ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮತ್ತೊಂದು ಏರ್‌ ಇಂಡಿಯಾ ವಿಮಾನ ಅಪಘಾತ; ಲ್ಯಾಂಡಿಂಗ್ ವೇಳೆ ನೋಸ್‌ ವ್ಹೀಲ್‌ ಸಮಸ್ಯೆ: ತಪ್ಪಿದ ಭಾರಿ ಅನಾಹುತ

Air India Express hard landing: ಹೈದರಾಬಾದ್‌ನಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಥೈಲ್ಯಾಂಡ್‍ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ನೋಸ್‌ ವ್ಹೀಲ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಭಾರಿ ಅನಾಹುತ ತಪ್ಪಿದೆ. ಬಳಿಕ ವಿಮಾನದಲ್ಲಿದ್ದ 133 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು.

ಲ್ಯಾಂಡಿಂಗ್ ವೇಳೆ ಕಳಚಿದ  ಏರ್ ಇಂಡಿಯಾ ವಿಮಾನದ ಚಕ್ರ

ಲ್ಯಾಂಡಿಂಗ್ ವೇಳೆ ನೋಸ್ ವ್ಹೀಲ್ ಕಳೆದುಕೊಂಡ ಏರ್ ಇಂಡಿಯಾ ಎಕ್ಸ್‌ಪ್ರೆಸ್ -

Priyanka P
Priyanka P Mar 11, 2026 3:57 PM

ಬ್ಯಾಂಕಾಕ್, ಮಾ.11: ಮತ್ತೊಂದು ಭಾರಿ ಏರ್‌ ಇಂಡಿಯಾ ವಿಮಾನವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಹೈದರಾಬಾದ್‌ನಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನವು ಥೈಲ್ಯಾಂಡ್‍ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Phuket International Airport) ಕಠಿಣ ಲ್ಯಾಂಡಿಂಗ್‌ ನಡೆಸಿದೆ. ಪರಿಣಾಮ ವಿಮಾನದ ಮುಂಭಾಗದ ಲ್ಯಾಂಡಿಂಗ್ ಗೇರ್‌ಗೆ ಹಾನಿಯಾಗಿದೆ. ಇದರಿಂದ ಅಧಿಕಾರಿಗಳು ರನ್‌ವೇ ಅನ್ನು ಸುಮಾರು ಆರು ಗಂಟೆಗಳ ಕಾಲ ಮುಚ್ಚಬೇಕಾಗಿದೆ.

IX938 ವಿಮಾನದಲ್ಲಿದ್ದ 133 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಘಟನೆಯ ನಂತರ ಪರಿಶೀಲನೆ ಮತ್ತು ಸ್ವಚ್ಛತೆ ಕಾರ್ಯಗಳನ್ನು ನಡೆಸಲು ರನ್‌ವೇಯನ್ನು ಸ್ಥಳೀಯ ಸಮಯ ಸಂಜೆ ಸುಮಾರು 6 ಗಂಟೆಯವರೆಗೆ ಮುಚ್ಚಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿದೆ ದೃಶ್ಯಾವಳಿ:



ವರದಿಗಳ ಪ್ರಕಾರ, ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ನೋಸ್ ಲ್ಯಾಂಡಿಂಗ್ ಗೇರ್ ಹಾನಿಗೊಳಗಾಗಿದ್ದು, ಇದರ ಪರಿಣಾಮವಾಗಿ ರನ್‌ವೇಯಲ್ಲಿ ಕಠಿಣವಾದ ಸ್ಪರ್ಶ ಸಂಭವಿಸಿದೆ. ತಂಡಗಳು ಪರಿಸ್ಥಿತಿಯನ್ನು ನಿರ್ಣಯಿಸಿ ಮುಂದಿನ ವಿಮಾನಗಳಿಗೆ ರನ್‌ವೇ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವವರೆಗೆ ವಿಮಾನ ನಿಲ್ದಾಣದ ಅಧಿಕಾರಿಗಳು ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಹೈದರಾಬಾದ್-ಫುಕೆಟ್ ವಿಮಾನವು ಫುಕೆಟ್ ವಿಮಾನ ನಿಲ್ದಾಣದಲ್ಲಿ ಮುಂಭಾಗದ ಚಕ್ರ ಸಮಸ್ಯೆಯನ್ನು ಅನುಭವಿಸಿದೆ. ಆದರೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.

9 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ 78 ಹೆಚ್ಚುವರಿ ವಿಮಾನ ಸೇವೆ ಆರಂಭಿಸಿದ ಏರ್ ಇಂಡಿಯಾ

ʼʼಮಾರ್ಚ್ 11ರಂದು ನಮ್ಮ ಹೈದರಾಬಾದ್-ಫುಕೆಟ್ ವಿಮಾನವು, ಫುಕೆಟ್ ವಿಮಾನ ನಿಲ್ದಾಣದಲ್ಲಿ ನೋಸ್‌ ವ್ಹೀಲ್‌ ಸಮಸ್ಯೆಯನ್ನು ಎದುರಿಸಿದೆ. ಸಿಬ್ಬಂದಿ ಎಲ್ಲ ಪ್ರಮಾಣಿತ ಪ್ರೋಟೋಕಾಲ್‌ಗಳನ್ನು ಅನುಸರಿಸಿದರು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ನಮ್ಮ ಪ್ರಯಾಣಿಕರು, ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಎಲ್ಲಾ ಸಂಬಂಧಿತ ವ್ಯಕ್ತಿಗಳ ಸಹಕಾರಕ್ಕೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆʼʼ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನಂತರ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ನೀಡುತ್ತಾ, ನಿಷ್ಕ್ರಿಯಗೊಂಡ ವಿಮಾನವನ್ನು ರನ್‌ವೇಯಿಂದ ಹೊರತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸಂಜೆ 6 ಗಂಟೆಯ ನಂತರ ರನ್‌ವೇ ಮತ್ತೆ ತೆರೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರನ್‌ವೇ ಮುಚ್ಚಿದ ಕಾರಣ ಉಂಟಾದ ಯಾವುದೇ ಅನಾನುಕೂಲತೆಗಾಗಿ ವಿಮಾನ ಯಾನ ಸಂಸ್ಥೆ ಕ್ಷಮೆಯಾಚಿಸಿದೆ.