ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೀನಾಕ್ಕೆ ಶಾಕ್ ನೀಡಿದ ನೇಪಾಳ ಪ್ರಧಾನಿ ಬಾಲೆನ್ ಶಾ: ಮೊದಲ ವಿದೇಶಿ ಭೇಟಿಗೆ ಭಾರತ ಆಯ್ಕೆ

ನೇಪಾಳದ ನೂತನ ಪ್ರಧಾನಿ ಬಾಲೆನ್ ಶಾ ಅವರು ಪ್ರಧಾನಿಯಾಗ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ದ್ವಿಪಕ್ಷೀಯ ವಿದೇಶಿ ಪ್ರವಾಸಕ್ಕಾಗಿ ಚೀನಾ ಬದಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವೆಂಬರ್ ತಿಂಗಳಲ್ಲಿ ಅವರು ನವದೆಹಲಿಗೆ ಅಧಿಕೃತ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ನೇಪಾಳ ಪ್ರಧಾನಿ  ಮೊದಲ ಅಧಿಕೃತ ವಿದೇಶಿ ಪ್ರವಾಸಕ್ಕೆ ಭಾರತ ಫಿಕ್ಸ್‌

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 15, 2026 6:52 PM

ಕಠ್ಮಂಡು: ರಾಜತಾಂತ್ರಿಕ ಸಂಬಂಧಗಳಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ನೇಪಾಳದ (Nepal) ನೂತನ ಪ್ರಧಾನಿ ಬಾಲೆನ್‌ ಶಾ (Balen Shah) ತಮ್ಮ ಮೊದಲ ದ್ವಿಪಕ್ಷೀಯ ವಿದೇಶಿ ಪ್ರವಾಸಕ್ಕಾಗಿ ಚೀನಾ ಬದಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವೆಂಬರ್ ತಿಂಗಳ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಅವರು ನವದೆಹಲಿಗೆ ಅಧಿಕೃತ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

ನೇಪಾಳದಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಾಲೆನ್‌ ಶಾ ವಿದೇಶಗಳಿಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಪ್ರವಾಸ ಇದಾಗಿದ್ದು, ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ಭೇಟಿಯ ಸಿದ್ಧತೆಗಳ ಕುರಿತು ಉಭಯ ದೇಶಗಳ ಹಿರಿಯ ಅಧಿಕಾರಿಗಳು ಮತ್ತು ಸಚಿವರು ಈಗಾಗಲೇ ಸಮಾಲೋಚನೆಗಳನ್ನು ಆರಂಭಿಸಿದ್ದಾರೆ.

ಚೀನಾ ಬದಲು ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದು, ಏಕೆ?

ಇತ್ತೀಚೆಗೆ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಭಾರತ ತಕ್ಷಣವೇ 140 ಟನ್‌ಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿ ನೆರವಾಗಿತ್ತು. ಪ್ರಸ್ತುತ ಪುನರ್ನಿರ್ಮಾಣಕ್ಕೆ ಭಾರತದ ಆರ್ಥಿಕ ನೆರವು ನೇಪಾಳಕ್ಕೆ ಅತ್ಯಗತ್ಯವಾಗಿದೆ. ಮಾರ್ಚ್‌ನಲ್ಲಿ ಬಾಲೇನ್ ಶಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿ, ನವದೆಹಲಿಗೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ನೀಡಿದ್ದರು.

ಭೇಟಿಯ ಪ್ರಮಖ ಉದ್ದೇಶವೇನು?

