ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gown Fashion 2026: ಪಾರ್ಟಿ ಪ್ರಿಯರನ್ನು ಸವಾರಿ ಮಾಡುತ್ತಿರುವ ಪರ್ಲ್‌ ಡಿಸೈನರ್‌ ಗೌನ್ಸ್

Pearl Designer Gowns: ಪಾರ್ಟಿ ಪ್ರಿಯರನ್ನು ಇದೀಗ ಪರ್ಲ್‌ ಡಿಸೈನರ್‌ ಗೌನ್‌ಗಳು ಸವಾರಿ ಮಾಡುತ್ತಿವೆ. ಒಟ್ಟಾರೆ ಇವನಿಂಗ್‌ ಹಾಗೂ ನೈಟ್‌ ಪಾರ್ಟಿಗಳಲ್ಲಿ ಹಂಗಾಮ ಎಬ್ಬಿಸಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಗೌನ್‌ಗಳ ವಿಶೇಷತೆಯೇನು? ಸ್ಟೈಲಿಂಗ್‌ ಹೇಗೆ? ಇಲ್ಲಿದೆ ಡಿಟೇಲ್ಸ್.

ಪಾರ್ಟಿ ಪ್ರಿಯರನ್ನು ಸವಾರಿ ಮಾಡುತ್ತಿರುವ ಪರ್ಲ್‌ ಡಿಸೈನರ್‌ ಗೌನ್ಸ್

ಚಿತ್ರಗಳು: ಗೌಹರ್‌ ಖಾನ್‌, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪರ್ಲ್‌ ಡಿಸೈನರ್‌ ಗೌನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಈ ಗೌನ್‌ಗಳು (Gown Fashion 2026) ನೈಟ್‌ ಪಾರ್ಟಿ ಪ್ರಿಯರನ್ನು ಸವಾರಿ ಮಾಡತೊಡಗಿವೆ. ಪರ್ಲ್‌ ಪ್ರಿಯರನ್ನು ಬರಸೆಳೆದಿವೆ. ಒಟ್ಟಾರೆ ಇವನಿಂಗ್‌ ಹಾಗೂ ನೈಟ್‌ ಪಾರ್ಟಿಗಳಲ್ಲಿ ಹಂಗಾಮ ಎಬ್ಬಿಸಿವೆ.

ಗೌಹರ್‌ ಖಾನ್‌ ಧರಿಸಿದ್ಧ ಪರ್ಲ್‌ ಡಿಸೈನರ್‌ ಗೌನ್‌

ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಗೌಹರ್‌ ಖಾನ್‌ ಧರಿಸಿದ್ಧ ಇವನಿಂಗ್‌ ಪಾರ್ಟಿವೇರ್‌ ಕೆಟಗರಿಯಲ್ಲಿ ಸೇರುವ ಆಫ್‌ ಶೋಲ್ಡರ್‌ ಡಿಸೈನರ್‌ ಪರ್ಲ್‌ ಎಂಬಾಲಿಶ್ಡ್‌ ಗೌನ್‌ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾಷನ್‌ ಪ್ರಿಯರನ್ನು ಸೆಳೆದಿತ್ತು. ಗೌಹರ್‌ ಅವರಿಗೆ ಈ ಪಾಸ್ಟೆಲ್‌ ಪಿಂಕ್‌ ಶೇಡ್‌ನ ಪರ್ಲ್‌ ಗೌನ್‌ ಕ್ಲಾಸಿ ಲುಕ್‌ ನೀಡಿತ್ತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

New Fashion

ಪರ್ಲ್‌ ಡಿಸೈನರ್‌ ಗೌನ್‌ಗಳ ವಿಶೇಷತೆ

ಫೇಕ್‌ ಪರ್ಲ್‌ಗಳನ್ನು ಹೊಂದಿರುವ ಈ ಡಿಸೈನರ್‌ ಗೌನ್‌ಗಳು ಅಲ್ಲಲ್ಲಿ ರೈನೋಸ್ಟೋನ್‌ಗಳನ್ನು ವಿನ್ಯಾಸದಲ್ಲಿ ಜತೆಯಾಗಿಸಿಕೊಂಡಿವೆ. ಎಂತಹವರಿಗೂ ಕ್ಲಾಸಿ ಲುಕ್‌ ನೀಡುವ ಇವು ಸೆಲೆಬ್ರೆಟಿ ಲುಕ್‌ ನೀಡುತ್ತವೆ ಎಂಬ ಕಾರಣದಿಂದಾಗಿ ಈ ಶೈಲಿಯ ಗೌನನ್ನು ಜೆನ್‌ ಜಿ ಯುವತಿಯರು ಕೂಡ ಧರಿಸತೊಡಗಿದ್ದಾರೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ರಾಶಿ.

Gown Fashion

ಆನ್‌ಲೈನ್‌ ಶಾಪ್‌ಗಳಲ್ಲಿ ಬಗೆಬಗೆಯ ಪರ್ಲ್‌ ಡಿಸೈನರ್‌ ಗೌನ್‌

ಈಗಾಗಲೇ ಆನ್‌ಲೈನ್‌ ಶಾಪ್‌ಗಳಲ್ಲಿ ನಾನಾ ಬಗೆಯ ಪರ್ಲ್‌ ಡಿಸೈನರ್‌ ಗೌನ್‌ಗಳು ಟ್ರೆಂಡಿಯಾಗಿವೆ. ಕೆಲವು ಆಫ್‌ ಶೋಲ್ಡರ್‌ನಲ್ಲಿದ್ದರೇ ಇನ್ನು ಕೆಲವು ಕೇಪ್‌ ಡಿಸೈನ್‌, ಬೋಟ್‌ ನೆಕ್‌ ಹೀಗೆ ನಾನಾ ಬಗೆಯಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Pearl designer gown

ಪರ್ಲ್‌ ಡಿಸೈನರ್‌ ಗೌನ್‌ ಪ್ರಿಯರೇ ಗಮನಿಸಿ

  • ಬಾಡಿ ಮಾಸ್‌ ಇಂಡೆಕ್ಸ್‌ಗೆ ಹೊಂದುವಂತವನ್ನು ಖರೀದಿಸಿ.
  • ಪಾಸ್ಟೆಲ್‌ ಶೇಡ್‌ನವು ಟ್ರೆಂಡಿಯಾಗಿವೆ.
  • ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.‌

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)