Akshaya Trutiya Special: ಅಕ್ಷಯ ತೃತೀಯ ಸೀಸನ್‌ನಲ್ಲಿ ಬ್ರೈಡಲ್ ಆಭರಣಗಳಿಗೆ ಹೆಚ್ಚಿದ ಬೇಡಿಕೆ
Akshaya Trutiya Special: ಅಕ್ಷಯ ತೃತೀಯ ಸಮೀಪಿಸುತ್ತಿದೆ. ಇದೇ ಸೀಸನ್‌ನಲ್ಲಿ ಎಲ್ಲೆಡೆ ಮದುವೆಯ ಸಂಭ್ರಮಾಚರಣೆಗಳು ನಡೆಯುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಆಭರಣ ಲೋಕದಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ವೆಡ್ಡಿಂಗ್ ಜ್ಯುವೆಲರಿಗಳು ಬಿಡುಗಡೆಗೊಂಡಿವೆ. ಯಾವ್ಯಾವ ಆಭರಣಗಳು ಬೇಡಿಕೆ ಸೃಷ್ಟಿಸಿಗೊಂಡಿವೆ? ಈ ಎಲ್ಲದರ ಬಗ್ಗೆ ಜ್ಯುವೆಲ್ ಡಿಸೈನರ್‌ಗಳು ವಿವರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯ ತೃತೀಯ (Akshaya Trutiya Special) ಸಮೀಪಿಸುತ್ತಿದ್ದು, ಇದೇ ಸಮಯದಲ್ಲಿ ಎಲ್ಲೆಡೆ ಮದುವೆ ಸೀಸನ್ ಕೂಡ ಆರಂಭಗೊಂಡಿದೆ. ಇದಕ್ಕೆ ಪೂರಕ ಎಂಬಂತೆ, ಆಭರಣಗಳ ಲೋಕದಲ್ಲಿ, ಲೆಕ್ಕವಿಲ್ಲದಷ್ಟು ಬ್ರೈಡಲ್ ಜ್ಯುವೆಲರಿ ಆಭರಣಗಳು ಬಿಡುಗಡೆಗೊಂಡಿವೆ. ಅವುಗಳಲ್ಲಿ ಸಾಕಷ್ಟು ಆಭರಣಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ ಮದುಮಗಳ ಸಿಂಗಾರಕ್ಕೆ ಸಾಥ್ ನೀಡುವಂತಹ ಬ್ರೈಡಲ್ ಸೆಟ್‌ಗಳು ಟ್ರೆಂಡಿಯಾಗಿವೆ.
ಇತ್ತೀಚೆಗೆ ಮದುವೆಗಳಲ್ಲಿ ಬಿಗ್ ಜುಮುಕಿಗಳನ್ನು ಧರಿಸುವುದು ಹೆಚ್ಚಾಗಿದೆ. ಮುತ್ತಿನ ಜುಮುಕಿಗಳು ಮರಳಿ ಜನಪ್ರಿಯಗೊಂಡಿವೆ. ಅವನ್ನು ಹೊರತುಪಡಿಸಿದರೆ ಹರಳಿನಿಂದ ಕೂಡಿದಂತಹ ಬಿಗ್ ಕಿವಿಯೋಲೆ ಮತ್ತು ಜುಮಕಿಗಳು ಹಾಗೂ ಮದುಮಗಳ ಸೀರೆಗೊಪ್ಪುವಂತಹ ಬಣ್ಣದ ಹರಳು ಅಥವಾ ಕ್ರಿಸ್ಟಲ್‌ನವು ಟ್ರೆಂಡಿಯಾಗಿವೆ. ಇದರೊಂದಿಗೆ ಕೆನ್ನೆ ಸರಪಳಿ ಧರಿಸುವುದು ಕಾಮನ್ ಆಗಿದೆ. ಅವುಗಳು ಕೂಡ ನಾನಾ ವಿನ್ಯಾಸದಲ್ಲಿ ದೊರೆಯುತ್ತಿವೆ.

ಮುಖದ ಅಂದ ಹೆಚ್ಚಿಸುವ ಪ್ರೆಸ್ ಆನ್ ನೋಸ್ ಸ್ಟಡ್ಸ್
ಮದುಮಗಳ ಅಂದ ಹೆಚ್ಚಿಸುವ ಡಿಸೈನರ್ ನೋಸ್ ಸ್ಟಡ್‌ಗಳಿಗೇ ಡಿಮ್ಯಾಂಡ್ ಹೆಚ್ಚಾಗಿದೆ. ಮೂಗು ಚುಚ್ಚಿಸದವರೂ ಧರಿಸಬಹುದಾದ ನೋಸ್ ಸ್ಟಡ್ಸ್ ಮೊದಲಿಗಿಂತ ಹೆಚ್ಚು ಮಾರಾಟವಾಗುತ್ತಿದೆ ಎನ್ನುತ್ತಾರೆ ಆಭರಣ ಶಾಪ್‌ವೊಂದರ ಮ್ಯಾನೇಜರ್.
ಡಿಸೈನರ್ ಸೈಡ್ ಬಳೆಗಳು / ಕಡ
ಸೈಡಿನಲ್ಲಿ ಧರಿಸಬಹುದಾದ ಬಳೆಗಳು ಇಂದು ಟ್ರೆಂಡಿಯಾಗಿವೆ. ಅವುಗಳೊಂದಿಗೆ ಸೆಂಟರ್‌ನಲ್ಲಿ ಧರಿಸಬಹುದಾದ ಕಡ, ಕಡಗಗಳು ಬೇಡಿಕೆ ಹೆಚ್ಚಿಕೊಂಡಿವೆ. ಹರಳು, ಕ್ರಿಸ್ಟಲ್, ಮುತ್ತುಗಳಿಂದ ತಯಾರಿಸಿದಂತಹ ಕಡಗದಂತಹ ಬಳೆಗಳು ಚಾಲ್ತಿಯಲ್ಲಿವೆ.

