Jaish-e-Mohammed: ಮಹಿಳೆಯರೇ ಉಗ್ರರ ಟಾರ್ಗೆಟ್! ರಹಸ್ಯ ಯುದ್ದಕ್ಕಾಗಿ ಮಹಿಳಾ ಬ್ರಿಗೇಡ್ ಆರಂಭ
Women's brigade for secret warfare: ಸಾಮಾಜಿಕ ಮಾಧ್ಯಮಗಳ ಮೂಲಕ ಮಹಿಳೆಯರನ್ನು ಗುರಿಯಾಗಿಸಿಕೊಂಡು ರಹಸ್ಯ ಯುದ್ದಕ್ಕಾಗಿ ಮಹಿಳಾ ಬ್ರಿಗೇಡ್ ರೂಪಿಸುತ್ತಿದೆ ಜೈಶ್-ಎ-ಮೊಹಮ್ಮದ್ ಎಂಬುದಾಗಿ ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ಇದರಲ್ಲಿ ಎನ್‌ಕ್ರಿಪ್ಟ್ ಮಾಡಲಾದ ಆನ್‌ಲೈನ್ ನೆಟ್‌ವರ್ಕ್‌ಗಳ ಮೂಲಕ ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಭಾರತದ ದಕ್ಷಿಣ ರಾಜ್ಯಗಳಲ್ಲಿ ಮಹಿಳೆಯರನ್ನು ಗುರಿ ಮಾಡುವ ಯೋಜನೆ ಇದೆ ಎನ್ನಲಾಗಿದೆ.

-

ನವದೆಹಲಿ: ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (Jaish-e-Mohammed) ಇದೀಗ ಹೊಸ ಯುದ್ಧ ತಂತ್ರವೊಂದನ್ನು (Women's Brigade) ರೂಪಿಸುತ್ತಿದೆ. ಇದರ ಮೂಲಕ ಅದು ಮಹಿಳೆಯರನ್ನೇ ತನ್ನ ಗುರಿಯಾಗಿ ಮಾಡಿಕೊಂಡಿದೆ. ಉನ್ನತ ಗುಪ್ತಚರ ಮೂಲಗಳ ಪ್ರಕಾರ ಇಸ್ಲಾಮಿಕ್ ಸುಧಾರಣೆ ಮತ್ತು ಧರ್ಮನಿಷ್ಠೆ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರನ್ನು ಸೇರಿಸಿಕೊಂಡು ಜೈಶ್-ಎ-ಮೊಹಮ್ಮದ್ (JeM) ಅತ್ಯಾಧುನಿಕ ಮಹಿಳಾ ಬ್ರಿಗೇಡ್ ಅನ್ನು ಸ್ಥಾಪಿಸುತ್ತಿದೆ. ಈ ಮೂಲಕ ಮಾನಸಿಕ ಯುದ್ಧ ಮತ್ತು ತಳಮಟ್ಟದ ನೇಮಕಾತಿಗಾಗಿ ಜೆಎಂ ಕಾರ್ಯ ಪ್ರಾರಂಭಿಸಿದೆ ಎನ್ನಲಾಗುತ್ತಿದೆ.
ಈ ಕುರಿತು ಜೈಶ್ ಸುತ್ತೋಲೆಯನ್ನು ಹೊರಡಿಸಿದ್ದು, ಇದಕ್ಕಾಗಿ ಮಕ್ಕಾ, ಮದೀನಾದ ಪವಿತ್ರ ಸ್ಥಳಗಳ ಚಿತ್ರ, ಅಲ್ಲಾಹ್ ಹೆಸರು ಮತ್ತು ಕುರಾನ್ ಪದ್ಯಗಳನ್ನು ಉಲ್ಲೇಖಿಸಿ ಮಹಿಳೆಯರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಭಕ್ತಿ ಹೆಸರಲ್ಲಿ ವಿದ್ಯಾವಂತ, ನಗರ ಭಾಗದ ಮಹಿಳೆಯರನ್ನು ಆಕರ್ಷಿಸಲು ಮುಂದಾಗಿದೆ. ಇದರಲ್ಲಿ ಮೊದಲು ಆಧ್ಯಾತ್ಮಿಕ ಬೋಧನೆಯನ್ನು ನೀಡಿ ಬಳಿಕ ರಾಜಕೀಯ ಮತ್ತು ಜಿಹಾದಿ ಸಿದ್ಧಾಂತಕ್ಕೆ ಅವರನ್ನು ಬಳಸುವ ಉದ್ದೇಶವನ್ನು ಹೊಂದಿದೆ.
