತ್ತೇವೆ. ಸರ್ಕಾರ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿ. ಅದಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಅದೇ ರೀತಿ ಸರ್ಕಾರವೂ ರಾಜಮನೆತನದ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಿಗೆ ತೊಂದರೆ ನೀಡಬಾರದು ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ರಾಜಮನೆತನದೊಂದಿಗೆ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ತಮ್ಮ ಪತಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ, ಅಭಿಮಾನ ಮತ್ತು ಅನುಕಂಪವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಅರಣ್ಯ ಇಲಾಖೆಯ ನಡೆಗೆ ಆಕ್ಷೇಪ: ಈ ಬಾರಿಯ ದಸರಾ ಕಾರಣವಾಗಿದ್ದ ವಿವಾದಕ್ಕೆ ಪ್ರಮುಖ ಅಂಬಾರಿ ಆನೆಯ ಆಯ್ಕೆ ವಿಚಾರದಲ್ಲಿಯೂ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಸುಮಾರು 40 ವರ್ಷಗಳಿಂದ ರಾಜಮನೆತನವನ್ನು ಅರಣ್ಯ ವಿಶ್ವಾಸಕ್ಕೆ ಇಲಾಖೆ ತೆಗೆದು ಕೊಂಡು ಅಂಬಾರಿ ಹೊರುವ ಆನೆಯ ಆಯ್ಕೆ ಕುರಿತು ಮುಂಚಿತವಾಗಿ ಮಾಹಿತಿ ನೀಡುತ್ತಿತ್ತು. ಆದರೆ ಈ ಬಾರಿ ಜಂಬೂಸವಾರಿಗೆ ಕೇವಲ ಐದು ದಿನ ಬಾಕಿ ಇರುವಾಗ ಮಾಹಿತಿ ನೀಡಲಾಗಿದೆ ಎಂದು ಆಕ್ಷೇಪಿಸಿದ್ದಾರೆ.
ನಾವು ಅತ್ಯಂತ ಬೆಲೆಬಾಳುವ ಚಿನ್ನದ ಅಂಬಾರಿಯನ್ನು ನೀಡುತ್ತೇವೆ. ಅದರ ಮೇಲೆ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಯಾಗುತ್ತದೆ. ಲಕ್ಷಾಂತರ ಮೂರ್ತಿ ಜನರು ರಸ್ತೆಯುದ್ದಕ್ಕೂ ಇರುತ್ತಾರೆ. ಆನೆ, ಅಂಬಾರಿ ಮತ್ತು ಜನರ ಸುರಕ್ಷತೆ ನಮಗೆ ಮುಖ್ಯ. ಹಾಗಾಗಿ ಯಾವ ಆನೆ ಅಂಬಾರಿ ಹೊರುತ್ತದೆ ಎಂಬುದನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ.ಹಿಂದೆ ಅರ್ಜುನ ಆನೆ ಅಂಬಾರಿ ಕಟ್ಟಿದ ಸಂದರ್ಭದಲ್ಲೇ ಓಡಿಹೋಗಿದ್ದ ಘಟನೆಯನ್ನೂ ಉಲ್ಲೇಖಿಸಿರುವ ಅವರು, ಆನೆಯ ಸುರಕ್ಷತೆ ಮತ್ತು ನಿಯಂತ್ರಣದ ಬಗ್ಗೆ ರಾಜಮನೆತನಕ್ಕೆ ಸಹಜವಾಗಿಯೇ ಆತಂಕವಿರುತ್ತದೆ ಎಂದಿದ್ದಾರೆ.
