ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕ ದಿಗ್ಬಂಧನ ಮುರಿಯಲಾಗದೆ ಮಾರ್ಗ ಬದಲಿಸಿದ ಚೀನಾ ಹಡಗು

ಇರಾನ್ ಬಂದರಿಗೆ ಹೋಗುವ ಮತ್ತು ಬರುವ ಮಾರ್ಗವನ್ನು ಸೋಮವಾರದಿಂದ ಅಮೆರಿಕ ನೌಕೆಗಳು ನಿರ್ಬಂಧಿಸಿದೆ. ಅಮೆರಿಕ ವಿಧಿಸಿರುವ ನಿರ್ಬಂಧವನ್ನು ದಾಟಲು ಚೀನಾ ಹಡಗು ಪ್ರಯತ್ನಿಸಿದ್ದು, ಇದು ಸಾಧ್ಯವಾಗದೆ ಹೊರ್ಮುಜ್ ನಲ್ಲಿ ಅದು ಮಾರ್ಗವನ್ನು ಬದಲಾಯಿಸಿದೆ. ಇರಾನಿನ ಚಾಬಹಾರ್ ಬಂದರಿನಿಂದ ಹೊರಡಲು ಯತ್ನಿಸುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳನ್ನು ಅಮೆರಿಕದ ನೌಕೆಗಳು ತಡೆದಿದೆ.

ಹೊರ್ಮುಜ್ ನಲ್ಲಿ ಮಾರ್ಗ ಬದಲಿಸಿದ ಚೀನಾ ಹಡಗು

ಸಂಗ್ರಹ ಚಿತ್ರ -

ಟೆಹರಾನ್: ಅಮೆರಿಕ ದಿಗ್ಬಂಧನವನ್ನು (US blockade) ಮುರಿಯಲು ಚೀನಾ ಹಡಗುಗಳು (China port) ಪ್ರಯತ್ನಿಸಿದ್ದು, ಇದು ಸಾಧ್ಯವಾಗದೆ ಹೊರ್ಮುಜ್ (Strait of Hormuz)ನಲ್ಲಿ ಅದು ಮಾರ್ಗವನ್ನು ಬದಲಾಯಿಸಿದೆ. ಸೋಮವಾರದಿಂದ ಅಮೆರಿಕ ಸೇನೆಯು (American army) ಹೊರ್ಮುಜ್ ನಲ್ಲಿ ದಿಗ್ಬಂಧನದ ವಿಧಿಸಿದೆ. ದಿಗ್ಬಂಧನದ ಮೊದಲ ದಿನವಾದ ಮಂಗಳವಾರ ಸುಮಾರು ಎಂಟು ಹಡಗುಗಳು ಜಲ ಮಾರ್ಗವನ್ನು ದಾಟಿದ್ದು, ಇದರಲ್ಲಿ ಚೀನಾದ ಒಡೆತನದ ಟ್ಯಾಂಕರ್ ಕೂಡ ಸೇರಿದೆ. ಓಮನ್ ಕೊಲ್ಲಿಯಲ್ಲಿರುವ ಇರಾನಿನ ಚಾಬಹಾರ್ ಬಂದರಿನಿಂದ ಮಂಗಳವಾರ ಹೊರಡಲು ಯತ್ನಿಸುತ್ತಿದ್ದ ಚೀನಾದ ಎರಡು ತೈಲ ಟ್ಯಾಂಕರ್‌ಗಳನ್ನು ಅಮೆರಿಕದ ನೌಕೆಗಳು ತಡೆದಿವೆ.

ಕಳೆದ ವಾರ ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್‌ನಲ್ಲಿ ಕದನ ವಿರಾಮ ಒಪ್ಪಂದ ಮಾತುಕತೆಗಳು ವಿಫಲವಾದ ಮೇಲೆ ಅಮೆರಿಕವು ಇರಾನ್ ಗೆ ದಿಗ್ಬಂಧನ ವಿಧಿಸಿದೆ. ಈ ಕುರಿತು ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಣೆಯನ್ನು ಮಾಡಿದರು. ಆರಂಭದ 24 ಗಂಟೆಗಳಲ್ಲಿ ಯಾವುದೇ ಹಡಗುಗಳು ಅಮೆರಿಕದ ದಿಗ್ಬಂಧನವನ್ನು ದಾಟಲಿಲ್ಲ. ಬಳಿಕ ಆರು ಹಡಗುಗಳು ಇರಾನಿನ ಬಂದರನ್ನು ಪ್ರವೇಶಿಸಲು ಯುಎಸ್ ಪಡೆಗಳ ನಿರ್ದೇಶನಗಳನ್ನು ಪಾಲಿಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. \