ಈ ಉನ್ನತ ಮಟ್ಟದ ಭೇಟಿಯಲ್ಲಿ ದ್ವಿಪಕ್ಷೀಯ ಹಿತಾಸಕ್ತಿ ಹಾಗೂ ಆರ್ಥಿಕ ಸಹಕಾರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಗೆ ಬರಲಿವೆ. ಜಲವಿದ್ಯುತ್ ಯೋಜನೆಗಳಿಗೆ ಒತ್ತು ನೀಡುವ ಸಾಧ್ಯತೆ. ಭಾರತ ಸರ್ಕಾರದ ಒಡೆತನದ ಎನ್‌ಎಚ್‌ಪಿಸಿ ಮುಂಚೂಣಿಯಲ್ಲಿರುವ ಪ್ರಮುಖ ಜಲವಿದ್ಯುತ್ ಯೋಜನೆಗಳಾದ 750 ಮೆಗಾವ್ಯಾಟ್‌ನ ವೆಸ್ಟ್ ಸೆಟಿ ಮತ್ತು450 ಮೆಗಾವ್ಯಾಟ್‌ನ ಸೆಟಿ ನದಿ-6 ಯೋಜನೆಗಳ ಕುರಿತು ಅಂತಿಮ ಒಪ್ಪಂದ ಹಾಗೂ ಪ್ರಗತಿ ಪರಿಶೀಲನೆ ನಡೆಯಲಿದೆ. ಜತೆಗೆ ಗಡಿ ದಾಟಿದ ವಿದ್ಯುತ್ ವ್ಯಾಪಾರದ ವಿಸ್ತರಣೆಗೂ ಒತ್ತು ನೀಡಲಾಗುತ್ತದೆ.

ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ ಭಾರತ ಸರ್ಕಾರವು ತಕ್ಷಣವೇ ಸ್ಪಂದಿಸಿ 130 ಟನ್‌ಗಳಿಗೂ ಅಧಿಕ ಪರಿಹಾರ ಸಾಮಗ್ರಿಗಳು ಹಾಗೂ ರಕ್ಷಣಾ ತಂಡಗಳನ್ನು ಕಳುಹಿಸಿಕೊಟ್ಟಿತ್ತು. ಈ ಮಾನವೀಯ ನೆರವಿಗೆ ಪ್ರಧಾನಿ ಬಾಲೆನ್ ಶಾ ಅವರು ವಿಶ್ವಸಂಸ್ಥೆಯ ಮಹಾಸಭೆಯಲ್ಲೂ ಭಾರತಕ್ಕೆ ಬಹಿರಂಗವಾಗಿ ಧನ್ಯವಾದ ತಿಳಿಸಿದ್ದರು. ಪ್ರವಾಸದ ವೇಳೆ ಈ ವಿಪತ್ತು ನಿರ್ವಹಣೆ ಹಾಗೂ ಮೂಲಸೌಕರ್ಯ ಮರುನಿರ್ಮಾಣಕ್ಕೆ ಆರ್ಥಿಕ ನೆರವಿನ ಕುರಿತು ಚರ್ಚೆ ನಡೆಯಲಿದೆ.

ಪ್ರವಾಹಕ್ಕೆ ಮತ್ತೆ ತತ್ತರಿಸಿದ ನೇಪಾಳ: ಉಕ್ಕಿ ಹರಿದ ಬುಧಿ ಗಂಡಕಿ ನದಿ; ಕೊಚ್ಚಿ ಹೋದ 35ಕ್ಕೂ ಹೆಚ್ಚು ಮನೆಗಳು

ಭಾರತದ ಆರ್ಥಿಕ ನೆರವಿನೊಂದಿಗೆ ನೇಪಾಳದಲ್ಲಿ ನಿರ್ಮಿಸಲಾಗಿರುವ ಪನೌತಿಯ ನೇಪಾಳ ಪೊಲೀಸ್ ಅಕಾಡೆಮಿ ಉದ್ಘಾಟನೆ, ಸುನೌಲಿ ಹಾಗೂ ಧೋಧಾರಾ ಚಾಂದನಿ ಸಮೀಪದ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಲೋಕಾರ್ಪಣೆ ಮತ್ತು ಕೋಶಿ ನದಿ ಯೋಜನೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಜತೆಗೆ ಅಯೋಧ್ಯೆ, ಜನಕಪುರ ರೈಲು ಮಾರ್ಗ ಯೋಜನೆ ಮತ್ತು ಗಡಿ ವಿವಾದಗಳಾದ ಕಾಲಾಪಾನಿ,ಲಿಪುಲೇಖ್ ವಿಚಾರಗಳ ಬಗ್ಗೆಯೂ ಸೌಹಾರ್ದಯುತ ಚರ್ಚೆ ನಿರೀಕ್ಷಿಸಲಾಗಿದೆ.