ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್ ದಾಳಿಯಿಂದ ಕತಾರ್ ಎಲ್‌ಎನ್‌ಜಿ ರಫ್ತಿಗೆ ಅಡ್ಡಿ: ಭಾರತ ಸೇರಿ ಹಲವು ರಾಷ್ಟ್ರಗಳ ಕಾಡಲಿದ್ಯಾ ಇಂಧನ ಕೊರತೆ? ಇಂಧನ ಕೊರತೆ?

ಇರಾನ್ ಕ್ಷಿಪಣಿ ದಾಳಿಯಿಂದ ಕತಾರ್‌ನ ರಾಸ್ ಲಫ್ಫಾನ್ LNG ಘಟಕಗಳಿಗೆ ಭಾರಿ ಹಾನಿಯಾಗಿದ್ದು, ಅನಿಲ ರಫ್ತು ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಭಾರತ ಸೇರಿದಂತೆ ಏಷ್ಯಾ ಮತ್ತು ಯುರೋಪ್ ದೇಶಗಳಲ್ಲಿ ಇಂಧನ ಸಂಕಷ್ಟ ಭೀತಿ ಹೆಚ್ಚಿದೆ.

ಇರಾನ್ ದಾಳಿ; ಭಾರತಕ್ಕೆ ಇಂಧನ ಕೊರತೆ ಭೀತಿ

ನೈಸರ್ಗಿಕ ಅನಿಲ -

Profile
Sushmitha Jain Mar 20, 2026 10:15 PM

ನವದೆಹಲಿ, ಮಾ. 20: ನೆರೆಯ ರಾಷ್ಟ್ರಗಳ ಮೇಲೆ ಇರಾನ್ (Iran) ನಡೆಸಿದ ಕ್ಷಿಪಣಿ ದಾಳಿಯಿಂದಾಗಿ ಕತಾರ್‌ನ ಸುಮಾರು ಶೇಕಡಾ 17ರಷ್ಟು ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಸಾಮರ್ಥ್ಯಕ್ಕೆ ಧಕ್ಕೆಯಾಗಿದೆ. ಇದರಿಂದಾಗಿ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್ ಆದಾಯ ನಷ್ಟವಾಗುವ ಅಂದಾಜಿದೆ ಎಂದು ಕತಾರ್ ಎನರ್ಜಿ ಸಿಇಒ ಮತ್ತು ಇಂಧನ ಸಚಿವ ಸಾದ್ ಅಲ್-ಕಾಬಿ ತಿಳಿಸಿದ್ದಾರೆ. ದಾಳಿಯಿಂದ ಹಾನಿಗೊಳಗಾದ ಮೂಲಸೌಕರ್ಯಗಳ ದುರಸ್ತಿಗೆ ಕನಿಷ್ಠ 3 ರಿಂದ 5 ವರ್ಷಗಳು ಬೇಕಾಗಬಹುದು. ಇದರಿಂದಾಗಿ ಪ್ರತಿ ವರ್ಷ 12.8 ಮಿಲಿಯನ್ ಟನ್ ಎಲ್‌ಎನ್‌ಜಿ ಉತ್ಪಾದನೆ ಸ್ಥಗಿತಗೊಳ್ಳಲಿದ್ದು, ಯುರೋಪ್ ಮತ್ತು ಏಷ್ಯಾದ ರಾಷ್ಟ್ರಗಳಾದ ಚೀನಾ ಹಾಗೂ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.

ಕತಾರ್‌ನ 14 ಎಲ್‌ಎನ್‌ಜಿ ಘಟಕಗಳಲ್ಲಿ ಎರಡು ಮತ್ತು ಅನಿಲದಿಂದ ದ್ರವ ರೂಪಕ್ಕೆ ಬದಲಿಸುವ (GTL) ಒಂದು ಪ್ರಮುಖ ಘಟಕಕ್ಕೆ ತೀವ್ರ ಹಾನಿಯಾಗಿದೆ. ಮುಸ್ಲಿಂ ರಾಷ್ಟ್ರಗಳ ಪವಿತ್ರ ರಂಜಾನ್ ಮಾಸದಲ್ಲೇ ಇರಾನ್ ಇಂತಹ ದಾಳಿ ನಡೆಸುತ್ತದೆ ಎಂದು ತಾವು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಅಲ್-ಕಾಬಿ ವಿಷಾದ ವ್ಯಕ್ತಪಡಿಸಿದ್ದಾರೆ.

