Season Fashion 2026: ನಯಾ ಲುಕ್ನಲ್ಲಿ ಮರಳಿದ ಫ್ಲೋರಲ್ ಮಿಡಿ ಡ್ರೆಸ್
Floral Midi Dresses: ಹಾಲಿಡೇ ಫ್ಯಾಷನ್ ಹಾಗೂ ಔಟಿಂಗ್ ಫ್ಯಾಷನ್ನಲ್ಲಿ ಟ್ರೆಂಡಿಯಾಗಿರುವ ಫ್ಲೋರಲ್ ಮಿಡಿ ಡ್ರೆಸ್ಗಳು ಮರಳಿವೆ. ಅವುಗಳ ಆಯ್ಕೆ ಹೇಗೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಪೂಜಿತಾ ಪೊನ್ನಡ, ನಟಿ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಾಲಿಡೇ ಸೀಸನ್ನಲ್ಲಿ ನಯಾ ಲುಕ್ನ ಫ್ಲೋರಲ್ ಮಿಡಿ ಡ್ರೆಸ್ಗಳು, ಮರಳಿದ್ದು, ಟ್ರೆಂಡಿಯಾಗಿವೆ. ಹೌದು, ಈ ಸೀಸನ್ನ ಹಾಲಿಡೇ ಫ್ಯಾಷನ್ ಹಾಗೂ ಔಟಿಂಗ್ ಫ್ಯಾಷನ್ನಲ್ಲಿ (Season Fashion 2026) ಸಾಕಷ್ಟು ಟ್ರೆಂಡಿಯಾಗಿರುವ ನಾನಾ ಬಗೆಯ ಫ್ಲೋರಲ್ ಮಿಡಿ ಡ್ರೆಸ್ಗಳು, ಜೆನ್ ಜಿ ಯುವತಿಯರನ್ನು ಮಾತ್ರವಲ್ಲ, ವಿವಾಹಿತ ಮಹಿಳೆಯರನ್ನು ಸವಾರಿ ಮಾಡತೊಡಗಿವೆ.
ಟ್ರೆಂಡಿಯಾಗಿರುವ ಫ್ಲೋರಲ್ ಮಿಡಿ ಡ್ರೆಸ್ಗಳು
ವೈಬ್ರೆಂಟ್ ರೆಡ್, ಬ್ಲ್ಯೂ, ಗ್ರೀನ್, ನಿಯಾನ್ ಶೇಡ್ಸ್ನ ಫ್ಲೋರಲ್ ಪ್ರಿಂಟೆಡ್ ಮಿಡಿ ಡ್ರೆಸ್ಗಳು ಈ ಸೀಸನ್ನಲ್ಲಿ ಲಗ್ಗೆ ಇಟ್ಟಿದ್ದು ಅವುಗಳಲ್ಲಿ ಎ ಲೈನ್ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಸಿಂಗಲ್ ಪೀಸ್ನಲ್ಲಿ ದೊರೆಯುವ ಈ ಫ್ಲೋರಲ್ ಮಿಡಿ ಡ್ರೆಸ್ಗಳು ಲೆಕ್ಕವಿಲ್ಲದಷ್ಟು ಬಗೆಯ ವಿನ್ಯಾಸದಲ್ಲಿ ದೊರಕುತ್ತಿವೆ. ಹಾಗಾಗಿ ಇವುಗಳ ಪ್ರೇಮಿಗಳು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಮಾರಾಟಗಾರರು.
ಫ್ಲೋರಲ್ ಮಿಡಿ ಡ್ರೆಸ್ಗಳ ಸ್ಟೈಲಿಂಗ್ ಹೀಗಿರಲಿ
ಇನ್ನು, ಕೆಲವು ಮಾನಿನಿಯರು ಈ ಫ್ಲೋರಲ್ ಮಿಡಿ ಡ್ರೆಸ್ಗಳ ಜತೆಗೆ ಪ್ಯಾಂಟ್ ಧರಿಸುತ್ತಾರೆ. ಆದರೆ, ಇದು ನಾಟ್ ಓಕೆ. ಧರಿಸಲೇಬೇಕಿದ್ದಲ್ಲಿಆದಷ್ಟೂ ಕೇಪ್ರೀಸ್ ಪ್ಯಾಂಟ್ ಅಥವಾ ಶಾರ್ಟ್ ಜೀನ್ಸ್ ಇಲ್ಲವೇ ಶಾರ್ಟ್ಸ್ ಲೆಗ್ಗಿಂಗ್ಸ್ ಧರಿಸುವುದು ಉತ್ತಮ. ಇಲ್ಲವಾದಲ್ಲಿ ನೋಡಲು ಚೂಡಿದಾರ್ ಅಥವಾ ಸೆಲ್ವಾರ್ ಕಮೀಜ್ ಲುಕ್ ನೀಡಬಹುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ಗಳು.
ಫ್ಲೋರಲ್ ಮಿಡಿ ಡ್ರೆಸ್ಗಳ ಪ್ರಿಯರಿಗೆ ಇಲ್ಲಿವೆ 5 ಟಿಪ್ಸ್
- ಆದಷ್ಟೂ ಟ್ರೆಂಡಿಯಾಗಿರುವ ವಿನ್ಯಾಸದ ಫ್ಲೋರಲ್ ಮಿಡಿ ಡ್ರೆಸ್ ಆಯ್ಕೆ ಮಾಡಿ.
- ಮಿನಿಮಲ್ ಆಕ್ಸೆಸರೀಸ್ ಧರಿಸಿ.
- ಆದಷ್ಟೂ ಮೇಕೋವರ್ ಸಿಂಪಲ್ ಆಗಿರಲಿ.
- ಇಂಡೋ-ವೆಸ್ಟರ್ನ್ ಲುಕ್ ಎಲ್ಲರಿಗೂ ಮ್ಯಾಚ್ ಆಗುವುದು.
- ಸ್ಟೇಟ್ಮೆಂಟ್ ಜ್ಯುವೆಲರಿ ಧರಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)