ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Missile Attack: ಇಸ್ರೇಲ್‌ ವಿಮಾನ ನಿಲ್ದಾಣದ ಮೇಲೆ ಕಿಪ್ಷಣಿ ದಾಳಿ; ದೆಹಲಿ-ಟೆಲ್ ಅವಿವ್ ಏರ್ ಇಂಡಿಯಾ ವಿಮಾನ ಅಬುಧಾಬಿಯಲ್ಲಿ ಲ್ಯಾಂಡ್‌

ಇಸ್ರೇಲ್‌ನ ಪ್ರಮುಖ ಅಂತರರಾಷ್ಟ್ರೀಯ ದ್ವಾರವಾದ ಬೆನ್ ಗುರಿಯನ್ ವಿಮಾನ ನಿಲ್ದಾಣದ ಬಳಿ ಕ್ಷಿಪಣಿ ದಾಳಿ ನಡೆದಿದೆ. ದಾಳಿಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾಳಿ ಬಳಿಕ ದೆಹಲಿಯಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಭಾನುವಾರ ಅಬುಧಾಬಿಗೆ ತಿರುಗಿಸಲಾಗಿದೆ.

ಇಸ್ರೇಲ್‌ ವಿಮಾನ ನಿಲ್ದಾಣದ ಮೇಲೆ ಕಿಪ್ಷಣಿ ದಾಳಿ

Profile Vishakha Bhat May 4, 2025 5:27 PM

ಟೆಲ್‌ ಅವಿವಾ: ಇಸ್ರೇಲ್‌ನ ಪ್ರಮುಖ ಅಂತರರಾಷ್ಟ್ರೀಯ ದ್ವಾರವಾದ ಬೆನ್ ಗುರಿಯನ್ ವಿಮಾನ ನಿಲ್ದಾಣದ ಬಳಿ ಕ್ಷಿಪಣಿ ದಾಳಿ (Missile Attack) ನಡೆದಿದೆ. ದಾಳಿಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾಳಿ ಬಳಿಕ ದೆಹಲಿಯಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಭಾನುವಾರ ಅಬುಧಾಬಿಗೆ ತಿರುಗಿಸಲಾಗಿದೆ. ಏರ್ ಇಂಡಿಯಾ ತನ್ನ ಗ್ರಾಹಕರು ಮತ್ತು ಸಿಬ್ಬಂದಿಗಳ ಸುರಕ್ಷತೆಗೆ ಆದ್ಯತೆ ನೀಡುವ ಸಲುವಾಗಿ ಮೇ 6 ರವರೆಗೆ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೆಮನ್‌ನ ಹೌತಿ ಬಂಡುಕೋರರು ಇಸ್ರೇಲ್ ಕಡೆಗೆ ಹಾರಿಸಿದ ಕ್ಷಿಪಣಿ ಬೆನ್ ಗುರಿಯನ್ ವಿಮಾನ ನಿಲ್ದಾಣದ ಬಳಿ ಅಪ್ಪಳಿಸಿತು, ಇದರಿಂದಾಗಿ ಆಕಾಶದೆತ್ತರಕ್ಕೆ ಹೊಗೆಯ ರಾಶಿ ಹಬ್ಬಿದೆ. ವಿಮಾನದ ಮಾರ್ಗ ಬದಲಾವಣೆ ಕುರಿತು ಏರ್‌ ಇಂಡಿಯಾ ಅಧಿಕೃತ ಮಾಹಿಯನ್ನು ನೀಡಿದ್ದು, "ಇಂದು ಬೆಳಿಗ್ಗೆ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ನಂತರ ದೆಹಲಿಯಿಂದ ಟೆಲ್ ಅವೀವ್‌ಗೆ ಮೇ 4, 2025 ರಂದು ಹಾರುತ್ತಿದ್ದ ಏರ್ ಇಂಡಿಯಾ ವಿಮಾನ AI139 ಅನ್ನು ಅಬುಧಾಬಿಗೆ ತಿರುಗಿಸಲಾಯಿತು. ವಿಮಾನವು ಸಾಮಾನ್ಯವಾಗಿ ಅಬುಧಾಬಿಯಲ್ಲಿ ಇಳಿದಿದೆ ಮತ್ತು ಶೀಘ್ರದಲ್ಲೇ ದೆಹಲಿಗೆ ಹಿಂತಿರುಗಲಿದೆ. ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ನಮ್ಮ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೇ 6, 2025 ರವರೆಗೆ ಸ್ಥಗಿತಗೊಳಿಸಲಾಗುತ್ತದೆ" ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಬೋಯಿಂಗ್ 787 ವಿಮಾನವು ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ಇಳಿಯಲು ನಿಗದಿಪಡಿಸಿದ ಒಂದು ಗಂಟೆಗೂ ಮುನ್ನ ಈ ಘಟನೆ ಸಂಭವಿಸಿದೆ. ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ, ಭಾನುವಾರ ನಿಗದಿಯಾಗಿದ್ದ ಟೆಲ್ ಅವಿವ್‌ನಿಂದ ದೆಹಲಿಗೆ ಹಿಂದಿರುಗುವ ಏರ್ ಇಂಡಿಯಾ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Indian Airlines: ವಾಯುಮಾರ್ಗ ಮುಚ್ಚಿದ ಪಾಕ್‌; ಏರ್‌ಇಂಡಿಯಾ, ಇಂಡಿಗೋ ವಿಮಾನಗಳು ಡೈವರ್ಟ್‌

ವರದಿಗಳ ಪ್ರಕಾರ ಕ್ಷಿಪಣಿ ದಾಳಿಯಿಂದ ನಾಲ್ವರು ಗಾಯಗೊಂಡಿದ್ದಾರೆ. ದಾಳಿ ಬಳಿಕ ಟೆಲ್ ಅವಿವ್ ವಿಮಾನ ನಿಲ್ದಾಣವನ್ನು ಸಂಚಾರವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಯಿತು. ಟರ್ಮಿನಲ್ 3 ಪಾರ್ಕಿಂಗ್ ಸ್ಥಳದ ಬಳಿಯ ರಸ್ತೆಯ ಪಕ್ಕದಲ್ಲಿ ಕ್ಷಿಪಣಿ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ನಂತರ ಹೇಳಿಕೆ ನೀಡಿದ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, "ನಮಗೆ ಹಾನಿ ಮಾಡುವವರಿಗೆ ಏಳು ಪಟ್ಟು ಹಾನಿಯಾಗುತ್ತದೆ" ಎಂದು ಹೇಳಿದರು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಭದ್ರತಾ ಸಚಿವರು ಮತ್ತು ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತಿಕ್ರಿಯೆಯನ್ನು ಚರ್ಚಿಸಲಿದ್ದಾರೆ.