ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baba Vanga Prediction: ಮುಂದಿನ ಆರು ತಿಂಗಳಲ್ಲಿ ಕೋಟ್ಯಧಿಪತಿ ಆಗುವ ಯೋಗವಿರುವವರು...: ಬಾಬಾ ವಂಗಾ ಭವಿಷ್ಯ

ರಷ್ಯಾದಲ್ಲಿ ಭೂಕಂಪ, ಜಪಾನ್‌ನಲ್ಲಿ ಸುನಾಮಿ...ಇವು ಇತೀಚೆಗೆ ನಡೆದ ಘಟನೆ. ಆದರೆ ಇದನ್ನು ಊಹಿಸಿ ಬಾಬಾ ವಂಗಾ 90ರ ದಶಕದಲ್ಲೇ ಹೇಳಿದ್ದರು. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಬಹುತೇಕ ನಿಜವಾಗುತ್ತಿರುವುದರಿಂದ ಎಲ್ಲರೂ ಅವರು ಏನು ಹೇಳಿದ್ದಾರೆ ಎಂದು ಕೇಳಲು ಕಾತುರರಾಗಿದ್ದಾರೆ. ಇದೀಗ ಅವರು ಹೇಳಿದ್ದಾರೆ ಎನ್ನಲಾದ ಮುಂದಿನ ಆರು ತಿಂಗಳ ಭವಿಷ್ಯವಾಣಿ ಇಂತಿದೆ.

ಆರು ತಿಂಗಳಲ್ಲಿ ಕೋಟ್ಯಧಿಪತಿಗಳಾಗುವಿರಿ: ಬಾಬಾ ವಂಗಾ

ಬೆಂಗಳೂರು: ಹಲವು ಭಯಾನಕ ಭವಿಷ್ಯವಾಣಿಗಳನ್ನು (Prediction) ಬಹಳ ಹಿಂದೆಯೇ ಹೇಳಿ ಜಗತ್ತನ್ನು ಆಕರ್ಷಿಸಿರುವ ಕುರುಡರಾದ ಬಲ್ಗೇರಿಯನ್‌ನ ಬಾಬಾ ವಂಗಾ (Baba Vanga Prediction) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ಕೆಲವು ರಾಶಿಯವರು ಮುಂದಿನ ಆರು ತಿಂಗಳಲ್ಲಿ ಶ್ರೀಮಂತರಾಗುತ್ತಾರೆ ಎಂದು ಹೇಳಿದ್ದು, ಸಾಕಷ್ಟು ಮಂದಿಯ ಗಮನ ಸೆಳೆದಿದೆ. ವಂಗಾ ಅವರ ಭವಿಷ್ಯವಾಣಿಯಂತೆ ಮೇಷ, ವೃಷಭ, ಮಿಥುನ ಮತ್ತು ಸಿಂಹ ರಾಶಿಯವರು (Aries, Taurus, Gemini and Leo) ಮುಂದಿನ ಆರು ತಿಂಗಳಲ್ಲಿ ಆರ್ಥಿಕ ಲಾಭವನ್ನು ಕಾಣುತ್ತಾರೆ. ಇದು ಈಗ ಜ್ಯೋತಿಷ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುವವರಲ್ಲಿ ಉತ್ಸಾಹ ಮೂಡಿಸಿದೆ.

ಈ ಹಿಂದೆ 9/11 ಭಯೋತ್ಪಾದಕ ದಾಳಿ, ರಾಜಕುಮಾರಿ ಡಯಾನಾಳ ಅಕಾಲಿಕ ಮರಣ ಮತ್ತು ಚೀನಾ ಜಾಗತಿಕ ಶಕ್ತಿಯಾಗಿ ಏರುವಂತಹ ಘಟನೆಗಳ ಮುನ್ಸೂಚನೆಯನ್ನು ನೀಡಿದ್ದ ವಂಗಾ ಮುಂದಿನ ಆರು ತಿಂಗಳಲ್ಲಿ ನಾಲ್ಕು ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವವರು ಶ್ರೀಮಂತರಾಗುತ್ತಾರೆ ಎಂದಿದ್ದಾರೆ.

ಮಂಗಳ ಗ್ರಹದ ಅಳುತ್ತಿರುವ ಮೇಷ ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಮುಂದಿನ ಆರು ತಿಂಗಳಲ್ಲಿ ಇವರು ಸ್ಮಾರ್ಟ್ ಹೂಡಿಕೆಗಳು, ಉದ್ಯಮಶೀಲತಾ ಉದ್ಯಮಗಳು ಅಥವಾ ವೃತ್ತಿ ಜೀವನದ ತಿರುವಿನಿಂದ ಅವಕಾಶಗಳನ್ನು ಪಡೆಯುತ್ತಾರೆ. ದೃಢನಿಶ್ಚಯ ಮತ್ತು ನಿರ್ಭೀತ ನಿರ್ಧಾರ ತೆಗೆದುಕೊಳ್ಳುವಿಕೆಗೆ ಹೆಸರುವಾಸಿಯಾದ ಈ ರಾಶಿಯವರು ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಾರೆ.

ಶುಕ್ರ ಆಳುತ್ತಿರುವ ವೃಷಭ ರಾಶಿಯವರ ಜೀವನದಲ್ಲಿ ಅದೃಷ್ಟ ಗೋಚರವಾಗಲಿದೆ. ರಿಯಲ್ ಎಸ್ಟೇಟ್ ಅಥವಾ ಐಷಾರಾಮಿ ಆಸ್ತಿಗಳಿಂದ ಅವರು ಮುಂದಿನ ದಿನಗಳಲ್ಲಿ ತಮ್ಮ ಸಾರ್ವಜನಿಕ ಇಮೇಜ್ ಅನ್ನು ಹೆಚ್ಚಿಸಿಕೊಳ್ಳುತ್ತಾರೆ. ಯಶಸ್ಸಿನ ಜತೆಗೆ ಮನ್ನಣೆಯನ್ನು ಪಡೆಯುತ್ತಾರೆ. ಬುಧನ ಪ್ರಭಾವ ಹೊಂದಿರುವ ಮಿಥುನ ರಾಶಿಯವರು ಸಾಮಾಜಿಕ ಸಂಪರ್ಕಗಳಿಂದ ಪ್ರಯೋಜನ ಪಡೆಯುತ್ತಾರೆ. ಲಾಭದಾಯಕ ಅವಕಾಶಗಳು ತೆರೆಯುತ್ತದೆ. ಅನಿರೀಕ್ಷಿತ ಆದಾಯ ಬಂದು ಅವರು ಕೋಟ್ಯಧಿಪತಿ ಆಗುವ ಸಂಭವವಿದೆ.

ಇದನ್ನೂ ಓದಿ: Baba Vanga Predictions 2026: ಮುಂದೆ ಮತ್ತಷ್ಟು ವಿನಾಶ; ಬಾಬಾ ವಂಗಾ ಹೇಳಿರುವ ಭವಿಷ್ಯವೇನು?

ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರಿಗೆ ಹೊಸ ಉದ್ಯಮ, ವೃತ್ತಿ ಜೀವನದ ಬದಲಾವಣೆಗಳು ಗೋಚರವಾಗಲಿದೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ಯಶಸ್ಸನ್ನು ತಂದು ಕೊಡುತ್ತದೆ.