ಟಿವಿಕೆ ಅಭ್ಯರ್ಥಿ ವಿರುದ್ಧ ಡಿಎಂಕೆ ಸಚಿವನನ್ನು ಸೋಲಿಸಿತ್ತು ಕೇವಲ ಒಂದು ಮತ
ಕೇವಲ ಒಂದೇ ಒಂದು ಮತ ಮಸ್ಕತ್ ವ್ಯಕ್ತಿ ಹಾಕದೇ ಇರುತ್ತಿದ್ದರೆ ಅಲ್ಲಿನ ರಾಜಕೀಯ ಚಿತ್ರಣವೇ ಬೇರೆ ಆಗಿರುತ್ತಿತ್ತು. ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಡಿಎಂಕೆ ಸಚಿವನ ಸೋಲಿಗೆ ಕಾರಣವಾಗಿದ್ದು ಕೇವಲ ಒಂದು ಮತ ಎಂದರೆ ಅಚ್ಚರಿಯಾಗಲೇಬೇಕು. ಇದರಿಂದಾಗಿಯೇ ಟಿವಿಕೆ ಅಭ್ಯರ್ಥಿ ಗೆದ್ದರು. ಇಂದು ಒಂದು ಮತದ ಮಹತ್ವದ ಕಥೆಯನ್ನು ಈಗ ಹೇಳುತ್ತಿದೆ.
ಸಂಗ್ರಹ ಚಿತ್ರ -
ಚೆನ್ನೈ: ಈ ಬಾರಿ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ (assembly election 2026) ಹೆಚ್ಚು ಗಮನ ಸೆಳೆದದ್ದು ಪಶ್ಚಿಮ ಬಂಗಾಳ (west bengal) ಮತ್ತು ತಮಿಳುನಾಡು (tamil nadu). ಅದರಲ್ಲೂ ತಮಿಳುನಾಡು ವಿಧಾನಸಭಾ ಚುನಾವಣಾ (tamil nadu assembly election) ಫಲಿತಾಂಶ ಹಲವು ಅಚ್ಚರಿಗಳನ್ನು ನೀಡಿದೆ. ಅದರಲ್ಲಿ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Tiruppattur Assembly Constituency) ನಡೆದ ಒಂದು ಮತದ ಕಥೆಯು ಕೂಡ ಸೇರಿಕೊಂಡಿದೆ. ಇಲ್ಲಿ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ತಮಿಳಗ ವೆಟ್ರಿ ಕಳಗಂ (TVK) ನ ಸೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದೇ ಒಂದು ಮತದಿಂದ ಸೋಲು ಅನುಭವಿಸಿದ್ದಾರೆ. ಇದು ಈಗ ಅತೀ ಕಡಿಮೆ ಅಂತರದ ಸೋಲು ಮತ್ತು ಗೆಲುವು ಎಂದು ಕೂಡ ದಾಖಲಾಗಿದೆ.
ತಮಿಳುನಾಡಿನಾದ್ಯಂತ ಈ ಬಾರಿಯ ವಿಧಾನ ಸಭಾ ಚುನಾವಣೆಯು ಆಶ್ಚರ್ಯದ ಫಲಿತಾಂಶಕ್ಕೆ ಕಾರಣವಾಗಿದೆ. ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಸಹಕಾರಿ ಸಚಿವರಾಗಿದ್ದ ಕೆ.ಆರ್. ಪೆರಿಯಕರುಪ್ಪನ್ ಅವರು 83,375 ಮತಗಳನ್ನು ಗಳಿಸಿದ್ದು, ಕೇವಲ ಒಂದು ಮತದ ಅಂತರದಿಂದ ಸೋತಿದ್ದಾರೆ. ಇದು ಅತೀ ಕಡಿಮೆ ಅಂತರದ ಸೋಲು ಎಂದೇ ಚುನಾವಣಾ ಇತಿಹಾಸದಲ್ಲಿ ದಾಖಲಾಗಿದೆ.
Vijay: ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ; ಮೊದಲ ಬಾರಿಗೆ ಫ್ಯಾನ್ಸ್ ಮುಂದೆ ಬಂದ ವಿಜಯ್!
ಪೆರಿಯಕರುಪ್ಪನ್ ಅವರ ವಿರುದ್ಧ ಸ್ಪರ್ಧಿಸಿದ್ದ ಟಿವಿಕೆಯ ಸೀನಿವಾಸ ಸೇತುಪತಿ ಕೇವಲ ಒಂದು ಮತದಿಂದ ಅವರನ್ನು ಹಿಂದಿಕ್ಕಿದರು. ಇದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತದ ಮೌಲ್ಯದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಫಲಿತಾಂಶಕ್ಕೆ ಕಾರಣವಾಗಿದ್ದು ಮಸ್ಕತ್‌ನಿಂದ ಮತ ಚಲಾಯಿಸಲೆಂದೇ ಬಂದಿರುವ ಮತದಾರ ಮಣಿಕಂಠನ್ ಶಿವನಾಥಮ್.
ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಘೋಷಣೆಯಾದ ಮೇಲೆ ಶಿವನಾಥಮ್ ಅವರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಬರೆದಿದ್ದು, ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಮತದಾನಕ್ಕೆ ಕೆಲವು ದಿನಗಳ ಮೊದಲು ಅವರು ಊರಿಗೆ ಬಂದಿದ್ದು, ತಮ್ಮ ಪ್ರಯಾಣದ ಯೋಜನೆ, ಟಿವಿಕೆ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ಕಡಿಮೆ ಅಂತರದ ಟಿವಿಕೆ ಅಭ್ಯರ್ಥಿಯ ಗೆಲುವು ಚುನಾವಣಾ ಫಲಿತಾಂಶಗಳ ಮೇಲೆ ಒಂದು ಮತ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತೋರಿಸಿದೆ ಎಂದು ಹೇಳಿದ್ದಾರೆ.
ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?
ಭಾರತೀಯ ಚುನಾವಣಾ ಇತಿಹಾಸದಲ್ಲೇ ತಿರುಪತ್ತೂರಿನ ಸ್ಪರ್ಧೆಯು ತೀವ್ರ ಪೈಪೋಟಿ ಮತ್ತು ಕಡಿಮೆ ಅಂತರದ ಗೆಲುವನ್ನು ದಾಖಲಿಸಿದೆ. ಇಂತಹ ಫಲಿತಾಂಶಗಳು ಅನಿರೀಕ್ಷಿತ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮತ ಕೂಡ ಎಷ್ಟು ಮಹತ್ವದ್ದಾಗಿರುತ್ತದೆ ಎಂಬುದನ್ನು ಸಾರಿದೆ.