Astronauts: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಲೈಂಗಿಕ ಕ್ರಿಯೆ ನಡೆಸಬಹುದೇ? ಇಲ್ಲಿದೆ ಮಾಹಿತಿ
Astronauts: ಗಗನಯಾತ್ರಿಗಳು ಸಮಯ ಕಳೆಯಲು ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತಾರೆಯೇ? ಈ ಸಂಗತಿ ಕುತೂಹಲಕಾರಿ ಎಂದು ತೋರುತ್ತದೆಯಾದರೂ, ಶೂನ್ಯ ಗುರುತ್ವಾಕರ್ಷಣೆಯಲ್ಲಿ ಲೈಂಗಿಕತೆ ಸುಲಭವೇನಲ್ಲ. ಅಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತೆ ಎಂದು ತಜ್ಞರು ಹೇಳುತ್ತಾರೆ. ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಜಾನ್ ಮಿಲ್ಲಿಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಪೇಸ್‌ನಲ್ಲಿ ಲೈಂಗಿಕ ಕ್ರಿಯೆಯ ಅನುಭವವನ್ನು "ಸ್ಕೈಡೈವಿಂಗ್" ಮಾಡುವಾಗ ಸಂಭೋಗಕ್ಕೆ ಪ್ರಯತ್ನಿಸುವುದಕ್ಕೆ ಹೋಲಿಸಿದ್ದಾರೆ.


ನವದೆಹಲಿ: ನಾಸಾ ಗಗನಯಾತ್ರಿಗಳಾದ(NASA astronauts) ಸುನಿತಾ ವಿಲಿಯಮ್ಸ್(Sunita Williams)ಮತ್ತು ಬುಚ್ ವಿಲ್ಮೋರ್(Butch Wilmore) ಸುದೀರ್ಘ 9ತಿಂಗಳ ಬಾಹ್ಯಾಕಾಶಯಾನದಿಂದ ಎರಡು ದಿನಗಳ ಹಿಂದೆಯಷ್ಟೇ ಮರಳಿದ್ದಾರೆ. ಅವರು ಬಾಹ್ಯಾಕಾಶ ಯಾನ ಪೂರ್ಣಗೊಳಿಸಿ ಭೂಮಿಗೆ ಮರಳಿದ ನಂತರ ಇದೀಗ ಬಾಹ್ಯಾಕಾಶದ ಕುರಿತ ಅನೇಕ ಕುತೂಹಲಕರ ಸಂಗತಿಗಳು ಒಂದೊಂದೇ ಬಯಲಾಗುತ್ತಿದೆ. ಅಂತರಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ISS) ಹೇಗಿರುತ್ತದೆ? ಅಲ್ಲಿ ಯಾವ ರೀತಿಯ ಸಂಸೋಧನೆಗಳು ನಡೆಯುತ್ತವೆ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಈ ನಡುವೆ ಮತ್ತೊಂದು ರೀತಿಯ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ(Viral News)ಹರಿದಾಡುತ್ತಿದೆ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಲೈಂಗಿಕ ಕ್ರಿಯೆ ನಡೆಸಬಹುದೇ? ಲೈಂಗಿಕ ಕ್ರಿಯೆ ನಡೆಸಿದರೆ ಏನಾಗುತ್ತೇ? ಇಲ್ಲಿದೆ ಸಂಪೂರ್ಣ ವರದಿ.
ಗಗನಯಾತ್ರಿಗಳು ಸಮಯ ಕಳೆಯಲು ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರಬಹುದೇ? ಈ ಸಂಗತಿ ಕುತೂಹಲಕಾರಿ ಎಂದು ತೋರುತ್ತದೆಯಾದರೂ, ಶೂನ್ಯ ಗುರುತ್ವಾಕರ್ಷಣೆಯಲ್ಲಿ ಲೈಂಗಿಕತೆ ಸುಲಭವೇನಲ್ಲ. ಅಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತೆ ಎಂದು ತಜ್ಞರು ಹೇಳುತ್ತಾರೆ. ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಜಾನ್ ಮಿಲ್ಲಿಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಪೇಸ್‌ನಲ್ಲಿ ಲೈಂಗಿಕ ಕ್ರಿಯೆಯ ಅನುಭವವನ್ನು "ಸ್ಕೈಡೈವಿಂಗ್" ಮಾಡುವಾಗ ಸಂಭೋಗಕ್ಕೆ ಪ್ರಯತ್ನಿಸುವುದಕ್ಕೆ ಹೋಲಿಸಿದ್ದಾರೆ. 2018 ರಲ್ಲಿ ದಿ ಸನ್ ಆನ್‌ಲೈನ್‌ಗೆ ಮಾತನಾಡುತ್ತಾ, ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಬಲದ ಕೊರತೆಯಿಂದಾಗಿ ಪ್ರತಿಯೊಂದು ತಳ್ಳುವಿಕೆಯು ನಿಮ್ಮನ್ನು ವಿರುದ್ಧ ದಿಕ್ಕುಗಳಲ್ಲಿ ತಳ್ಳುತ್ತದೆ. ಆಗ ಹಗುರವಾದ ಸ್ಪರ್ಶವು ಸಹ ಕಷ್ಟವಾಗುತ್ತದೆ.
