ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akshaya Trutiya Special: ಅಕ್ಷಯ ತೃತೀಯಾ ಪ್ರಯುಕ್ತ ಬಂಗಾರ ಖರೀದಿಸುವವರು ತಿಳಿದುಕೊಳ್ಳಬೇಕಾದ ಅಂಶಗಳಿವು

ಅಕ್ಷಯ ತೃತೀಯ ಪ್ರಯುಕ್ತ ಈಗಾಗಲೇ ಗೋಲ್ಡ್‌ ಶಾಪಿಂಗ್‌ ಮಾಡುವ ಯೋಚನೆ ಸಾಕಷ್ಟು ಜನರಿಗಿದೆ. ಅಂತಹವರು ಬಂಗಾರದ ಒಡವೆಗಳನ್ನು ಖರೀದಿಸುವ ಮುನ್ನ ಒಂದಿಷ್ಟು ಉಪಯುಕ್ತ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಎಕ್ಸ್ಪರ್ಟ್ಸ್‌ . ಈ ಕುರಿತಂತೆ ಒಂದಿಷ್ಟು ಸಿಂಪಲ್‌ ಸಲಹೆಗಳನ್ನು ನೀಡಿದ್ದಾರೆ.

ಅಕ್ಷಯ ತೃತೀಯಾ ಪ್ರಯುಕ್ತ ಬಂಗಾರ ಖರೀದಿಸುವವರು ತಿಳಿದುಕೊಳ್ಳಬೇಕಾದ ಅಂಶಗಳಿವು

ಚಿತ್ರಕೃಪೆ: ಪಿಕ್ಸೆಲ್‌

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅಕ್ಷಯ ತೃತೀಯ ಪ್ರಯುಕ್ತ (Akshaya Trutiya Special) ಚಿನ್ನ ಖರೀದಿ ಮಾಡುವವರ ಸಂಖ್ಯೆ ಬರಬರುತ್ತಾ ಮೊದಲಿಗಿಂತ ಹೆಚ್ಚಾಗಲಿದೆ. ಅಂತಹವರು ಚಿನ್ನಾಭರಣಗಳನ್ನು ಖರೀದಿ ಮಾಡುವ ಪ್ರತಿಯೊಬ್ಬರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೊಳ್ಳುವುದು ಉತ್ತಮ ಎನ್ನುತ್ತಾರೆ ಎಕ್ಸ್‌ಪರ್ಟ್ಸ್. ಈ ಕುರಿತಂತೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಬಂಗಾರ ಖರೀದಿಸುವುದಕ್ಕೂ ಮೊದಲು, ನೀವು ಖರೀದಿ ಮಾಡುತ್ತಿರುವ ಚಿನ್ನದ ಅಂಗಡಿಯು ಎಷ್ಟು ಹೆಸರು ಹಾಗೂ ಖ್ಯಾತಿ ಹೊಂದಿದೆ. ನಂಬಿಕೆಗೆ ಹೆಸರು ಮಾಡಿದೆಯೇ! ಎಂಬುದನ್ನು ಗಮನಿಸಿ ಭೇಟಿ ನೀಡಬೇಕು. ಬಂಗಾರದ ಆಭರಣಗಳನ್ನು ಖರೀದಿಸುತ್ತಿರುವ ಅಂಗಡಿಯ ಬ್ರಾಂಡ್‌ ಅಧಿಕೃತವೇ! ಗುಣಮಟ್ಟವನ್ನು ಕಾಯ್ದುಕೊಂಡಿದೆಯೇ! ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ. ಹಾಗಾಗಿ ಚಿನ್ನದ ಅಂಗಡಿಗೆ ಹೋಗುವುದಕ್ಕೂ ಮೊದಲು ಪ್ಲಾನ್‌ ಮಾಡಿ. ಆಯ್ಕೆ ಸರಿಯಾಗಿರಲಿ. ಅನುಭವ ಇರುವವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ. ‌

