Election Results 2026:ಮ್ಯಾಜಿಕ್ ಸಂಖ್ಯೆ ದಾಟಲು ವಿಫಲವಾದರೆ ಏನು ಮಾಡುತ್ತಾರೆ ನಟ ವಿಜಯ್?
ದೇಶದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಇದೀಗ ತಮಿಳುನಾಡು ವಿಧಾನ ಸಭಾ ಕ್ಷೇತ್ರವು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಮತ ಎಣಿಕೆಯ ಆರಂಭದಿಂದ ಮುನ್ನಡೆಯಲ್ಲಿರುವ ನಟ ವಿಜಯ್ ಅವರ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಒಂದು ವೇಳೆ ಮ್ಯಾಜಿಕ್ ಸಂಖ್ಯೆ ದಾಟಲು ಸಾಧ್ಯವಾಗದಿದ್ದರೆ ಏನು ಮಾಡಬಹುದು ಎನ್ನುವ ಕುತೂಹಲವನ್ನು ಉಂಟು ಮಾಡಿದೆ.
ಸಂಗ್ರಹ ಚಿತ್ರ -
ಚೆನ್ನೈ: ಸಾಕಷ್ಟು ಕುತೂಹಲ ಮೂಡಿಸಿರುವ ತಮಿಳುನಾಡಿನ (tamilnadu) ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ (Election Results 2026) ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮುನ್ನಡೆಯನ್ನು ಸಾಧಿಸಿದೆ. ತಮಿಳುನಾಡು ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ ಸಮೀಪದಲ್ಲಿರುವ ವಿಜಯ್ ಅವರ ಪಕ್ಷವು ಒಂದು ವೇಳೆ ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಾಗದಿದ್ದರೆ ಏನು ಮಾಡುವುದು ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಅದು ಎಐಎಡಿಎಂಕೆ ಪಕ್ಷಗಳು ಸೇರಿ ಸರ್ಕಾರ ರಚಿಸುತ್ತವೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.
ತಮಿಳುನಾಡು ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 118. ಇದನ್ನು ದಾಟಲು ವಿಫಲವಾದರೆ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಜೊತೆ ಮೈತ್ರಿ ನಡೆಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ತಮಿಳುನಾಡು ರಾಜಕೀಯವನ್ನೇ ತಿದ್ದಿ ಬರೆದ ಟಿವಿಕೆ; ಚೊಚ್ಚಲ ಪ್ರಯತ್ನದಲ್ಲೇ ಸರ್ಕಾರ ರಚನೆಯತ್ತ ದಳಪತಿ ವಿಜಯ್
ಚೆನ್ನೈನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆ 106 ಸ್ಥಾನಗಳಲ್ಲಿ ಟಿವಿಕೆ ಮುನ್ನಡೆಯನ್ನು ಸಾಧಿಸಿದೆ. ಎಐಎಡಿಎಂಕೆ 62 ಸ್ಥಾನಗಳಲ್ಲಿ ಮುನ್ನಡೆಯುತ್ತಿದೆ. ಈ ನಡುವೆ ಚುನಾವಣೆ ಬಳಿಕ ಮೈತ್ರಿ ಮಾತುಕತೆಗಳು ಕೂಡ ಜೋರಾಗಿ ನಡೆಯುತ್ತಿದೆ.
ಡಿಎಂಕೆ ಮ್ಯಾಜಿಕ್ ಸಂಖ್ಯೆ ದಾಟುವುದು ಕಷ್ಟಕರವಾಗಿದೆ. ಆದರೆ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ದಳಪತಿ ವಿಜಯ್ ನಡುವೆ ಮೈತ್ರಿ ನಡೆಯಬಹುದು ಎನ್ನಲಾಗುತ್ತಿದೆ.
ಎಐಎಡಿಎಂಕೆ ಮತ್ತು ಟಿವಿಕೆ ಪರಸ್ಪರ ವಿರೋಧಿಗಳಾಗಿಯೇ ಗುರುತಿಸಿಕೊಂಡಿದ್ದಾರೆ. ಯಾಕೆಂದರೆ ಪ್ರಚಾರದ ಸಮಯದಲ್ಲಿ ವಿಜಯ್ ಏಕಾಂಗಿ ನಿಲುವನ್ನು ಕಾಯ್ದುಕೊಂಡಿದ್ದಾರೆ. ಅವರ ಪಕ್ಷ ಪ್ರಚಾರದ ವೇಳೆ ನಿರಂತರವಾಗಿ ಆಡಳಿತದ ವಿರುದ್ಧವೇ ಪ್ರತಿಧ್ವನಿಸಿತು. ಇನ್ನು ಇಪಿಎಸ್ ಜೊತೆ ವಿಜಯ್ ಮೈತ್ರಿ ಮಾಡಿಕೊಂಡರೆ ಪಕ್ಷಕ್ಕೆ ಒಬ್ಬ ಸಮರ್ಥ ನಾಯಕ ದೊರೆತಂತಾಗುತ್ತದೆ. ಮುಂದೆ ಇಪಿಎಸ್ ಗೆ ಉಪ ಮುಖ್ಯಮಂತ್ರಿ ಹುದ್ದೆ ಅಥವಾ ಸಂಪುಟದಲ್ಲಿ ಹೆಚ್ಚಿನ ಪಾಲು ಸಿಗುವ ನಿರೀಕ್ಷೆ ಇದೆ.
Election Results 2026: ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ದಳಪತಿ ವಿಜಯ್ ದಾಖಲೆ ನಿರ್ಮಿಸುವರೇ?
ವಿಜಯ್ ಅವರು ಎಐಎಡಿಎಂಕೆ ಜೊತೆ ಮೈತ್ರಿಯಿಂದ ದೂರವೇ ಉಳಿದಿದ್ದಾರೆ. ಯಾಕೆಂದರೆ ಅವರೊಂದಿಗೆ ವಿಶೇಷವಾಗಿ ಬಿಜೆಪಿ ಗುರುತಿಸಿಕೊಂಡಿದೆ. ಹೀಗಾಗಿ ಎರಡು ಪಕ್ಷಗಳು ಟಿವಿಕೆ ಪಕ್ಷದ ನಾಯಕರನ್ನು ಕಡೆಗಣಿಸುವ ಸಾಧ್ಯತೆ ಇದೆ. ಅಲ್ಲದೇ ಮತದಾರರ ಅಸಮಾಧಾನಕ್ಕೂ ಕೂಡ ಇದು ಕಾರಣವಾಗಬಹುದು ಎನ್ನಲಾಗಿದೆ.