ಅಂಬಾರಿ ಕೊಡಲ್ಲ ಎಂದಿಲ್ಲ
ಸರಕಾರದ ಜಂಬೂ ಸವಾರಿ ಉತ್ಸವಕ್ಕೆ ಅಂಬಾರಿ ನೀಡುವುದಿಲ್ಲ ಎಂದು ನಾನು ಹೇಳಿಲ್ಲ. ಚಾಮುಂಡೇಶ್ವರಿ ಮೂರ್ತಿ ಸರ್ಕಾರದ ಬಳಿಯೇ ಇದೆ. ಹಾಗಾಗಿ ಸರ್ಕಾರವೇ ಪ್ರತ್ಯೇಕ ಅಂಬಾರಿ ಮಾಡಿಸಿಕೊಳ್ಳಲಿ. ನಮ್ಮ ಬಳಿ ಅಂಬಾರಿ ಕೇಳುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದೆ. ಜನರು ಅಂಬಾರಿಯನ್ನು ನೋಡಲಿ ಎಂಬ ಕಾರಣಕ್ಕೆ ನಾವು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾನೂನು ಹೋರಾಟವೇ ಅಂತಿಮ
ಮೈಸೂರು ಅರಮನೆಯ ಒಡೆತನದ ವಿಚಾರವಾಗಿ ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಕಾನೂನು ಹೋರಾಟ ಇಂದು ನಿನ್ನೆಯದಲ್ಲ. ತಮ್ಮ ಮಾವನವರ ಕಾಲದಿಂದಲೂ ಈ ಸಂಘರ್ಷ ಮುಂದುವರಿದಿದೆ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ, ಅರಮನೆ ಆಸ್ತಿ ನಾಲ್ಕು ವಿವಾದವನ್ನು ಬಗೆಹರಿಸಿಕೊಳ್ಳಲು ರಾಜಕೀಯ ಪ್ರಭಾವ ಬಳಸಿಕೊಳ್ಳಲಿಲ್ಲ. ಕಾನೂನು ಪ್ರಕಾರವೇ ಹೋರಾಟ ನಡೆಸಬೇಕು ಎಂಬ ನಿಲುವು ಹೊಂದಿದ್ದರು ಎಂದು ಸ್ಮರಿಸಿದ್ದಾರೆ.
ಬೆಂಗಳೂರು ಅರಮನೆ ಆಸ್ತಿ ಮತ್ತು ಅದರ ಸುತ್ತಲಿನ ಭೂಮಿಗೆ ಸಂಬಂಧಿಸಿದಂತೆ 1996ರಲ್ಲಿ ಕರ್ನಾಟಕ ಸರ್ಕಾರ ಪ್ರತ್ಯೇಕ ಸ್ವಾಧೀನ ಮತ್ತು ವರ್ಗಾವಣೆ ಕಾಯ್ದೆ ಜಾರಿಗೆ ತಂದಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ. ಬೆಂಗಳೂರು ಅರಮನೆಗೆ ಸಂಬಂಧಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ. ಮೈಸೂರು ಮತ್ತು ಬೆಂಗಳೂರು ಅರಮನೆಗಳಿಗೆ ಪ್ರತ್ಯೇಕ ಸ್ವಾಧೀನ ತಂದಿರುವುದೇ ಆಸ್ತಿಗಳಾಗಿದ್ದವು ಈ ಕಾಯ್ದೆಗಳನ್ನು ಆಸ್ತಿಗಳು ಎಂಬುದನ್ನು ಜಾರಿಗೆ ಖಾಸಗಿ ತೋರಿಸುತ್ತದೆ ಎನ್ನುವುದು ಎಂದು ಪ್ರಮೋದಾದೇವಿ ಹೇಳಿದ್ದಾರೆ.