ಕತ್ತನ್ನು ಆವರಿಸುವ ಬಿಗ್ ನೆಕ್‌ಲೆಸ್
ಮದುಮಗಳ ಕುತ್ತಿಗೆಯನ್ನು ಆವರಿಸಿಕೊಳ್ಳುವ ಅಗಲವಾದ ಚೋಕರ್ ಅಥವಾ ಬಿಗ್ ಸ್ಟೇಟ್‌ಮೆಂಟ್ ನೆಕ್ಲೇಸ್‌ಗಳು ಬ್ರೈಡಲ್ ಸೆಟ್‌ನಲ್ಲಿ ದೊರೆಯುತ್ತಿವೆ. ಕಂಪ್ಲೀಟ್ ಸ್ಟೋನ್ಸ್, ಪರ್ಲ್, ಲೇಯರ್ ನೆಕ್ಲೇಸ್, ರೂಬಿ, ಜೆಡ್, ಪ್ರಿಶಿಯಸ್ ಸ್ಟೋನ್ಸ್ ಇರುವಂತವು ಹೆಚ್ಚು ಟ್ರೆಂಡಿಯಾಗಿವೆ.
ದೇವತೆಯಂತೆ ಬಿಂಬಿಸುವ ಲಾಂಗ್ ಹಾರ
ಮದುಮಗಳಿಗೆ ವಿಶೇಷವಾಗಿ ಲಾಂಗ್ ಹಾರ ಧರಿಸುವುದು ಹೆಚ್ಚು ಗ್ರಾಂಡ್ ಲುಕ್ ನೀಡುತ್ತದೆ. ನೋಡುಗರಿಗೆ ದೇವತೆಯಂತೆ ಬಿಂಬಿಸುತ್ತವೆ. ಇವುಗಳಲ್ಲಂತೂ ದೊಡ್ಡ ಲಕ್ಷ್ಮೀ ಪೆಡೆಂಟ್‌ನಿಂದ ಕೂಡಿದ ಸರ ಕಾಮನ್ ಆಗಿದೆ. ಇನ್ನು ಆ್ಯಂಟಿಕ್ ಹಾಗೂ ಟೆಂಪಲ್ ಡಿಸೈನ್‌ನವು ಹೆಚ್ಚು ಚಾಲ್ತಿಯ್ಲಲಿವೆ.

ಟ್ರೆಡಿಷನಲ್ ಡಾಬು ಜಾದೂ
ಬಂಗಾರದಲ್ಲಿಯೂ ಇದೀಗ ಲೈಟ್‌ವೇಟ್ ಡಾಬು ಬಂದಿವೆ. ಹೆಚ್ಚು ತೂಕವಿಲ್ಲದ ಇವನ್ನು ಇಂದು ಬಿಗ್ ಫ್ಯಾಟ್ ವೆಡ್ಡಿಂಗ್‌ನಲ್ಲಿ ಹೆಣ್ಣುಮಕ್ಕಳು ಧರಿಸುವುದು ಕಾಮನ್ ಆಗುತ್ತಿದೆ. ಡಾಬು ಧರಿಸಿದರೆ ಗ್ರ್ಯಾಂಡ್ ಲುಕ್ ಸಿಗುತ್ತದೆ ಎಂಬ ಕಾರಣಕ್ಕಾಗಿ ಟು ಇನ್ ವನ್ ಡಾಬನ್ನು ಖರೀದಿಸುವವರು ಹೆಚ್ಚಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Akshaya Trutiya Special: ಅಕ್ಷಯ ತೃತೀಯಾಗೆ ಎಂಟ್ರಿ ನೀಡಿದ ಕಂಟೆಂಪರರಿ ಡೈಮಂಡ್ ಜ್ಯುವೆಲರಿಗಳು
ಚೋಕರ್ ವರ್ಸಸ್ ಬಾಜುಬಂದ್
ಆ್ಯಂಟಿಕ್ ಡಿಸೈನ್‌ನ ಟೂ ಇನ್ ವನ್ ಬಳಸಬಹುದಾದ ಬಾಜುಬಂದ್‌ಗಳು ಈ ಸೀಸನ್‌ನಲ್ಲಿ ಟ್ರೆಂಡ್‌ನಲ್ಲಿವೆ. ಬೇಕಾದಾಗ ಚೋಕರ್‌ನಂತೆ ಇವನ್ನು ಧರಿಸಬಹುದು. ಬಾಜುಬಂದ್‌ನಂತೆಯೂ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)