ಇನ್ನು ವೀರ್ಯವು ಯೋನಿಯೊಳಗೆ ಹೋಗಲು ಸಾಧ್ಯವಾಗದೇ ಅದು ಗಾಳಿಯಲ್ಲೇ ತೇಳುತ್ತಿರುತ್ತವೆ. ಹೀಗಾಗಿ ಇದು ಅನೇಕ ಆರೋಗ್ಯ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಹುದು. ದೈಹಿಕ ಚಲನೆಯ ಹೊರತಾಗಿ, ಮಾನವ ದೇಹವು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಶಾರೀರಿಕ ಬದಲಾವಣೆಗಳಿಗೆ ಒಳಗಾಗುತ್ತದೆ, ಇದು ಲೈಂಗಿಕ ಚಟುವಟಿಕೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ. ಬಾಹ್ಯಾಕಾಶದಲ್ಲಿ, ರಕ್ತವು ಕೆಳಗಿನಿಂದ ಮೇಲಕ್ಕೆ ಹರಿಯುತ್ತದೆ. ಇದು ಪುರುಷರು ಮತ್ತು ಮಹಿಳೆಯರಿಗೆ ಪ್ರಚೋದನೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Sunita Williams: ಹ್ಯಾಟ್ಸ್ ಆಫ್ ಟು ಯೂ ಸುನಿತಾ- ಗಗನತಾರೆಯ ಬಗ್ಗೆ ಇಲ್ಲಿದೆ ರೋಚಕ ಸಂಗತಿ!
ಗುರುತ್ವಾಕರ್ಷಣೆ ಇಲ್ಲದಿರುವ ಕಾರಣ ಪುರುಷರಲ್ಲಿ ಕಡಿಮೆ ರಕ್ತದೊತ್ತಡ ಸೃಷ್ಟಿಯಾಗುತ್ತದೆ. ಇದರಿಂದ ನಿಮಿರುವಿಕೆಯ ತೊಂದರೆಗಳನ್ನು ಉಂಟುಮಾಡುತ್ತದೆ. ಹೆಚ್ಚುವರಿಯಾಗಿ, ಬಾಹ್ಯಾಕಾಶದಲ್ಲಿ ಪುರುಷ ಟೆಸ್ಟೋಸ್ಟೆರಾನ್ ಮಟ್ಟಗಳು ಕಡಿಮೆಯಾಗುತ್ತವೆ ಎಂದು ಸಂಶೋಧನೆ ಸೂಚಿಸುತ್ತದೆ. ಮತ್ತೊಂದು ಸಮಸ್ಯೆಯೆಂದರೆ ಶೂನ್ಯ ಗುರುತ್ವಾಕರ್ಷಣೆಯಲ್ಲಿ ದೈಹಿಕ ದ್ರವಗಳ ವರ್ತನೆ. ಗುರುತ್ವಾಕರ್ಷಣೆಯ ಸೆಳೆತವಿಲ್ಲದೆ, ಬೆವರು, ಯೋನಿ ನಯಗೊಳಿಸುವಿಕೆ ಮತ್ತು ವೀರ್ಯವು ಕ್ಯಾಬಿನ್‌ನಾದ್ಯಂತ ಮುಕ್ತವಾಗಿ ತೇಲುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇಬ್ಬರ ಸಂಭೋಗಕ್ಕೆ ಮೂರನೇ ವ್ಯಕ್ತಿಯ ಸಹಾಯ ಬೇಕಾಗುತ್ತಂತೆ!
ನಾಸಾ ತಂತ್ರಜ್ಞ ಹ್ಯಾರಿ ಸ್ಟೈನ್ ತಮ್ಮ ಲೈಫ್ ಇನ್ ಸ್ಪೇಸ್ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಶೂನ್ಯ ಗುರುತ್ವಾಕರ್ಷಣೆಯಲ್ಲಿ ಲೈಂಗಿಕ ಚಟುವಟಿಕೆಗೆ ಮೂರನೇ ವ್ಯಕ್ತಿಯ ಸಹಾಯ ಬೇಕಾಗುತ್ತದೆ. "ಮೂರನೇ ವ್ಯಕ್ತಿಯೊಬ್ಬರು ಇತರರಲ್ಲಿ ಒಬ್ಬರನ್ನು ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳುವ ಮೂಲಕ ಸಹಾಯ ಮಾಡುವುದರಿಂದ ಇದು ಸುಲಭವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.