ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

iran- israel war: ಇರಾನ್‌ಗೆ ಮತ್ತೊಂದು ತೀವ್ರ ಹೊಡೆತ, ವಿಮಾನ ದಾಳಿಯಲ್ಲಿ ನೂತನ ರಕ್ಷಣಾ ಸಚಿವ ಹತ್ಯೆ

​ಕಳೆದ ಶನಿವಾರ (ಫೆಬ್ರವರಿ 28, 2026) ನಡೆದ ಮೊದಲ ಹಂತದ ದಾಳಿಯಲ್ಲಿ ಇರಾನ್‌ನ ಮಾಜಿ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಅವರು ಹತರಾಗಿದ್ದರು. ಈ ಹಿನ್ನೆಲೆಯಲ್ಲಿ, ಸೋಮವಾರವಷ್ಟೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಸಯ್ಯದ್ ಮಜೀದ್ ಅವರನ್ನು ಉಸ್ತುವಾರಿ ರಕ್ಷಣಾ ಸಚಿವರನ್ನಾಗಿ ನೇಮಿಸಿದ್ದರು.

ಇರಾನ್‌ಗೆ ಮತ್ತೊಂದು ಹೊಡೆತ, ವಿಮಾನ ದಾಳಿಯಲ್ಲಿ ನೂತನ ರಕ್ಷಣಾ ಸಚಿವ ಹತ್ಯೆ

ಸಯ್ಯದ್ ಮಜೀದ್ ಇಬ್ನ್ ಅಲ್-ರೇಜಾ -

ಹರೀಶ್‌ ಕೇರ
ಹರೀಶ್‌ ಕೇರ Mar 4, 2026 7:31 AM

ಟೆಹ್ರಾನ್/ವಾಷಿಂಗ್ಟನ್, ಮಾರ್ಚ್‌ 04: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕದ ಜಂಟಿ ಸೇನಾ ಕಾರ್ಯಾಚರಣೆ (iran- israel war) ತೀವ್ರಗೊಂಡಿದ್ದು, ಇರಾನ್‌ನ ನೂತನ ರಕ್ಷಣಾ ಸಚಿವ ಸಯ್ಯದ್ ಮಜೀದ್ ಇಬ್ನ್ ಅಲ್-ರೇಜಾ (Seyed Majid Ebn Al-Reza) ಅವರು ವೈಮಾನಿಕ ದಾಳಿಯಲ್ಲಿ (air strike) ಹತ್ಯೆಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

​ಕಳೆದ ಶನಿವಾರ (ಫೆಬ್ರವರಿ 28, 2026) ನಡೆದ ಮೊದಲ ಹಂತದ ದಾಳಿಯಲ್ಲಿ ಇರಾನ್‌ನ ಮಾಜಿ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಅವರು ಹತರಾಗಿದ್ದರು. ಈ ಹಿನ್ನೆಲೆಯಲ್ಲಿ, ಸೋಮವಾರವಷ್ಟೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಸಯ್ಯದ್ ಮಜೀದ್ ಅವರನ್ನು ಉಸ್ತುವಾರಿ ರಕ್ಷಣಾ ಸಚಿವರನ್ನಾಗಿ ನೇಮಿಸಿದ್ದರು. ಆದರೆ, ಅಧಿಕಾರ ವಹಿಸಿಕೊಂಡ ಎರಡೇ ದಿನಗಳಲ್ಲಿ ಅವರು ಕೂಡ ಇಸ್ರೇಲ್‌ನ ದಾಳಿಗೆ ಬಲಿಯಾಗಿರುವುದು ಇರಾನ್ ಆಡಳಿತಕ್ಕೆ ಅರಗಿಸಿಕೊಳ್ಳಲಾಗದ ಹೊಡೆತ ನೀಡಿದೆ.

​ಇಸ್ರೇಲ್‌ನ ‘ಆಪರೇಷನ್ ರೋರಿಂಗ್ ಲಯನ್’ (Operation Roaring Lion) ಮತ್ತು ಅಮೆರಿಕದ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಅಡಿಯಲ್ಲಿ ಟೆಹ್ರಾನ್ ಸೇರಿದಂತೆ ಇರಾನ್‌ನ ಪ್ರಮುಖ ನಗರಗಳ ಮೇಲೆ ನಿರಂತರ ಬಾಂಬ್ ದಾಳಿ ನಡೆಸಲಾಗುತ್ತಿದೆ. ಈ ದಾಳಿಯಲ್ಲಿ ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್‌ಗಳು ಮತ್ತು ರಕ್ಷಣಾ ಇಲಾಖೆಯ ಪ್ರಮುಖ ಕಚೇರಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ.

Iran-Israel War: ಇಸ್ರೇಲ್‌-ಇರಾನ್‌ ಯುದ್ಧ; ಗಲ್ಫ್‌ ರಾಷ್ಟ್ರಗಳಿಗೆ ಬೆಂಗಳೂರು, ಮಂಗಳೂರಿನಿಂದ ವಿಮಾನಗಳ ಹಾರಾಟ ರದ್ದು