ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ಹಿಂದೂ ಧಾರ್ಮಿಕ ನಿಯೋಗದ ಭೇಟಿ ವೇಳೆ ಐಫೆಲ್‌ ಟವರ್‌ನಲ್ಲಿ ಮಹಿಳಾ ಸಿಬ್ಬಂದಿಗೆ ನಿರ್ಬಂಧ; ಭುಗಿಲೆದ್ದ ಭಾರೀ ಆಕ್ರೋಶ

Eiffel Tower: ಹಿಂದೂ ಧಾರ್ಮಿಕ ನಿಯೊಗದ ಬೇಟಿಯ ಸಮಯದಲ್ಲಿ ಮಹಿಳಾ ಉದ್ಯೋಗಿಗಳನ್ನು ಅವರಣದಿಂದ ದೂರವಿಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಪ್ಯಾರಿಸ್‌ನ ಪ್ರಸಿದ್ಧ ಐಫೆಲ್‌ ಟವರ್‌ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು. ಈ ಕಾರಣ ಸೋಮವಾರ ಐಫೆಲ್‌ ಟವರ್‌ ಬಂದ್‌ ಆಗಿತ್ತು. ಫ್ರಾನ್ಸ್‌ ಸರ್ಕಾರ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದು ಮಹಿಳಾ ಸಮಾನತೆಗೆ ಧಕ್ಕೆ ಬಂದಿದೆ ಎಂದು ತಿಳಿಸಿದೆ. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಐಫೆಲ್‌ ಟವರ್‌ನಲ್ಲಿ ಮಹಿಳಾ ಸಿಬ್ಬಂದಿಗೆ ನಿರ್ಬಂಧ! ಏನಿದು ಘಟನೆ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Sep 8, 2026 3:59 PM

ಪ್ಯಾರಿಸ್‌: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿರುವ ಜಗತ್ಪ್ರಸಿದ್ಧ ಐಫೆಲ್‌ ಟವರ್‌ಗೆ ( Eiffel Tower) ಭಾರತೀಯ ಹಿಂದೂ (Hindu) ಧಾರ್ಮಿಕ ನಿಯೋಗವೊಂದು ಭೇಟಿ ನೀಡಿದ್ದ ವೇಳೆ, ಮಹಿಳಾ ಸಿಬ್ಬಂದಿಗಳನ್ನು ಕೆಲಸದ ಸ್ಥಳದಿಂದ ದೂರವಿಡುವಂತೆ ಸೂಚಿಸಲಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿದ ಮಹಿಳಾ ನೌಕರರು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಕಡೆಗಣಿಸಿದಕ್ಕೆ ಫ್ರಾನ್ಸ್‌ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಂಗ ತಾರತಮ್ಯವೆಂದು ಖಂಡಿಸಿರುವ ನೌಕರರು ದಿಢೀರ್‌ ಮುಷ್ಕರ ನಡೆಸಿ ಪ್ರವಾಸಿಗರಿಗೆ ಐಪೆಲ್‌ ಟವರ್‌ ಪ್ರವೇಶಿಸದಂತೆ ಸಂಪೂರ್ಣವಾಗಿ ಬಂದ್‌ ಮಾಡಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಐಫೆಲ್‌ ಟವರ್‌ ಅನ್ನು ಸೋಮವಾರ ಬಂದ್‌ ಮಾಡಲಾಗಿತ್ತು ಎಂದು ವರದಿಯಾಗಿದೆ.