ಮೈಸೂರು ಅರಮನೆಗೆ ವ್ಯಾಜ್ಯವೂ ಸಂಬಂಧಿಸಿದ ನ್ಯಾಯಾಲಯದಲ್ಲಿದ್ದು, ಪ್ರಸ್ತುತ ಯಥಾಸ್ಥಿತಿ ಮುಂದುವರಿಸುವ ಹಂತದಲ್ಲಿದೆ. ನ್ಯಾಯಾಲಯದ ತೀರ್ಪೇ ಎಲ್ಲ ಗೊಂದಲಗಳಿಗೆ ಅಂತಿಮ ಉತ್ತರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೊಲೀಸರ ವಿರುದ್ಧ ಅರಮನೆಯ ಸಂದರ್ಭದಲ್ಲಿ ನಡೆದುಕೊಂಡ ಒಡೆಯರ್ ಆಯುಧಪೂಜೆ ಬ್ಯಾರಿಕೇಡ್ಗಳಿಂದ ಧಾರ್ಮಿಕ ಕೆಲವು ರೀತಿಗೆ ಆಕ್ಷೇಪ ಸಂದರ್ಭದಲ್ಲಿ ಅಸಮಾಧಾನ: ಆಚರಣೆಗಳ ಪೊಲೀಸ್ ಸಿಬ್ಬಂದಿ ಪ್ರಮೋದಾದೇವಿ ವ್ಯಕ್ತಪಡಿಸಿದ್ದಾರೆ. ಪೊಲೀಸರ ಸಮಸ್ಯೆಯಾಗಿದೆ. ಅರಮನೆಯ ಕೆಲವು ದ್ವಾರಗಳ ಬಳಿ ಪೊಲೀಸ್ ಸಿಬ್ಬಂದಿ ತೋರಿದ ವರ್ತನೆಯೇ ತಮ್ಮ ಪ್ರಮುಖ ಆಕ್ಷೇಪವಾಗಿತ್ತು ಎಂದಿದ್ದಾರೆ. ಸಿಎಂ ಹೇಳಿಕೆಗೆ ಸ್ವಾಗತ ತಮ್ಮ ಕಳವಳಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಮನಿಸಿ, ಮಾತುಕತೆಯ ಮೂಲಕ ಪರಿಶೀಲಿಸಿ ಸರಿಪಡಿಸುವುದಾಗಿ ಹೇಳಿರುವುದನ್ನು ಪ್ರಮೋದಾದೇವಿ ಒಡೆಯರ್ ಸ್ವಾಗತಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರೊಂದಿಗೆ ಮಾತನಾಡಲು ತಾವು ಸಿದ್ಧವಿರುವುದಾಗಿಯೂ ತಿಳಿಸಿದ್ದಾರೆ. ಹಿಂದಿನ ಪತ್ರಿಕಾ ಪ್ರಕಟಣೆಯಲ್ಲಿ ತಾವು ನೀಡಿದ್ದು ಕೇವಲ ಸಲಹೆಗಳೇ ಹೊರತು ಯಾವುದೇ ನಿರ್ಧಾರಗಳಲ್ಲ. ಸರ್ಕಾರ ಅವುಗಳನ್ನು ಪರಿಗಣಿಸಲಿ ಎಂಬ ಆಶಯವಿದೆ ಎಂದಿದ್ದಾರೆ.
ಪ್ರಮೋದಾ ಹೇಳಿದ್ದು
ಮೈಸೂರು ಅರಮನೆಯ ಚಿನ್ನದ ಸಿಂಹಾಸನ ಮತ್ತು ಚಿನ್ನದ ಅಂಬಾರಿ ಎಂದೆಂದಿಗೂ ರಾಜ ಮನೆತನದ ಖಾಸಗಿ ಸ್ವತ್ತುಗಳು
ರಾಜ್ಯ ಸರ್ಕಾರ ಯದುವಂಶದ ಉತ್ತರಾಧಿಕಾರಿಯಲ್ಲ. ಆಚರಣೆ ಮುಂದು ವರಿಸುವ ಜವಾಬ್ದಾರಿ ರಾಜ ಮನೆತನಕ ಸೇರಿದ್ದು
ಸರ್ಕಾರ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿ. ಸರ್ಕಾರವೂ ರಾಜಮನೆತನದ ಸಾಂಪ್ರದಾಯಿಕ ಆಚರಣೆಗಳಿಗೆ ತೊಂದರೆ ನೀಡಬಾರದು.