Donald Trump: "ಇಸ್ಲಾಮಿಕ್ ಭಯೋತ್ಪಾನೆಯನ್ನು ಕಿತ್ತೆಸೆಯಬೇಕು"; ಸಿಡ್ನಿ ಗುಂಡಿನ ದಾಳಿ ಖಂಡಿಸಿದ ಟ್ರಂಪ್
ಶ್ವೇತಭವನದ ಹನುಕ್ಕಾ ಸ್ವಾಗತ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೂಲಭೂತವಾದಿ ಇಸ್ಲಾಂ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವಂತೆ ರಾಷ್ಟ್ರಗಳಿಗೆ ಕರೆ ನೀಡಿದರು. ಎಲ್ಲಾ ರಾಷ್ಟ್ರಗಳು ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯ ದುಷ್ಟ ಶಕ್ತಿಗಳ ವಿರುದ್ಧ ಒಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ -
ವಾಷಿಂಗ್ಟನ್: ಶ್ವೇತಭವನದ ಹನುಕ್ಕಾ ಸ್ವಾಗತ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (Donald Trump) ಮೂಲಭೂತವಾದಿ ಇಸ್ಲಾಂ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವಂತೆ ರಾಷ್ಟ್ರಗಳಿಗೆ ಕರೆ ನೀಡಿದರು. ಎಲ್ಲಾ ರಾಷ್ಟ್ರಗಳು ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯ ದುಷ್ಟ ಶಕ್ತಿಗಳ ವಿರುದ್ಧ ಒಟ್ಟಾಗಿ ನಿಲ್ಲಬೇಕು, ಮತ್ತು ನಾವು ಅದನ್ನೇ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದ ಯಹೂದಿಗಳ ಮೇಲಿನ ಭಯೋತ್ಪಾದಕ ದಾಳಿಯ ಬಳಿಕ ಟ್ರಂಪ್‌ರಿಂದ ಈ ಹೇಳಿಕೆಗಳು ಬಂದಿವೆ. ಯಹೂದಿ ರಜಾದಿನವು ಡಿಸೆಂಬರ್ 14 ರಂದು ಪ್ರಾರಂಭವಾಯಿತು ಮತ್ತು ಡಿಸೆಂಬರ್ 22 ರವರೆಗೆ ನಡೆಯುತ್ತದೆ. ಸ್ವಾಗತ ಸಮಾರಂಭವು EST ಸಮಯ ರಾತ್ರಿ 8:15 ಕ್ಕೆ ಪ್ರಾರಂಭವಾಗಲಿದೆ.
ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಇತ್ತೀಚೆಗೆ ಯಹೂದಿ ಸಭೆ ಮೇಲೆ ನಡೆದ ಗುಂಡಿನ ದಾಳಿಯ ಶಂಕಿತ ಉಗ್ರರಲ್ಲಿ ಒಬ್ಬನಾದ ಸಾಜಿದ್ ಅಕ್ರಮ್ ಹೈದರಾಬಾದ್ ಮೂಲದವ ಎಂದು ತಿಳಿದು ಬಂದಿದೆ. ಹೈದರಾಬಾದ್‌ನಲ್ಲಿ ಬಿ.ಕಾಂ. ವಿದ್ಯಾಭ್ಯಾಸ ಮುಗಿಸಿದ ಸಾಜಿದ್ ಅಕ್ರಮ್, ನವೆಂಬರ್ 1998 ರಲ್ಲಿ ಉದ್ಯೋಗವನ್ನು ಹುಡುಕಿಕೊಂಡು ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ. ಸಾಜಿದ್ ಅಕ್ರಮ್ ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲೆಸುವ ಮುನ್ನಾ ಯುರೋಪಿಯನ್ ಮೂಲದ ಮಹಿಳೆ ವೆನೆರಾ ಗ್ರೊಸೊ ಅವರನ್ನು ವಿವಾಹವಾಗಿದ್ದ.
ಯಹೂದಿಗಳಲ್ಲಿ ಭೀತಿ ಮೂಡಿಸಲು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮಂಗಳವಾರ ಈ ಜೋಡಿ "ದ್ವೇಷದ ಸಿದ್ಧಾಂತ"ದಿಂದ ಈ ದಾಳಿ ನಡೆಸಿದ್ದಾರೆ ಎಂದು ಸುಳಿವು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದು ಇಸ್ಲಾಮಿಕ್ ಸ್ಟೇಟ್ISIS ಸಿದ್ಧಾಂತದಿಂದ ಪ್ರೇರಿತರಾಗದ್ದಾರೆ ಎಂದು ತೋರುತ್ತದೆ" ಎಂದು ಅಲ್ಬನೀಸ್ ತಿಳಿಸಿದ್ದಾರೆ.
ಗುಂಡಿನ ದಾಳಿಯ ನಂತರ ಬೀಚ್ ಬಳಿ ನಿಂತಿದ್ದ ನವೀದ್ ಅಕ್ರಮ್ ಹೆಸರಿನಲ್ಲಿ ನೋಂದಾಯಿಸಲಾದ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸುಧಾರಿತ ಬಾಂಬ್‌ಗಳು ಮತ್ತು ಮನೆಯಲ್ಲಿ ತಯಾರಿಸಿದ ಐಸಿಸ್ ಎರಡು ಧ್ವಜಗಳು ಕಾರಿನಲ್ಲಿ ಸಿಕ್ಕಿವೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಯನ್ ಮಂಗಳವಾರ ತಿಳಿಸಿದ್ದಾರೆ.