ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bheema: ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮೇಲೆ ವಾರ್ಷಿಕೋತ್ಸವದ ಆಕರ್ಷಕ ಕೊಡುಗೆಗಳು ಲಭ್ಯ

Bheema: ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮೇಲೆ ವಾರ್ಷಿಕೋತ್ಸವದ ಆಕರ್ಷಕ ಕೊಡುಗೆಗಳು ಲಭ್ಯ

Profile
Ashok Nayak Dec 5, 2024 5:41 PM
ಹೂಡಿ ಭೀಮ ಮಳಿಗೆಯು ವಿಶೇಷ ಕೊಡುಗೆಗಳು ಮತ್ತು ಲಕ್ಕಿ ಡ್ರಾ ಮೂಲಕ ತನ್ನ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಬೆಂಗಳೂರು: ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಆಭರಣ ಸಂಸ್ಥೆಗಳಲ್ಲಿ ಒಂದಾಗಿರುವ ಭೀಮ ಇಂದಿನಿಂದ ಅಂದರೆ ಡಿಸೆಂಬರ್ 6 ರಿಂದ ಡಿಸೆಂಬರ್ 8 ರವರೆಗೆ ವಿಶೇಷವಾಗಿ ಮೂರು ದಿನಗಳ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಹೂಡಿ ಮಳಿಗೆಯ 4ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ.ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷವಾದ ಕೊಡುಗೆಗಳನ್ನು ನೀಡಲು ಗ್ರಾಹಕರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸ್ಥೆಯು ಆಹ್ವಾನಿಸಿದೆ.
ಈ ಮೂರು ದಿನಗಳ ಕಾಲ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಆಫರ್ ಗಳನ್ನು ಒದಗಿಸಲಿದೆ. ಈ ಸಂದರ್ಭದಲ್ಲಿ ಗ್ರಾಹಕರು ಪ್ರತಿ ಗ್ರಾಂ ಚಿನ್ನದ ಮೇಲೆ ರೂ. 500 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಪ್ರತಿ ಕೆಜಿ ಬೆಳ್ಳಿಯ ಮೇಲೆ ರೂ. 5,000 ವರೆಗೆ ರಿಯಾಯಿತಿ ಹೊಂದಬಹುದು. ವಿಶೇಷವಾಗಿ ವಜ್ರಾಭರಣದ ಪ್ರತೀ ಕ್ಯಾರೆಟ್ ಮೇಲೆ ಫ್ಲಾಟ್ ರೂ. 7,000 ಕ್ಯಾಶ್ ಬ್ಯಾಕ್ ಜೊತೆಗೆ ರೂ. 1 ಲಕ್ಷದವರೆಗೆ ಉಚಿತ ಗಿಫ್ಟ್ ಕಾರ್ಡ್ ಪಡೆಯಬಹುದು . ಎಲ್ಲಕ್ಕಿಂತ ಹೆಚ್ಚಾಗಿ ಈ ಅವಧಿಯಲ್ಲಿ ಶೋರೂಮ್ಗೆ ಭೇಟಿ ನೀಡುವ ಗ್ರಾಹಕರು ವಿಶೇಷ ಲಕ್ಕಿ ಡ್ರಾದಲ್ಲಿ ಭಾಗವಹಿಸುವ ಅವಕಾಶವನ್ನು ಹೊಂದಿರುತ್ತಾರೆ. ಅದರಲ್ಲಿ ಪ್ರತಿದಿನ ಎರಡು ಏಪ್ರಿಲಿಯಾ ಸ್ಕೂಟರ್ ಗಳನ್ನು ಗೆಲ್ಲುವ ಅತ್ಯಾಕರ್ಷಕ ಅವಕಾಶ ಪಡೆಯಲಿದ್ದು, ಈ ಲಕ್ಕಿ ಡ್ರಾ ವಾರ್ಷಿಕೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ.
ಈ ವಿಶೇಷ ಕೊಡುಗೆಗಳ ಮೂಲಕ ಭೀಮ ಸಂಸ್ಥೆಯು ತನ್ನ ಬ್ರಾಂಡ್ ನ ಅವಿಭಾಜ್ಯ ಅಂಗವಾಗಿರುವ ನಿಷ್ಠಾವಂತ ಮತ್ತು ಮೌಲ್ಯಯುತ ಗ್ರಾಹಕರಿಗೆ ಹೃದಯಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ. 4ನೇ ವಾರ್ಷಿಕೋತ್ಸವದ ಆಚರಣೆಯು ಸಂಸ್ಥೆಗೆ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ತನ್ನ ಗೌರವಾನ್ವಿತ ಗ್ರಾಹಕರ ಜೊತೆಗಿನ ಬಾಂಧವ್ಯವನ್ನು ಸಂಭ್ರಮಿಸಲು ಒಂದು ಉತ್ತಮ ಅವಕಾಶವಾಗಿದೆ. ಪ್ರತಿ ಸಂದರ್ಭ ಮತ್ತು ಅಭಿರುಚಿಗೆ ತಕ್ಕಂತೆ ವ್ಯಾಪಕ ಶ್ರೇಣಿಯ ಆಭರಣಗಳನ್ನುಒದಗಿಸುವ ಭೀಮ ಸಂಸ್ಥೆಯು ತನ್ನ ಸೊಗಸಾದ ವಿನ್ಯಾಸಗಳ ಆಭರಣ ಸಂಗ್ರಹವನ್ನು ವೀಕ್ಷಿಸಲು ಮತ್ತು ಈ ವಿಶೇಷ ವಾರ್ಷಿಕೋತ್ಸವ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಲು ಗ್ರಾಹಕರಿಗೆ ವಿಶೇಷ ಆಹ್ವಾನ ನೀಡುತ್ತದೆ.