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನ ಉಪನಗರದಲ್ಲಿ ಹೊಸದಾಗಿ ನಿರ್ಮಿಸಲಾದ BAPS ಹಿಂದೂ ದೇವಸ್ಥಾನದ ಉದ್ಘಾಟನಾ ಸಮಾರಂಭದ ಅಂಗವಾಗಿ, ಶನಿವಾರ ಸುಮಾರು 100 ಜನ BAPS ನಿಯೋಗದ ಸದಸ್ಯರು ಐಫೆಲ್ ಟವರ್‌ಗೆ ಭೇಟಿ ನೀಡಿದ್ದರು. ಈ ಭೇಟಿಯ ವೇಳೆ ಮಹಿಳಾ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು ಪುರುಷರೊಂದಿಗೆ ಅಥವಾ ನಿಯೋಗದವರೊಂದಿಗೆ ಬೆರೆಯದಂತೆ ಮಿತಿಗೊಳಿಸಲು ಮತ್ತು ಅವರ ಜಾಗದಲ್ಲಿ ಪುರುಷ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿತ್ತು ಎನ್ನಲಾಗಿದೆ. ಲಿಂಗ ಆಧಾರದ ಮೇಲೆ ಮಹಿಳಾ ಸಿಬ್ಬಂದಿಯನ್ನು ಬದಿಗೊತ್ತಿ ಈ ರೀತಿ ಅವಮಾನಿಸಿರುವುದನ್ನು ವಿರೋಧಿಸಿ ಟವರ್‌ನ ಸಿಬ್ಬಂದಿ ಯೂನಿಯನ್‌ಗಳು ಸೋಮವಾರ ಬೆಳಗ್ಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಹೂಡಿದರು. ದಿನವೂ ಸಾವಿರಾರೂ ಪ್ರವಾಸಿಗರಿಂದ ತುಂಬಿತುಳುಕುತ್ತಿದ್ದ ಐಫೆಲ್‌ ಟವರ್‌ ಸೋಮವಾರ ಪ್ರವಾಸಿಗರಿಲ್ಲದೆ ಸಂಪೂರ್ಣ ಶಾಂತವಾಗಿತ್ತು.

ಎಸ್‌ಇಟಿಇ(SETE) ಕಂಪನಿ ಪ್ರತಿಕ್ರಿಯೆ

ಪ್ಯಾರಿಸ್‌ನ ಪ್ರಸಿದ್ಧ ಸ್ಮಾರಕದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಎಸ್‌ಇಟಿಇ ಇದಕ್ಕೆ ಪ್ರತಿಕ್ರಿಯಿಸಿದ್ದು, ʼಹಿಂದೂ ನಿಯೋಗವು ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಡುವಂತೆ ಹೇಳಿರುವುದು ಸತ್ಯʼ ಎಂದು ಒಪ್ಪಕೊಂಡಿದೆ. ಈ ಷರತ್ತುಗಳನ್ನು ಎಸ್‌ಇಟಿಇ ಮೌಲ್ಯಗಳಿಗೆ ಹಾಗೂ ಲಿಂಗ ಸಮಾನತೆಯ ತತ್ವಗಳಿಗೆ ಅನುಗುಣವಾಗಿರಿಲ್ಲಾ ಇದರ ಪರಿಣಾಮಗಳನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಕಂಪನಿ ತಿಳಿಸಿದೆ.

ಬಿಎಪಿಎಸ್ ಸ್ಪಷ್ಟನೆ ಏನು?

ದೇವಾಲಯದ ಉದ್ಘಾಟನೆಗೆ ಬಂದಿದ್ದ ಬಿಎಪಿಎಸ್ ಸಂಸ್ಥೆಯು ಸ್ಪಷ್ಟನೆ ನೀಡಿ, ʼನಿಯೋಗ ದೊಡ್ಡದಾಗಿದ್ದರಿಂದ ಇತರ ಪ್ರವಾಸಿಗರಿಗೆ ತೊಂದರೆಯಾಗಬಾರದೆಂದು ಬೆಳಗ್ಗೆಯೇ ಭೇಟಿ ನೀಡಲಾಗಿತ್ತು. ಯಾರನ್ನೂ ದೂರವಿಡುವ ಉದ್ದೇಶವಿರಲಿಲ್ಲ, ಈ ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದು ಹೇಳಿದೆ.