ಅಂಡಮಾನ್ ಸಮುದ್ರದಲ್ಲಿ ಮುಳುಗಿದ 250 ಜನರಿದ್ದ ದೋಣಿ; ಬೃಹತ್ ರಕ್ಷಣಾ ಕಾರ್ಯ ಪ್ರಾರಂಭ

ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅದು, ಅಮೆರಿಕದ ದಿಗ್ಬಂಧನದ ಮೊದಲ ದಿನವಾದ ಮಂಗಳವಾರ ಜಲಮಾರ್ಗವನ್ನು ದಾಟಿದ ಕನಿಷ್ಠ ಎಂಟು ಹಡಗುಗಳಲ್ಲಿ ಚೀನಾದ ಒಡೆತನದ ಎರಡು ಟ್ಯಾಂಕರ್ ಕೂಡ ಸೇರಿದೆ. ಇದು ಮಂಗಳವಾರ ಓಮನ್ ಕೊಲ್ಲಿಯಲ್ಲಿರುವ ಇರಾನಿನ ಚಾಬಹಾರ್ ಬಂದರಿನಿಂದ ಹೊರಡಲು ಪ್ರಯತ್ನಿಸುತ್ತಿತ್ತು. ಆದರೆ ಇದನ್ನು ಅಮೆರಿಕದ ವಿಧ್ವಂಸಕ ನೌಕೆ ತಡೆದಿದೆ ಎಂದು ಹೇಳಿದೆ.

ಇರಾನ್ ನೊಂದಿಗೆ ವ್ಯವಹಾರ ನಡೆಸಿದ ಕಾರಣಕ್ಕಾಗಿ ಚೀನಾದ ರಿಚ್ ಸ್ಟಾರಿ ಹಡಗು ಮತ್ತು ಅದರ ಮಾಲೀಕ ಶಾಂಘೈ ಕ್ಸುವಾನ್‌ರನ್ ಶಿಪ್ಪಿಂಗ್ ಕಂಪೆನಿಯನ್ನು ಅಮೆರಿಕ ನಿರ್ಬಂಧಗಳ ಅಡಿಯಲ್ಲಿ ಇರಿಸಿದ್ದು, ಈ ಕುರಿತು ಕಂಪೆನಿಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ರಿಚ್ ಸ್ಟಾರಿಯು ಮಧ್ಯಮ ಶ್ರೇಣಿಯ ಟ್ಯಾಂಕರ್ ಆಗಿದ್ದು ಇದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹಮ್ರಿಯಾ ಬಂದರಿನಲ್ಲಿ ಲೋಡ್ ಮಾಡಲಾದ ಸುಮಾರು 250,000 ಬ್ಯಾರೆಲ್ ಮೆಥನಾಲ್ ಅನ್ನು ಹೊತ್ತು ಚೀನಾ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ.

ಕಳೆದ ಫೆಬ್ರವರಿ 28ರಂದು ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ ಮೇಲೆ ಹೊರ್ಮುಜ್ ಜಲ ಮಾರ್ಗದಲ್ಲಿ ಸರಕು ಸಾಗಾಟದ ಹಡಗುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಯುದ್ಧ ಪ್ರಾರಂಭವಾಗುವ ಮೊದಲು ದಿನಕ್ಕೆ 130 ಕ್ಕೂ ಹೆಚ್ಚು ಹಡಗುಗಳು ಈ ಜಲಮಾರ್ಗದಲ್ಲಿ ಸಾಗುತ್ತಿದ್ದು ಯುದ್ಧ ಪ್ರಾರಂಭವಾದ ಮೇಲೆ ಇದು ಭಾಗಶಃ ಕಡಿಮೆಯಾಗಿದೆ.

ಅಮೆರಿಕ-ಇರಾನ್ ಯುದ್ಧ ಮುಗಿಯುವ ಹಂತಕ್ಕೆ ಬಂತಾ? ಟ್ರಂಪ್‌ ಕೊಟ್ಟ ಸುಳಿವೇನು?

ಇರಾನಿನ ತೈಲವನ್ನು ಸಾಗಿಸುವ ಮತ್ತೊಂದು ಯುಎಸ್ ಅನುಮೋದಿತ ವೆರಿ ಲಾರ್ಜ್ ಕ್ರೂಡ್ ಕ್ಯಾರಿಯರ್ ಅಲಿಸಿಯಾ ಬುಧವಾರ ಜಲಸಂಧಿಯ ಮೂಲಕ ಕೊಲ್ಲಿಯನ್ನು ಪ್ರವೇಶಿಸುತ್ತಿದ್ದು, ಇದು ಸುಮಾರು 2 ಮಿಲಿಯನ್ ಬ್ಯಾರೆಲ್ ತೈಲವನ್ನು ಸಾಗಿಸುವ ಸಾಮರ್ಥ್ಯವಿರುವ ಖಾಲಿ ಟ್ಯಾಂಕರ್ ಅನ್ನು ಲೋಡ್ ಮಾಡಲು ಇರಾಕ್‌ಗೆ ತೆರಳುತ್ತಿದೆ. ಯುಎಸ್-ಇರಾನ್ ಕದನ ವಿರಾಮ ಮಾತುಕತೆ ನಡೆಯುತ್ತಿದ್ದ ವೇಳೆ ಭಾನುವಾರ ಕೊಲ್ಲಿಯನ್ನು ಪ್ರವೇಶಿಸಲು ಪ್ರಯತ್ನಿಸಿದ ಹಲವಾರು ಹಡಗುಗಳಲ್ಲಿ ಟ್ಯಾಂಕರ್ ಗಳು ಕೂಡ ಸೇರಿವೆ. ಇವುಗಳು ಇನ್ನು ಕೂಡ ಜಲ ಮಾರ್ಗದಲ್ಲೇ ಉಳಿದಿವೆ ಎನ್ನಲಾಗಿದೆ.