Akshaya Trutiya Special 1

ಬಂಗಾರದ ಪರಿಶುದ್ಧತೆ

ಎಕ್ಸ್‌ಪರ್ಟ್ಸ್ ಪ್ರಕಾರ, ಚಿನ್ನ ಕೊಳ್ಳುವಾಗ ಪ್ರಮುಖವಾದ ಅಂಶವೆಂದರೆ ಪರಿಶುದ್ಧತೆ. ಪರಿಶುದ್ಧವಾದ ಗೋಲ್ಡ್‌ ಮೃದುವಾಗಿರುವುದರಿಂದ ಆಭರಣ ಮಾಡುವುದು ಅಸಾಧ್ಯ. ಪರಿಶುದ್ಧ ಚಿನ್ನದ ಜತೆ ಬೆಳ್ಳಿ, ತಾಮ್ರ, ನಿಕ್ಕೆಲ್‌ ಮತ್ತು ಸತು ಮೊದಲಾದ ಲೋಹಗಳನ್ನು ಸೇರಿಸಲಾಗುತ್ತದೆ. ಇವುಗಳನ್ನು ಸೇರಿಸಿದಾಗ ಚಿನ್ನ ಗಟ್ಟಿಯಾಗುತ್ತದೆ ಮತ್ತು ಬಾಳಿಕೆ ಕೂಡ ಬರುತ್ತದೆ. ಗೋಲ್ಡ್‌ನಲ್ಲಿ 18, 22 ಮತ್ತು 24 ಕ್ಯಾರಟ್‌ ಇರುತ್ತದೆ. ಉದಾಹರಣೆಗೆ 9 ಕ್ಯಾರಟ್‌ ಅಂದರೆ ಸುಮಾರು ಶೇ.37 ರಷ್ಟು ಶುದ್ಧವಾಗಿರುತ್ತದೆ. 24 ಕ್ಯಾರಂಟ್‌ ಅಂದರೆ ಶೇ.99 ರಷ್ಟು ಪರಿಶುದ್ಧವಾಗಿರುತ್ತದೆ. ಚಿನ್ನ ಖರೀದಿಸುವುದಕ್ಕೂ ಮುನ್ನ ಅದರ ಶುದ್ಧತೆ, ಗುಣಮಟ್ಟ, ವಿನ್ಯಾಸವನ್ನು ಪರಿಗಣಿಸಿ ಮುಂದುವರೆಯಿರಿ.

Akshaya Trutiya Special 2

ಪರಿಶುದ್ಧತೆಗೆ ತಕ್ಕಂತೆ ಬೆಲೆ

ಖರೀದಿಸುವ ಚಿನ್ನದ ಬೆಲೆಯು ಪರಿಶುದ್ಧತೆಯನ್ನು ಆಧರಿಸಿರುತ್ತದೆ. 24 ಕ್ಯಾರಟ್‌ ಚಿನ್ನದ ಬೆಲೆ ಅತಿ ದುಬಾರಿ. ಹೀಗಾಗಿ ನಿಮ್ಮ ಬಜೆಟ್‌ ಮೊತ್ತ ಕಡಿಮೆಯಾಗಿದ್ದರೆ ಕೊಂಡುಕೊಳ್ಳಲು ಕೊಂಚ ಕಷ್ಟ. ಜತೆಗೆ ಚಿನ್ನಕ್ಕೆ ಎಷ್ಟು ಪ್ರಮಾಣದಲ್ಲಿ ಲೋಹವನ್ನು ಮಿಶ್ರಣ ಮಾಡಲಾಗಿದೆ, ಸ್ಕಿಲ್ಸ್‌, ಲೇಬರ್‌ ಚಾರ್ಜ್‌ ಎಲ್ಲವನ್ನೂ ಒಳಗೊಂಡಿರುತ್ತದೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Akshaya Trutiya Special: ಅಕ್ಷಯ ತೃತೀಯ ಪ್ರಯುಕ್ತ ಸಜ್ಜಾದ ಆಭರಣ ಲೋಕ