ಪ್ಯಾರಿಸ್ ನಾಯಕರ ಆಕ್ರೋಶ

ಈ ಘಟನೆ ಪ್ಯಾರಿಸ್‌ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಪ್ಯಾರಿಸ್ ಮೇಯರ್ ಇಮ್ಯಾನುಯೆಲ್ ಗ್ರೆಗೊಯಿರ್ ಮತ್ತು ನ್ಯಾಷನಲ್ ಅಸೆಂಬ್ಲಿ ಅಧ್ಯಕ್ಷೆ ಯಾಲ್ ಬ್ರೌನ್-ಪಿವೆಟ್ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್‌ನಲ್ಲಿ ಯಾವುದೇ ಧರ್ಮ, ನಂಬಿಕೆ ಅಥವಾ ಸಂಸ್ಕೃತಿಯು ದೇಶದ ಕಾನೂನು ಮತ್ತು ಮಹಿಳೆಯರ ಸಮಾನತೆಯ ಹಕ್ಕಿಗಿಂತ ಮೇಲಲ್ಲ. ನಮ್ಮ ನೆಲದಲ್ಲಿ ಮಹಿಳೆಯರು ತಮ್ಮ ಅಸ್ತಿತ್ವವನ್ನು ಅಳಿಸಿಕೊಳ್ಳುವ ಪರಿಸ್ಥಿತಿ ಎಂದಿಗೂ ಬರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅತಿಥಿಗಳನ್ನು ಗೌರವಿಸುವುದು ಎಂದರೆ ಮಹಿಳೆಯರ ಘನತೆ ಮತ್ತು ಗಣರಾಜ್ಯದ ಸಂವಿಧಾನಬದ್ಧ ತತ್ವಗಳನ್ನು ಬಲಿಕೊಡುವುದಲ್ಲ ಎಂದು ಹಲವು ಸಂಸದರು ಪ್ರತಿಪಾದಿಸಿದ್ದು, ಪ್ರಸ್ತುತ ಪರಿಸ್ಥಿತಿ ತಿಳಿಗೊಂಡ ಬಳಿಕ ಮಂಗಳವಾರದಿಂದ ಗೋಪುರವನ್ನು ಮತ್ತೆ ತೆರೆಯಲು ನಿರ್ಧರಿಸಲಾಗಿದೆ.

57 ವರ್ಷಗಳ ಹಿಂದೂ-ಮುಸ್ಲಿಂ ಜಂಟಿ ಜನ್ಮಾಷ್ಟಮಿ ಆಚರಣೆಗೆ ಬಂಗಾಳದಲ್ಲಿ ಬ್ರೇಕ್; ಈ ಬಾರಿ ಹಿಂದೂಗಳಷ್ಟೇ ಭಾಗಿ!

ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಂಪ್ರದಾಯ ಮತ್ತು ಆಧುನಿಕ ಸಮಾನತೆಯ ಮೌಲ್ಯಗಳು ನಡುವಿನ ಸಂಘರ್ಷವನ್ನು ಮತ್ತೆ ಮುನ್ನೆಲೆಗೆ ತಂದಿದೆ. ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾದ ಐಫೆಲ್‌ ಟವರ್‌ ಕೇವಲ ಪ್ರವಾಸಿ ತಾಣವಷ್ಟೇ ಅಲ್ಲ, ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಕೇತವಾಗಿದೆ ಎಂದು ಸ್ಥಳೀಯ ಸಂಘಟನೆಗಳು ಪ್ರತಿಪಾದಿಸಿದವು. ವರದಿಗಳ ಪ್ರಕಾರ ವರ್ಷಕ್ಕೆ ಸುಮಾರು 70 ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಐಫೆಲ್‌ ಟವರ್‌ ಸೋಮವಾರ ಇಡೀ ದಿನ ಮುಚ್ಚಲ್ಪಟ್ಟಿತ್ತು, ಆದರೆ ಮಂಗಳವಾರದಿಂದ ಎಂದಿನಂತೆ ಮತ್ತೆ ತೆರದಿರುತ್ತದೆ ಎಂದು ಮೂಲಗಳು ತಿಳಿಸಿವೆ .