ಜೈಶ್-ಎ-ಮೊಹಮ್ಮದ್ ಇದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದೆ. ಮಹಿಳಾ ಗುಂಪುಗಳನ್ನು ನೇಮಕಾತಿದಾರರು, ಸಂದೇಶ ಕಳುಹಿಸಲು ಕೊರಿಯರ್, ಪ್ರಮುಖ ನಿಧಿಸಂಗ್ರಹಕಾರರಾಗಿ ಬಳಸಲು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಪುರುಷ ಕಾರ್ಯಕರ್ತರನ್ನು ದೂರವಿಡಲಾಗುವುದು. ಇದು 2024ರ ಜೆಇಎಂನಹೊಸ ತಂತ್ರವಾದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಮಹಿಳಾ ಸಂಪರ್ಕಕ್ಕೆ ಸಾಮಾಜಿಕ ಮಾಧ್ಯಮ ಮತ್ತು ಮದರಸಾ ಸರ್ಕ್ಯೂಟ್‌ಗಳನ್ನುರಹಸ್ಯ ಕಾರ್ಯಾಚರಣೆ ಭಾಗವಾಗಿ ಮಾಡುವ ಯೋಜನೆಯಂತೆ ಇದೆ.
ಇದನ್ನೂ ಓದಿ: Murder Case: ಮದುವೆಯಾದ ನಾಲ್ಕೇ ತಿಂಗಳಲ್ಲಿ ಪತ್ನಿಯ ಕೊಂದು ಮಂಚದೊಳಗಿಟ್ಟು ಪತಿ ಪರಾರಿ
ಇದರ ಕರಪತ್ರದಲ್ಲಿ ಮಹಿಳಾ ಜಿಹಾದ್ ನಿರೂಪಣೆಗಳನ್ನು ಹೊಂದಿದ್ದು, ಎನ್‌ಜಿಒಗಳು ಮತ್ತು ಮದರಸಾ ನೆಟ್‌ವರ್ಕ್‌ಗಳ ಮೂಲಕ ಇದನ್ನು ರಹಸ್ಯವಾಗಿ ರವಾನಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿವೆ.
ಈ ಕರಪತ್ರದಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆಗಳಲ್ಲಿ ಬಳಸಿರುವ ಮಹಿಳಾ ಜಿಹಾದ್ ನಿರೂಪಣೆಗಳೂ ಇವೆ. ಧಾರ್ಮಿಕ ಸಮಾರಂಭಗಳ ಹವಾಲಾ ಅಥವಾ ದೇಣಿಗೆ ಆಧಾರಿತ ನಿಧಿ ಸರಪಳಿಗಳಿಗೆ ಮುಖ್ಯ ಪಾತ್ರವಾಗಿ ಇದು ಕಾರ್ಯನಿರ್ವಹಿಸಲಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಇದನ್ನು ಇಸ್ಲಾ-ಎ-ಉಮ್ಮಾ ಅಂದರೆ ಸಮುದಾಯದ ಸುಧಾರಣೆ ಬ್ಯಾನರ್ ಅಡಿಯಲ್ಲಿ ಧಾರ್ಮಿಕ ಎನ್‌ಜಿಒಗಳು ಮತ್ತು ಮದರಸಾ ನೆಟ್‌ವರ್ಕ್‌ಗಳ ಮೂಲಕ ನಿರ್ವಹಿಸಲಾಗುತ್ತದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Zakir Naik: ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಮಲೇಷ್ಯಾದಿಂದ ಭಾರತಕ್ಕೆ ಹಸ್ತಾಂತರ?
ಜೈಶ್-ಎ-ಮೊಹಮ್ಮದ್ ತನ್ನ ಮಹಿಳಾ ಬ್ರಿಗೇಡ್ ನೇಮಕಾತಿಗೆ ಸಂಬಂಧಿಸಿದ ವಿಚಾರಗಳು, ಪ್ರಕ್ರಿಯೆಗಳು ಮತ್ತು ಧಾರ್ಮಿಕ ಸಂಗತಿಗಳು ಪಾಕಿಸ್ತಾನ ಮೂಲದ ಅಲ್-ಮುಹಾಜಿರತ್ ಜೆಇಎಂನ ಔಪಚಾರಿಕ ಮಹಿಳಾ ಕೇಡರ್ ಮತ್ತು ಬಹಾವಲ್ಪುರದ ಮರ್ಕಜ್ ಉಸ್ಮಾನ್-ಒ-ಅಲಿ ಯ ಶೈಲಿಯಂತೆಯೇ ಇದೆ. ಜೆಇಎಂ ತನ್ನ ಮಹಿಳಾ ಘಟಕಗಳನ್ನು ಮಾಹಿತಿ ಯುದ್ಧಕ್ಕಾಗಿ ಅಂದರೆ ಆನ್‌ಲೈನ್ ಮೂಲಕ ಉಪದೇಶ, ತಪ್ಪು ಮಾಹಿತಿ ಅಭಿಯಾನ ನಡೆಸಲು, ಅಗತ್ಯ ಹಣಕಾಸು ಸೌಲಭ್ಯ ಪಡೆಯಲು ಅವುಗಳನ್ನು ಬಳಸುವ ತಂತ್ರ ರೂಪಿಸಿದೆ.