ಕತಾರ್‌ನ ಎಲ್‌ಎನ್‌ಜಿ ಘಟಕದ ಮೇಲೆ ದಾಳಿ:



ಜಾಗತಿಕ ಪರಿಣಾಮಗಳು

ಕತಾರ್ ಎನರ್ಜಿ ಈಗಾಗಲೇ ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಮತ್ತು ಚೀನಾ ದೇಶಗಳೊಂದಿಗೆ ಮಾಡಿಕೊಂಡಿರುವ ದೀರ್ಘಕಾಲದ ಒಪ್ಪಂದಗಳ ಮೇಲೆ 'ಫೋರ್ಸ್ ಮೆಜರ್' (ಅನಿವಾರ್ಯ ಪರಿಸ್ಥಿತಿಯಿಂದ ಒಪ್ಪಂದ ಪೂರೈಸಲು ಅಸಾಧ್ಯತೆ) ಘೋಷಿಸಿದೆ. ಇಸ್ರೇಲ್ ತನ್ನ ಅನಿಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ ಸೇಡಿನ ಹಿನ್ನೆಲೆಯಲ್ಲಿ ಇರಾನ್ ಈ ದಾಳಿ ನಡೆಸಿದೆ. ಬುಧವಾರ ಕತಾರ್‌ನ ಅತಿದೊಡ್ಡ ಎಲ್‌ಎನ್‌ಜಿ ಪ್ಲಾಂಟ್ ಆಗಿರುವ ರಾಸ್ ಲಫ್ಫಾನ್ ಮೇಲೆ ನಡೆದ ದಾಳಿಯಿಂದಾಗಿ ಸಂಪೂರ್ಣ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

11 ವಾಯುಪ್ರದೇಶ ತಪ್ಪಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಸೂಚನೆ

ಭಾರತದ ಮೇಲಾಗುವ ಪರಿಣಾಮ

ಭಾರತವು ತನ್ನ ಒಟ್ಟು ನೈಸರ್ಗಿಕ ಅನಿಲದ ಅಗತ್ಯದ ಸುಮಾರು ಶೇಕಡಾ 20ರಷ್ಟು ಪಾಲನ್ನು ಕತಾರ್‌ನಿಂದಲೇ ಆಮದು ಮಾಡಿಕೊಳ್ಳುತ್ತದೆ. ಈ ಬಿಕ್ಕಟ್ಟಿನಿಂದಾಗಿ ಭಾರತದ ಹೋಟೆಲ್ ಉದ್ಯಮದಲ್ಲಿ ಬಳಸುವ ಎಲ್‌ಪಿಜಿ ಮತ್ತು ದಕ್ಷಿಣ ಕೊರಿಯಾದ ಚಿಪ್‌ಮೇಕರ್ ಉದ್ಯಮಕ್ಕೆ ಅಗತ್ಯವಿರುವ ಹೀಲಿಯಂ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ. ಹಾನಿಗೊಳಗಾದ ಘಟಕಗಳ ಮೌಲ್ಯ ಸುಮಾರು 26 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಅಮೆರಿಕ ಮೂಲದ ಎಕ್ಸಾನ್ ಮೊಬಿಲ್ ಮತ್ತು ಶೆಲ್ ಕಂಪನಿಗಳು ಇಲ್ಲಿ ಪಾಲುದಾರಿಕೆ ಹೊಂದಿವೆ. ಪ್ರಸ್ತುತ ಈ ಭಾಗದಲ್ಲಿ ಯುದ್ಧದ ಪರಿಸ್ಥಿತಿ ತಿಳಿಯಾಗುವವರೆಗೆ ಯಾವುದೇ ಅಭಿವೃದ್ಧಿ ಅಥವಾ ದುರಸ್ತಿ ಕೆಲಸಗಳು ನಡೆಯುತ್ತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.