ಮಿಸ್ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್ ಡಿಜಿಟಲ್ ಪಾರ್ಟ್‌ನರ್
Ms Universe Karnataka 2026: ಉದ್ಯಾನನಗರಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಏಪ್ರಿಲ್ 3ರಂದು ನಡೆಯಲಿರುವ ಮಿಸ್ ಯೂನಿವರ್ಸ್ ಕರ್ನಾಟಕದ ರಿಜಿನಲ್ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್ ಡಿಜಿಟಲ್ ಪಾರ್ಟ್‌ನರ್ ಆಗಿ ಕೈ ಜೋಡಿಸಿದೆ.
ಚಿತ್ರಗಳು: ಮಿಸ್ ಯೂನಿವರ್ಸ್ ಕರ್ನಾಟಕ 2026 -
- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್ ಯೂನಿವರ್ಸ್ ಕರ್ನಾಟಕದ (Ms Universe Karnataka 2026) ಪ್ರಾದೇಶಿಕ ವ್ಯಾಪ್ತಿಯ ಸೌಂದರ್ಯ ಸ್ಪರ್ಧೆಯು ಏಪ್ರಿಲ್ 3ರಂದು ಉದ್ಯಾನನಗರಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದ್ದು, ಈ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್ ಡಿಜಿಟಲ್ ಪಾರ್ಟ್‌ನರ್ ಆಗಿ ಕೈ ಜೋಡಿಸಿದೆ.
ರಿಜಿನಲ್ ಡೈರೆಕ್ಟರ್ ನಂದಿನಿ ನಾಗರಾಜ್ ಮಾತು
ಈ ಹಿಂದೆ ಮಿಸ್ ಯೂನಿವರ್ಸ್ ಕರ್ನಾಟಕದ ಸ್ಪರ್ಧಾಳುಗಳು ಬೇರೇ ಸಿಟಿಗೆ ಹೋಗಬೇಕಾಗಿತ್ತು. ಕಳೆದ ಬಾರಿಯಿಂದ ನಾವು ಇಲ್ಲಿಯೇ ಆಯೋಜನೆ ಮಾಡುತ್ತಿದ್ದೇವೆ. ಇದು ಇಲ್ಲಿನ ಭಾವಿ ಮಾಡೆಲ್‌ಗಳಿಗೆ ಸ್ಪರ್ಧಿಸಲು ಉಪಯೋಗವಾಗಿದೆ. ಇದಕ್ಕೆ ಪೂರಕ ಎಂಬಂತೆ ನಾವು ಕೂಡ ಅವಕಾಶ ಕಲ್ಪಿಸುತ್ತಿದ್ದೇವೆ ಎಂದು ಪೇಜೆಂಟ್‌ನ ರಿಜಿನಲ್ ಡೈರೆಕ್ಟರ್ ನಂದಿನಿ ನಾಗರಾಜ್ ವಿಶ್ವವಾಣಿ ಟಿವಿ ಸ್ಪೆಷಲ್‌ಗೆ ತಿಳಿಸಿದ್ದಾರೆ.
ಬ್ಯೂಟಿ ಪೇಜೆಂಟ್ ತಯಾರಿ ಹೇಗಿದೆ?
ಈಗಾಗಲೇ ಮೊದಲನೇ ಸುತ್ತಿನ ಆಡಿಷನ್ ಎಲ್ಲವೂ ನಡೆದಿದ್ದು, ಗ್ರೂಮಿಂಗ್, ವಾಕಿಂಗ್ ಹೀಗೆ ಫೈನಲಿಸ್ಟ್ ಸ್ಪರ್ಧಿಗಳು ತಯಾರಿ ನಡೆಸಿದ್ದಾರೆ. ಶುಕ್ರವಾರ ನಡೆಯುವ ಫಿನಾಲೆಯಲ್ಲಿ ಪಾಲ್ಗೊಂಡು, ಆಗಮಿಸುವ ಸೆಲೆಬ್ರೆಟಿಗಳ ಹಾಗೂ ಜ್ಯೂರಿ ಪ್ಯಾನೆಲ್‌ಗಳ ಪ್ರಶ್ನೆಗಳಿಗೆ ಉತ್ತರಿಸಲು ಸಜ್ಜಾಗಿದ್ದಾರೆ.
ಸತತವಾಗಿ ಎರಡನೇ ಬಾರಿ ಸಹಯೋಗ
ಅಂದಹಾಗೆ, ಮಿಸ್ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ನ ಪ್ರಾದೇಶಿಕ ಸೌಂದರ್ಯ ಸ್ಪರ್ಧೆ ಎರಡನೇ ಬಾರಿ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕಳೆದ ಬಾರಿಯೂ ಕೂಡ ವಿಶ್ವವಾಣಿ ಟಿವಿ ಸ್ಪೆಷಲ್ ಡಿಜಿಟಲ್ ಪಾರ್ಟ್‌ನರ್ ಆಗಿ ಕೈ ಜೋಡಿಸಿತ್ತು. ಈ ಬಾರಿಯೂ ಕೂಡ ಮುಂದುವರಿಸಿದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)